ಕೃಷಿಕರು, ಸಣ್ಣ ಉದ್ಯಮಿಗಳು, ವ್ಯಾಪಾರಿಗಳಿಗೆ ಎಐ ಸಾಥ್

article n3

ಟೆಕ್ ಟಚ್ | ಮಧು ವೈ. ಎನ್.

ಎಐ ಎಂದರೆ ಯಾವಾಗಲೂ ಬಿಳಿ ಕಾಲರ್ ಮತ್ತು ಅದಕ್ಕಿಂತ ಮೇಲಿನ ಜನರ ದೃಷ್ಟಿಯಿಂದಲೇ ಮಾತಾಡುತ್ತೇವೆ. ಕೃಷಿಕರು, ವ್ಯಾಪಾರಿಗಳು ಮತ್ತು ಸಣ್ಣ ಉದ್ದಿಮೆದಾರರ ಪಾಡೇನು? ಅವರು ಹೇಗೆ ಎಐ ಅಥವಾ ಒಟ್ಟಾರೆ ತಂತ್ರಜ್ಞಾನದ ಲಾಭ ಪಡೆಯಬಹುದು? ನಮ್ಮಲ್ಲಿ ಯಾಕೆ ಟೆಕ್ನಾಲಜಿ ಇನ್ನೂ ಈ ವಲಯವನ್ನು ಪ್ರವೇಶಿಸಿಲ್ಲ? ಇದು ಸಾಧ್ಯವಾ? ಬನ್ನಿ ತಿಳಿಯೋಣ.

ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸಣ್ಣ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರಿಗೆ, ದೊಡ್ಡ ಕಂಪನಿಗಳ ನಡುವೆ ತಮ್ಮ ವ್ಯಾಪಾರವನ್ನು ಉಸಿರು ಬಿಡಿಸುವುದೇ ದೊಡ್ಡ ಸವಾಲು. ಬಹಳಷ್ಟು ಗ್ರಾಹಕ ವ್ಯಾಪಾರಿ ಸಂಸ್ಥೆಗಳಿಗೆ ತಮ್ಮದೇ ಆದ ವೆಬ್‌ಸೈಟ್, ಡೆಲಿವರಿ ತಂಡ, ಆಟೋಮ್ಯಾಟಿಕ್ ಮೆಸೇಜು, ಇ-ಮೇಲ್ ಮುಂತಾಗಿ ಎಲ್ಲವನ್ನೂ ಇಟ್ಟುಕೊಂಡಿರುತ್ತಾರೆ. ಅವರೊಂದಿಗೆ ಸ್ಪರ್ಧಿಸುವುದು ಸಾಧ್ಯವೇ? ಅವರ ಮಾರುಕಟ್ಟೆ ದೊಡ್ಡದು, ಹೂಡಿಕೆ ಮೊತ್ತ ದೊಡ್ಡದು, ಅವರ ಕಷ್ಟವಿಜ್ಞಾನವೂ ಅಷ್ಟೇ ದೊಡ್ಡದು. ಇಷ್ಟು ಅಂತರದ ಸಣ್ಣ ಉದ್ಯಮಗಳು ದೃಢೀಕರಿಸದೆ ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಸೀಮಿತ ಮಾರುಕಟ್ಟೆಗೆ ಅತ್ಯಂತ ಪರಿಣಾಮಕಾರಿಯಾಗಿ ತಲುಪಬಹುದು. ಇದರಲ್ಲಿ ಎಷ್ಟೋಂದು ಕ್ಲಿಷ್ಟ ಅನಿಸಬಹುದು, ಆದರೆ ಪ್ರಯೋಗಿಸಿದಾಗ ಮಾತ್ರ ಅದರ ಲಾಭ ನಿಮಗೆ ತಿಳಿಯುವುದು.

ಉದಾಹರಣೆಗೆ ಮೊದಲಿಗೆ ನೀವು ವಾಟ್ಸ್‌ಪ್ ಬಿಸಿನೆಸ್ ಆ್ಯಪ್ ಬಳಸುವುದನ್ನು ರೂಢಿಸಿಕೊಳ್ಳಬೇಕು. ಅದರಿಂದ ನಿಮ್ಮಲ್ಲಿರುವ ವಸ್ತು, ಅವುಗಳ ಬೆಲೆ, ಲಭ್ಯತೆ ಮುಂತಾಗಿ ನಿಮ್ಮ ಗ್ರಾಹಕರಿಗೆ ನೇರ ಮೆಸೇಜು ಮೂಲಕ ತಿಳಿಸಬಹುದು. ಗ್ರಾಹಕರಿಂದ ಆರ್ಡರ್ ಮೆಸೇಜ್ ಬಂದಾಗ, ಎಐ ಆಧಾರಿತ ಆಟೋ ರೆಸ್ಪಾನ್ಸ್‌ಗಳು ಬಹು ಶಕ್ತಿಯುತ ಉತ್ತರ ನೀಡಬಹುದು. ಒಂದು ಬರೆಯಲು ಬರದೆ ಗ್ರಾಹಕರು ತಮ್ಮ ಧ್ವನಿಯಿಂದಲೇ ಆರ್ಡರ್ ಮಾಡಬಹುದು. ಇದರ ಮುಖ್ಯ ಪ್ರಯೋಜನವೆಂದರೆ ನಿಮಗೆ ಅಷ್ಟು ಸಕ್ರಿಯ ಗ್ರಾಹಕರ ಸಂಪರ್ಕ ಇರುತ್ತದೆ.

