1950 ನೇ ಇಸವಿಯ ಒಂದು ಮಧ್ಯಾಹ್ನ ನಮ್ಮ ಇಂದಿನ ನ್ಯೂಕ್ಲಿಯರ್ ರಿಯಾಕ್ಟರುಗಳ, ಅಣುಬಾಂಬುಗಳ ಪಿತಾಮಹ, ಎನ್ನಿಕೊ ಫರ್ಮಿ ತನ್ನ ಸಹೋದ್ಯೋಗಿಗಳೊಂದಿಗೆ ಊಟ ಮಾಡ್ತಾ ಬಾಯ್ತಪ್ಪಿಸೂನ್ ಇತ್ತಿತ್ತಾ ಇದ್ದಿದ್ದೆ ಏನೋ ಹೊಳೆದು ಒಂದು ಪ್ರಶ್ನೆ ಕೇಳಿದ. “Where is everybody?”.
ಅಂದ್ರೆ, “ನಮ್ಮ ಹೊರತು ಉಳಿದವರೆಲ್ಲ ಎಲ್ಲಿದ್ದಾರೆ?,” ನಮ್ಮ ಅಂದ್ರೆ ಭೂಮಿ ಮೇಲಿನ ಮನುಷ್ಯರು. ಇದೊಂದು ಗಾಢವಾದ ವೈಜ್ಞಾನಿಕ ಮತ್ತು ತಾತ್ವಿಕ ಪ್ರಶ್ನೆ. ಆ ಊಟ ಮಾಡ್ತಾ ಎತ್ತಿದ ಪ್ರಶ್ನೆ ಮುಂದೆ ಅನೇಕ ಚಿಂತನೆಗಳಿಗೆ ಕಾರಣವಾಗಿ ಅದೇ ‘ಫರ್ಮಿ ಪ್ಯಾರಡಾಕ್ಸ್’ ಎಂದು ಪ್ರಸಿದ್ಧಿಯಾಯಿತು. ಪ್ಯಾರಡಾಕ್ಸ್ ಎಂದರೆ ಸಾಮಾನ್ಯ ತರ್ಕಕ್ಕೆ ನಿಲುಕದ ವಿರೋಧಾಭಾಸದ ಸ್ಥಿತಿ.
ಇವತ್ತು ರಾತ್ರಿ ಮೇಲೆ ಹತ್ತಿ ಆಕಾಶ ನೋಡಿ. ಬಹುಶಃ ಚಂದ್ರ ಕಾಣಿಸಬಹುದು. ಅದರ ಹಿಂದಿನದು ನೋಡಿ. ಮಿನುಗುವ ಹೊಳೆಯುವ ನಕ್ಷತ್ರಗಳು ಕಾಣಬಹುದು. ಇನ್ನೂ ಸ್ವಲ್ಪ ದೂರ ನೋಡಿ. ತೆಳುವಾಗಿ ಮಿನುಗುವ ನಕ್ಷತ್ರಗಳು ಕಾಣಬಹುದು. ನೋಡ್ತಾ ಹೋಗಿ. ಎಷ್ಟು ಆಳ ನೋಡಬಲ್ಲಿರಿ? ಎಷ್ಟು ದೂರ ನೋಡಬಲ್ಲಿರಿ? ಈ ಆಳಕ್ಕೆ ಅಂತ್ಯ ಇದೆಯೇ? ಪುಟ್ಟ ಗೋಲಿ ಗಾತ್ರದ ಭೂಮಿ ಮೇಲೆ ನಿಂತ ನೀವು; ನಿಮ್ಮೆದುರು ಅನಂತ ಅಬಿಂದ ಅಂತರಿಕ್ಷ; ಈ ಅನ್ವೇಷಣೆಯನ್ನು ಒಳಗಿಸಿಕೊಳ್ಳಿ, ನಿಮ್ಮ ಆತ್ಮ ಕುಗ್ಗುತ್ತದೆ. ಮೌನಕ್ಕೆ ಜಾರುತ್ತದೆ. ಏನು ಸೃಷ್ಟಿಯಪ್ಪ ಇದು, ಅರ್ಥವೇ ಆಗಲ್ಲವಲ್ಲ ಅನ್ಸುತ್ತೆ. ಇದಕ್ಕೆ ಕೊನೆಯೆಂಬುದೇ ಇಲ್ಲವೇ ಎಂಬ ಪ್ರಶ್ನೆ ಏಳುತ್ತೆ. ನೀವು ನೋಡುವ ನೋಡಲಾಗದ ಆ ಪ್ರತಿಯೊಂದು ನಕ್ಷತ್ರವೂ ಇನ್ನೊಂದು ಸೂರ್ಯ ಎಂದಾದರೆ… ಕೋಟಿ ನಕ್ಷತ್ರಗಳ ನಡುವೆ ಅಲ್ಲೆಲ್ಲೋ ಕನಿಷ್ಠ ಒಂದು ಭೂಮಿಯಾದರೂ ಇರಬೇಕಲ್ಲವೇ? ಇದರಿಂದ ಅಲ್ಲಿನಷ್ಟೂ ಜನರು ಇದ್ದಿರಬಹುದಲ್ಲವೇ? ಖಂಡಿತ ಇದ್ದೇ ಇರುತ್ತಾರೆ ಎನಿಸುತ್ತದೆ.
ಹಾಗಿದ್ದ ಮೇಲೆ, ಎಲ್ಲಿದ್ದಾರೆ ಅವರೆಲ್ಲ? ಯಾಕೆ ಈ ದಿವ್ಯ ಮೌನ? ಯಾಕೆ ಇಷ್ಟು ವರ್ಷಗಳಲ್ಲಿ ಇಷ್ಟು ಹುಡುಕಾಟದಲ್ಲಿ ಎಲ್ಲಿಂದಲೂ ಒಂದು ಸಣ್ಣ ಸಿಗ್ನಲ್ ಸಹ ಬಂದಿಲ್ಲವಲ್ಲ? ಯಾಕೆ ಈ ಖಾಲಿತನ, ಒಂಟಿತನ? ನಮಗೇಕೆ ಇಂತಹ ಶಿಕ್ಷೆ? ಒಂದು ವೇಳೆ ಇಲ್ಲಿ ನಾವಷ್ಟೇ ಇದ್ದೇವೆ ಎಂಬುದು ನಿಜವಾದರೆ ಅಯ್ಯೋ ಅದೆಂಥ ದುರ್ವಿಧಿ? ಮರುಭೂಮಿಯ ನಟ್ಟನಡುವಲ್ಲಿ ಒಬ್ಬನೇ ನಡೆದಂತೆ. ಮಹಾಸಾಗರದ ನಡುವೆ ಹಳೆಗೋದರದ ಮೇಲೆ ಒಬ್ಬನೇ ತೇಲುತ್ತಿರುವಂತೆ?
ಇದ್ದೇ ಇರ್ತಾರೆ ಅನ್ನುವಷ್ಟು ಬೃಹತ್ತಾದ ವಿಶ್ವ; ಇದ್ದಾರೆ ಅಂತ ನಂಬಲು ಒಂದು ಸಣ್ಣ ಕುರುಹೂ ಇಲ್ಲದ ವಾಸ್ತವ- ಇದನ್ನೇ ಫರ್ಮಿ ಪ್ಯಾರಡಾಕ್ಸ್ ಎಂದು ಕರೆಯುತ್ತಾರೆ. ಮನುಷ್ಯ ಯಾವುದೇ ವಿಷಯದಲ್ಲಿ ನಿಜಾಂಶ ಕಂಡುಹಿಡಿಯಲು ಕೈಲಾಗದೇ ಹೋದಾಗ ಹೀಗಿದ್ದಿರಬಹುದು ಎಂದು ಸಿದ್ಧಾಂತಗಳನ್ನು ಕಲಿಸಿಕೊಳ್ತಾನೆ.
