ಎಐ ಬೋಗಸ್ಸಾ? ಭ್ರಮೆಯಾ?

article n5

ಟೆಕ್ ಪೋಸ್ಟ್ | ಮಧು ವೈ. ಎನ್.

ವಾರಗಳ ಹಿಂದೆ ಓಪನ್ ಎಐ ಮುಖ್ಯಸ್ಥ ಸ್ಯಾಮ್ ಅಲ್ಟ್‌ಮನ್ ಒಂದು ಸಂದರ್ಶನದಲ್ಲಿ ‘ಎಐ ಬಬಲ್’ ಎಂಬ ಪದ ಬಳಸಿದ್ದರು. ಇಲ್ಲಿ ಬಬಲ್ ಅಂದರೆ, ನೀರಿನ ಮೇಲಿನ ಗುಳ್ಳೆ. ಇಪ್ಪತ್ತನೇ ಶತಮಾನದ ಅಂತ್ಯದಲ್ಲಿ ಈ ಪದದ ಮೊದಲ ಬಳಕೆಯಾಗಿತ್ತು. ಆಗ ಜರುಗಿದ್ದನ್ನು ಪಂಡಿತರು ‘ಇಂಟರ್‌ನೆಟ್ ಬಬಲ್’ ಅಥವಾ ‘ಡಾಟ್-ಕಾಮ್ ಬಬಲ್’ ಎಂದು ಕರೆದಿದ್ದರು. ಅದು ಇಂಟರ್‌ನೆಟ್ (ಅಂತರ್ಜಾಲ) ಜಗತ್ತಿಗೆ ಪರಿಚಯಗೊಳ್ಳುತ್ತಿದ್ದ ದಿನಗಳು. ಎಲ್ಲಲ್ಲೂ ವೆಬ್‌ಸೈಟ್‌ಗಳು, ಎಲ್ಲದಕ್ಕೂ ವೆಬ್‌ಸೈಟ್‌ಗಳು… ಮಾರುಕಟ್ಟೆ ಸಂಪೂರ್ಣ ಬದಲಾಗಿದೆ, ಜಗತ್ತು ಹೊಸ ಲೋಕಕ್ಕೆ ತೆರೆದುಕೊಳ್ಳಲಿದೆ ಎಂಬ ಆತಂಕ, ಆಶಾಭಾವನೆ ಎರಡೂ. ತತ್ಪರಿಣಾಮ ಆ ವಲಯದಲ್ಲಿ ಹೇರಳವಾದ ಹಣ ಹೂಡಿಕೆ. ಆ ದಿನಗಳಲ್ಲಿ ನೀವೊಂದು ವೆಬ್‌ಸೈಟ್ ತೆರೆದುಕೊಂಡಿದ್ದರೆ ಸಾಕು… ನಿಮ್ಮದೂ ಒಂದು ‘ಸ್ಟಾರ್ಟ್-ಅಪ್’ ಇದ್ದ ಹಾಗೆ. ನೀವೂ ಒಬ್ಬ ಸಿಇಒ..

ಮಾರ್ಕ್ ಝುಕರ್‌ಬರ್ಗ್ ಇದೇ ಮಾತನ್ನು ಅನುಮೋದಿಸಿ ಸುತ್ತಿದ್ದಾರೆ. ಹಾಗಾದರೆ, ಇದು ನಿಜವೇ? ನಾವು ಮತ್ತೊಂದು ಬಬಲ್‌ನತ್ತ ದಾಪುಗಾಲು ಹಾಕುತ್ತಿದ್ದೇವೆಯೇ? ಇಲ್ಲಿ ಮೂರು ಬಗೆಯ ನೀರಿನ ಗುಳ್ಳೆಗಳ ಬಗ್ಗೆ ಚರ್ಚಿಸಲಾಗುತ್ತಿದೆ:

  • ಆರ್ಥಿಕ ಗುಳ್ಳೆ: ಹೂಡಿಕೆದಾರರು ಲಾಭದ ಅಂದಾಜು ಇಲ್ಲದೇ ಸಿಕ್ಕಾಪಟ್ಟೆ ಹಣ ಹೂಡುತ್ತಿದ್ದಾರಾ ಎಂಬ ಆತಂಕ.