ಎರಡನೆಯದಾಗಿ- ಜೆಮಿನಿ, ಚಾಟ್‌ಜಿಪಿಟಿ ಮುಂತಾದ ಎಐ ಉಪಕರಣಗಳನ್ನು ಬಳಸಿ ನಿಮ್ಮ ವ್ಯಾಪಾರ ಹೇಗೆ ವೃದ್ಧಿಸಬಹುದು ಎಂಬ ಸಲಹೆ ಕೇಳಬಹುದು. ನಿಮ್ಮ ಪ್ರಾಡಕ್ಟ್‌ಗಳಿಗೆ ತಕ್ಕಂತೆ ಜಾಹೀರಾತು ಸಾಲುಗಳನ್ನು ಪಡೆಯಬಹುದು, ಚಿತ್ರಗಳನ್ನು ಪಡೆಯಬಹುದು. ಮಾರುಕಟ್ಟೆ ವಿಸ್ತರಿಸುವ ಬಗ್ಗೆ ಉಪಾಯಗಳನ್ನು ಕೇಳಿ ತಿಳಿದುಕೊಳ್ಳಬಹುದು. ನಮ್ಮಲ್ಲಿ ಅನೇಕ ಸಣ್ಣ ಉದ್ಯಮಿಗಳು ಸಾಂಪ್ರದಾಯಿಕ ತಂತ್ರಗಳನ್ನು ಬಳಸುತ್ತಾರೆ. ಕೇವಲ ಮಾರುಕಟ್ಟೆಯೂ ಬಂಡವಾಳ ತಂತ್ರಗಳನ್ನೂ ಬಳಸುತ್ತದೆ. ಗ್ರಾಹಕನ್ನು ಆಕರ್ಷಿಸಲು, ಸಂಭಾಷಿಸಲು ಮತ್ತು ಕೃಷಿ ಮಾಡುವ ವಿಧಾನಗಳು ಬದಲಾಗಿದೆ. ಗ್ರಾಹಕರೇ ಬದಲಾಗಿದ್ದಾರೆ!

ಬಹಳಷ್ಟು ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರು ಯಾಕೆ ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಒಂದು ಅಕೌಂಟ್ ತೆರೆದಿಲ್ಲವೋ ಸಾಕು ಮಾಡಿಲ್ಲ ಅಂದೋದೇ ದೊಡ್ಡ ಪ್ರಶ್ನೆ. ಇದನ್ನು ಎಲ್ಲರಿಗೂ ಅರಗಿಸಿ ಇಟ್ಕೊಂಡರೆ ಅದರಲ್ಲೂ ಅಕೌಂಟ್ ತೆರೆದು ತಾಜಾ ಅಪ್ಡೇಟ್ ಬಂದಾಗ ಪ್ರೇಕ್ಷಕರ ಅಪ್ಡೇಟ್ ನೋಡಿ ಗ್ರಾಹಕರನ್ನು ಸೆಳೆಯಬಹುದು. ನಿಮ್ಮ ಊರಿನ/ಸ್ಥಳೀಯ ಗ್ರಾಹಕರು ನಿಮ್ಮ ಪೇಜಿಗೆ ಲೈಕ್ ಒತ್ತಿದರೆ ಸಾಕು. ನಿಮ್ಮ ಅಪ್‌ಡೇಟ್‌ಗಳು ಅವರನ್ನು ತಾವಾಗಿ ತಲುಪುತ್ತವೆ. ಎಲ್ಲೂ ಸಹ ವ್ಯಾಪಾರದ ಮೊದಲ ಹಂತ ಗ್ರಾಹಕರಿಗೆ ತಲುಪುವುದಾಗಿರುತ್ತದೆ.