The great filter ಅಂತ ಒಂದು ಸಿದ್ಧಾಂತ. ಅದೇನು ಹೇಳುತ್ತೆ ಅಂದ್ರೆ ನಮ್ಮನ್ನೂ ಇತರರನ್ನೂ ಸೇರಿಸಿ ವಿಶ್ವದಲ್ಲಿ ಇರಬಹುದಾದ ಎಲ್ಲಾ ಅತ್ಯಂತ ಬುದ್ಧಿವಂತ ಜೀವಿಗಳಿಗೂ ಒಂದು ದಾಟಲಾರದ ಮಿತಿಯಿದ್ದಿರಬಹುದು. ಉದಾಹರಣೆಗೆ ಒಬ್ಬ ವ್ಯಕ್ತಿ ಎಷ್ಟು ಎತ್ತರದ ಗೋಡೆ ಜಿಗಿಯಬಲ್ಲ? ಒಂದು ಹಂತದ ನಂತರ ಆಗಲ್ಲ ಅಲ್ವಾ? ಹಾಗೆ ತಾನು ಎಷ್ಟೇ ಬುದ್ಧಿಶಕ್ತಿ ಗಳಿಸಿದರೂ ಸಹ ಅದೊಂದು ಅದೃಶ್ಯ ಹಾರಲಾಗದ ಗೋಡೆ ಅವನ ಮತ್ತು ಅನ್ಯಗ್ರಹಗಳ ಮಿತಿಯಾಗಿರಬಹುದು. ಆದ್ದರಿಂದ ಇವರು ಪರಸ್ಪರ ಎಂದಿಗೂ ಭೇಟಿಯಾಗದೇ ಉಳಿದುಬಿಡಬಹುದು. ಆಸೆ ಭರವಸೆಯನ್ನೂ ಇಟ್ಟುಕೊಳ್ಳಬೇಡಿ ಎನ್ನುವ ಡಿಸ್ಟೋಪಿಯನ್ (ಭವಿಷ್ಯದ) ಥಿಯರಿ ಇದು.
ಬ್ರಹ್ಮಾಂಡ ಎಷ್ಟ ದೊಡ್ಡದೆಂದರೆ ಇಲ್ಲಿರುವುದು ಒಂದೇ ಭೂಮಿ ಹಾಗೂ ಇಲ್ಲಿ ಮಾತ್ರ ಮನುಷ್ಯರಿದ್ದಾರೆ ಎಂದು ನಂಬುವುದು ಕಷ್ಟ. ಹಾಗಾದರೆ ಯಾಕೆ ಇನ್ನೂ ಸಾಕ್ಷ್ಯ ಸಿಕ್ಕಿಲ್ಲ ಎನ್ನುವ ಕುತೂಹಲವನ್ನು ‘ಫರ್ಮಿ ಪ್ಯಾರಡಾಕ್ಸ್’ ಸಿದ್ಧಾಂತ ಕೆಣಕುತ್ತದೆ.
ಎರಡನೆಯದು rare earth hypothesis. ಬೇರೆ ಭೂಮಿ ಇರಬಹುದು. ಅಲ್ಲಿ ಮೈಕ್ರೋಬು, ಬ್ಯಾಕ್ಟಿರಿಯಾಗಳು, ಪ್ರಾಣಿಗಳೂ ಸಹ ಇದ್ದಿರಬಹುದು. ಆದರೆ ಮನುಷ್ಯನಷ್ಟು ವಿಕಾಸಗೊಳ್ಳುವ ಪೂರಕ ವಾತಾವರಣ ಎಲ್ಲಿಯೂ ಇರದಿರಬಹುದು. ನಮ್ಮ ವಾಯುಮಂಡಲ, ನಮಗೊಂದು ಚಂದ್ರ, ನಮ್ಮನ್ನು ಪೂರೈಸುವ ವಾತಾವರಣ ಇನ್ನೂ ಅನೇಕ ಅಂಶಗಳು ಸೇರಿ ನಮ್ಮ ಭೂಮಿಯೊಂದೇ ನಾವು ಜನಿಸಲು ಅತ್ಯಂತ ವಿಶಿಷ್ಟಹವಾಗಿರಬಹುದು.