  • ಮೂಲಸೌಕರ್ಯದ ಗುಳ್ಳೆ: ಸಿಕ್ಕಾಪಟ್ಟೆ ಡೇಟಾ ಸೆಂಟರ್‌ಗಳು, ಜಿಪಿಯುಗಳು, ವಿದ್ಯುಚ್ಛಕ್ತಿ ಮುಂತಾದವನ್ನು ಎಐಗೆಂದು ಕೂಡಿಸಿಡಲಾಗುತ್ತಿದೆ. ಇದು ನಿಜಕ್ಕೂ ಪೂರ್ಣಮಟ್ಟದಲ್ಲಿ ಬಳಕೆಯಾಗುತ್ತದೆಯೇ ಎಂಬ ಆತಂಕ.

ಹಾಗಾದರೆ, ಇಡೀ ಎಐ ಅನ್ನೋದೇ ಬೋಗಸ್ಸಾ? ಭ್ರಮೆಯಾ? ನಾವು ತೀರಾ ಆಪ್ತ ನಿರಾಶರಾಗಬೇಕಿಲ್ಲ, ದಿಗ್ಭ್ರಾಂತರಾಗಬೇಕಿಲ್ಲ. ಇದಕ್ಕೆ ಬೇರೆಲ್ಲೂ ಹೋಗಬೇಕಿಲ್ಲ, ನಾವು ಹೋಲಿಸುತ್ತಿರುವ ಇಂಟರ್‌ನೆಟ್ ಬಬಲ್ ಅನ್ನೇ ಉದಾಹರಣೆಗೆ ತೆಗೆದುಕೊಂಡರೆ ಸಾಕು. ಇಂಟರ್‌ನೆಟ್ ಬಂದು ಸುಮಾರು 30 ವರ್ಷಗಳಾಗಿವೆ. ಇವತ್ತಿಗೆ ಜಗತ್ತು ಸಂಪೂರ್ಣ ಅಂತರ್ಜಾಲಮಯವಾಗಿದೆ.

ನಮಗೆ ಈಗ ಎಳನೀರು ಬೇಕೆಂದರೂ 15 ನಿಮಿಷಗಳಲ್ಲಿ 5 ರೂ. ಕಡಿಮೆ ವೆಚ್ಚದಲ್ಲಿ ಮನೆ ಬಾಗಿಲಿಗೆ ತಂದು ಕೊಡುತ್ತಾರೆ. ಡಾಕ್ಟರು ಬೇಕೆಂದರೆ ವಿಡಿಯೋ ಕಾಲ್‌ನಲ್ಲಿ ಸಿಗುತ್ತಾರೆ. ಆದರೆ, ಈ ತರಹದ ಉದ್ಯಮಕ್ಕೆ 20 ವರ್ಷಗಳ ಹಿಂದೆಯೇ ಮುಗಿಬಿದ್ದು ಹಣ ಹೂಡಿದರೆ ಸಮಸ್ಯೆ ಯಾರದ್ದು ಅನ್ನಬೇಕು? ತಂತ್ರಜ್ಞಾನದಲ್ಲಿ ಒಂದು ಪದ ಇದೆ, ‘ಸ್ಯಾಚುರೇಶನ್’. ಎಲ್ಲವೂ ಈ ಸ್ಯಾಚುರೇಶನ್ ಮಟ್ಟಕ್ಕೆ ಬಂದಿಲ್ಲದಾಗ ನೈಜ ಉತ್ಪಾದನೆ ಸಾಧ್ಯವಾಗುವುದಿಲ್ಲ.

Leave a Comment

Your email address will not be published. Required fields are marked *