  • ಇನ್ನು ಬಿಲ್ಲಿಂಗ್ ವಿಷಯಕ್ಕೆ ಬಂದರೆ ಇಂದಿನ ಗ್ರಾಹಕರು ಕಾಗದದ ಬಿಲ್ ಬಯಸುವುದಿಲ್ಲ ಫೋನ್‌ವೇ ಗೂಗಲ್‌ ಪೇ ಇರಲೇಬೇಕು. ಬಿಲ್ಲಿಂಗ್ ವಿಷಯಗಳಲ್ಲಿಯೂ Zoho Vyapar Khatabook ಸಂಜಾ ಅಪ್‌ಗಳು ಬಳಸಬಹುದು, ಆರ್ಡರ್, ಬಿಲ್, ಹಳೆಯ ಪಾವತಿ, ಬಾಕಿ ಎಲ್ಲವನ್ನೂ ನಿಮ್ಮ ಮೊಬೈಲ್‌ನಿಂದಲೇ ನಿರ್ವಹಿಸಬಹುದು. ಗ್ರಾಹಕರ ಆರ್ಡರ್ ಹಿಸ್ಟರಿ ಮತ್ತು ಖರೀದಿಗಳನ್ನು ಗಮನಿಸಿ, ಅವರಿಗೆ ಬೇಕಾದ ಹೊಸ ವಸ್ತುಗಳ ಬಗ್ಗೆ ಸಲಹೆ ನೀಡಲು Zoho CRM Lite ಅಥವಾ Vyapar app ಗಳನ್ನು ಬಳಸಬಹುದು.

ಸಿಬ್ಬಂದಿ ನೇಮಕ, ನಿರ್ವಹಣೆ

ಸಣ್ಣ ಉದ್ಯಮಿಗಳಿಗೆ, ನಿಮಗೆ ಬೇಕಾದ ಸಿಬ್ಬಂದಿಯ ನೇಮಕಕ್ಕೆ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು. Zoho Recruit, Freshteam, LinkedIn Recruiter ನಂತಹ ಎಐ ಆಧಾರಿತ ಟೂಲ್‌ಗಳು ಉದ್ಯೋಗಗಳ ಅರ್ಜಿಗಳನ್ನು ವಿಶ್ಲೇಷಿಸಿ, ನೀವು ಬಯಸುವ ಅರ್ಹತೆ ಮತ್ತು ಅನುಭವ ಇರುವ ಅಭ್ಯರ್ಥಿಗಳನ್ನು ಗುರುತಿಸುತ್ತವೆ.

Keka AI HR, BambooHR, Zoho People ನಂತಹ ಆ್ಯಪ್‌ಗಳು ಹೊಸ ಸಿಬ್ಬಂದಿಯ ದಾಖಲಾತಿ, ವೇತನ, ಹಾಜರಾತಿ ಮತ್ತು ರಜೆ ನಿರ್ವಹಣೆಯನ್ನು ನೋಡಿಕೊಳ್ಳುತ್ತವೆ. OrAI, Yoodli ನಂತಹ ಎಐ ಕೋಚ್‌ಗಳು ಸಿಬ್ಬಂದಿಗೆ ಇಂಗ್ಲಿಷ್ ಮಾತನಾಡುವುದು, ಮಾರಾಟ ಕೌಶಲಗಳು ಮತ್ತು ಸಂವಹನ ಕೌಶಲಗಳನ್ನು ಸುಧಾರಿಸಲು ಸಹಾಯ ಮಾಡುತ್ತವೆ.

ಇನ್ನೊಂದು ಹೆಜ್ಜೆ ಮುಂದೆ ಹೋದರೆ ನಿಮ್ಮ ಅಂಗಡಿಯದ್ದೇ ಆದ ಒಂದು ವೆಬ್‌ಸೈಟ್ ತೆರೆಯಬಹುದು. ಅಲ್ಲಿಂದಲೇ ಆರ್ಡರ್ ಪಡೆಯಬಹುದು. Shopify Magic, Wix ADI, GoDaddy ನಂತಹ ಟೂಲ್‌ಗಳನ್ನು ಬಳಸಿಕೊಂಡು ನಿಮ್ಮ ವ್ಯಾಪಾರಕ್ಕೆ ತಕ್ಷಣವಾಗಿ ಕೆಲವೇ ನಿಮಿಷಗಳಲ್ಲಿ ವೆಬ್‌ಸೈಟ್ ನಿರ್ಮಿಸಬಹುದು. ನಿಮ್ಮ ಫೋನ್‌ನಲ್ಲಿರುವ ಫೋಟೋಗಳನ್ನು ಅಪ್‌ಲೋಡ್ ಮಾಡಿದರೆ ಸಾಕು, ಬಹಳ ಜಾಣ್ಮೆಯಿಂದ ಸುಂದರವಾದ ವೆಬ್‌ಸೈಟ್ ವಿನ್ಯಾಸಗೊಳಿಸಿಕೊಡುತ್ತವೆ.