ಮೂರನೆಯದು ತಂತ್ರಜ್ಞಾನದ ಮಿತಿಗಳು. ಇದು ಚೆಂದ. ಏನು ಹೇಳುತ್ತೆ ಅಂದ್ರೆ, ಅನ್ಯಗ್ರಹ ಜೀವಿಗಳು ನಮ್ಮೊಂದಿಗೆ ಸಂವಹನ ನಡೆಸಲು ಸಾಕಷ್ಟು ಪ್ರಯತ್ನ ಮಾಡ್ತಿರಬಹುದು. ಆದರೆ ಅವರು ಕೂಗಿದ್ದನ್ನು ಕೇಳಿಸಿಕೊಳ್ಳುವ ತಂತ್ರಜ್ಞಾನವೇ ನಮ್ಮಲ್ಲಿ ಇಲ್ಲದಿರಬಹುದು! ನಮ್ಮ ಕಿವಿಗಳು ರೇಡಿಯೋ ಸಿಗ್ನಲ್ಲುಗಳಿಗೆ ಸೀಮಿತ. ಅವರು ಬೇರೇನೋ ಬಗೆಯ ಸಿಗ್ನಲ್ಲು ಬಳಸುತ್ತಿರಬಹುದು!
ನಾಲ್ಕನೆಯದು self imposed isolation. ಅಂಡಮಾನ್ ನಿಕೋಬಾರಿನ ಒಂದು ದ್ವೀಪದಲ್ಲಿ ಒಂದು ಬುಡಕಟ್ಟು ಜನಾಂಗ ಇದೆ. ನಾಗರಿಕತೆಯ ಸ್ಪರ್ಶವೇ ಇಲ್ಲದ ಬುಡಕಟ್ಟು. ಅವರ ಬಲಿ ನಾವು ಹೋಗಲ್ಲ. ಹೋದರೆ ಬಿಲ್ಲು ಭರ್ಜಿಗಳಿಂದ ಕೊಲ್ಲುತ್ತಾರೆ. ಒಬ್ಬ ಕ್ರಿಸ್ತ ಮಿಷನರಿ ಅಲ್ಲಿಗೆ ಹೋಗಿ ಕೊಲೆಯಾದದ್ದನ್ನು ಸ್ಮರಿಸಬಹುದು. ನಾವು ಅವರಿಂದ ದೂರ ಉಳಿದಂತೆಯೇ ಮುಂದುವರಿದ ನಾಗರಿಕತೆಯ ಅನ್ಯಗ್ರಹ ಜೀವಿಗಳು ನಮ್ಮನ್ನು ಬುಡಕಟ್ಟು ಜನರಂತೆ ನೋಡುತ್ತಾ ನಮ್ಮಿಂದ ದೂರವೇ ಉಳಿದಿರಬಹುದು!
ಐದನೆಯದು dark forest theory. ಈ ವಿಶ್ವ ದಟ್ಟ ಅರಣ್ಯವಿದ್ದಂತೆ. ಇಲ್ಲಿರುವ ಎಲ್ಲರೂ ಒಂದೊಂದು ಬಗೆಯ ಬುಡಕಟ್ಟು ಜನರು. ಕತ್ತಲೆಯಲ್ಲಿ ವಾಸಿಸುತ್ತಿರುವವರು. ಎಲ್ಲರಿಗೂ ಕತ್ತಲೆಯ ಬಗ್ಗೆ ಕಾಡಿನ ಸದ್ದುಗಳ ಬಗ್ಗೆ ಭಯವಿದೆ. ಸಣ್ಣದಾಗಿ ಸರಸರ ಎಂದರೂ ನಡುಗುತ್ತೇವೆ, ಏನೋ ಎತ್ತೋ ಎಂದು. ಹಾಗಾಗಿ ನಾವೆಲ್ಲರೂ ನಮ್ಮ ನಮ್ಮ ಆಯ್ಕೆಯಿಂದಲೇ ಸೈಲೆಂಟಾಗಿದ್ದಿರಬಹುದು.
ಆರನೆಯದು ಇನ್ನೂ ಚಂದ. ನಮ್ಮ ಉಪಕರಣಗಳೇ ತಪ್ಪದು ಇದ್ದಿರಬಹುದು. ಅನ್ಯಗ್ರಹ ಜೀವಿಗಳು ಕಾರ್ಬನ್ ಹೈಡ್ರೋಜನ್ ಹೊಂದಿರುವ ಕಾರ್ಬೋ ಹೈಡ್ರೇಟ್ ಪ್ರಾಣಿಗಳೇ ಅಲ್ಲದಿರಬಹುದು! ಅವರದ್ದೇ ಬೇರೇನೋ ಕೆಮಿಕಲ್ ಕಾಂಪೊಜಿಷನ್ನು ಇದ್ದು ಇಲ್ಲೇ ನಮ್ಮ ಸುತ್ತಮುತ್ತಲೇ ಪಿಶಾಚಿಗಳಂತೆ ಹಾರಾಡುತ್ತಿರಬಹುದು, ಯಾರಿಗೊತ್ತು?
ಫರ್ಮಿಯ ಪ್ರಶ್ನೆಗಿರುವ ತಾತ್ವಿಕ ಮಗ್ಗುಲು ಏನೆಂದರೆ: ಒಂದು ವೇಳೆ ವಿಶ್ವದಲ್ಲಿ ನಾವಷ್ಟೇ ಇರುವುದು ನಿಜವೇ ಆದರೆ ನಾವು ನಮ್ಮನ್ನು ವಿಶೇಷ, ಬ್ರಹ್ಮದಂಡ selected, chosen ಅಂದುಕೊಳ್ಳಬೇಕಾ? ಅಥವಾ ಅಯ್ಯೋ ನಾವಷ್ಟೇ ಇದೀವಲ್ಲ ಇಲ್ಲೊಂದು ಎಂದು ದುಃಖಿಸಬೇಕಾ?
ಅಕಸ್ಮಾತ್ ಒಂದು ಕ್ಷುದ್ರಗ್ರಹ ಬಡಿದು ಡೈನೋಸಾರುಗಳಂತೆ ನಾವೂ ನಿರ್ನಾಮವಾದರೆ, ಅಥವಾ ನಾವೇ ನಮ್ಮ ಭೂಮಿಯನ್ನು ಹಾಳುಗೆಡವಿದರೆ, ಬಾಂಬುಗಳಿಂದಲೋ ವೈರಸ್ಸುಗಳಿಂದಲೋ ನಮ್ಮನ್ನೇ ಕ್ವಾರಂಟೈನ್ ಮಾಡಿಕೊಂಡರೆ- ಈ ವಿಶ್ವ ಏನಾಗುತ್ತದೆ? ಜೀವಿಗಳೇ ಇಲ್ಲದ, ಬೌದ್ಧಿಕತೆಯೇ ಇಲ್ಲದ, ಕೇವಲ ಕಲ್ಲು ಮಣ್ಣುಗಳು ತೇಲುವ ಅಂತರಿಕ್ಷವೊಂದಷ್ಟೇ ಉಳಿಯುತ್ತದೆಯೇ? ಆಯಾ ದೇವರು ಇರುತ್ತಾನೆಯೇ?
ನಿಮ್ಮ ಮಕ್ಕಳಿಗೆ ಇವತ್ತು ರಾತ್ರಿ ಈ ಫರ್ಮಿ ಪ್ಯಾರಡಾಕ್ಸಿನ ಬಗ್ಗೆ ಹೇಳಿ. ಬಹುಶಃ ಅವರ ಜೀವಿತಕಾಲದಲ್ಲಿ ಉತ್ತರ ಕಂಡುಹಿಡಿಯುತ್ತಾರಾ ನೋಡುವ.