Perci.ai, Amazon JungleScout ನಂತಹ ಟೂಲ್‌ಗಳು ನಿಮ್ಮಲ್ಲಿರುವ ಪ್ರಾಡಕ್ಟ್ ವಿವರಣೆ, ಫೋಟೋಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಸಹಾಯ ಮಾಡುತ್ತವೆ. Zendesk ಎಂಬ ಸಂಸ್ಥೆ ನಿಮ್ಮ ವೆಬ್‌ಸೈಟ್‌ಗಾಗಿ ಕಸ್ಟಮೈಸ್ಡ್ ಎಐ ಚಾಟ್‌ಬಾಟ್‌ಗಳನ್ನು ಸಿದ್ಧಪಡಿಸಿಕೊಡುತ್ತದೆ. ಅವರು ಕೊಡುವ ಎಐ ಚಾಟ್‌ಬಾಟ್‌ಗಳು ಗ್ರಾಹಕರ ಪ್ರಶ್ನೆಗಳಿಗೆ 24×7 ಉತ್ತರ ನೀಡುತ್ತವೆ. ಇದು ಆರ್ಡರ್ ಟ್ರ್ಯಾಕಿಂಗ್, ಪ್ರತ್ಯೇಕ ಮತ್ತು ಇತರ ವಿಷಯಗಳಲ್ಲಿಯೂ ಸಹಾಯ ಮಾಡುತ್ತವೆ.

  • Zoho CRM, Shopify ai, Prisync ನಂತಹ ಟೂಲ್‌ಗಳು ನಿಮ್ಮ ಪ್ರತಿ ಸ್ಪರ್ಧಿಗಳ ಬೆಲೆಗಳನ್ನು ವಿಶ್ಲೇಷಿಸಿ, ನಿಮ್ಮ ಪ್ರಾಡಕ್ಟ್‌ಗಳಿಗೆ ಉತ್ತಮ ಬೆಲೆ ನಿಗದಿಪಡಿಸಲು ಸಹಾಯ ಮಾಡುತ್ತವೆ. ನಿಮ್ಮ ವೆಬ್‌ಸೈಟ್‌ನಲ್ಲಿ ಎಐ, ಗ್ರಾಹಕರ ಹಿಂದಿನ ಖರೀದಿಗಳು ಮತ್ತು ಹುಡುಕಾಟದ ಇತಿಹಾಸದ ಆಧಾರದ ಮೇಲೆ ಅವರಿಗೆ ಇಷ್ಟವಾಗಬಹುದಾದ ಹೊಸ ಉತ್ಪನ್ನಗಳನ್ನು ಶಿಫಾರಸು ಮಾಡುತ್ತದೆ. Zoho Inventory, Shopify Magic, QuickBooks ಎಐ ನಂತಹ ಆ್ಯಪ್‌ಗಳು ಉತ್ಪನ್ನಗಳ ದಾಸ್ತಾನು, ಚಲನೆ ಮತ್ತು ಪುನಃ ಆರ್ಡರ್ ಮಾಡುವ ಸಮಯವನ್ನು ಒಂದೇ ಕಡೆ ವಿಶ್ಲೇಷಿಸುತ್ತವೆ. ಹಿಂದಿನ ಮಾರಾಟ ಮತ್ತು ಹಬ್ಬಗಳ ಸಮಯದಲ್ಲಿನ ಬೇಡಿಕೆಯನ್ನು ವಿಶ್ಲೇಷಿಸಿ, ಭವಿಷ್ಯದಲ್ಲಿ ಯಾವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರಬಹುದು ಎಂದು ಊಹಿಸುತ್ತವೆ.

  • Microsoft Power BI with Copilot, Tableau AI, Zoho Analytics, Google Looker Studio ನಂತಹ ಟೂಲ್‌ಗಳು ನಿಮ್ಮ ಅಂಗಡಿ/ವ್ಯಾಪಾರದ ಮಾರಾಟ, ಗ್ರಾಹಕರ ಅಭ್ಯಾಸಗಳು, ಉತ್ಪನ್ನಗಳ ಹರಿವು ಮತ್ತು ಇತರ ಡೇಟಾವನ್ನು ವಿಶ್ಲೇಷಿಸಿ, ಅವುಗಳನ್ನು ಗ್ರಾಫ್ ಮತ್ತು ಚಾರ್ಟ್ ರೂಪದಲ್ಲಿ ನೀಡುತ್ತವೆ. ದೊಡ್ಡ ಕಂಪನಿಗಳು ಇಂತಹ ಗ್ರಾಫ್‌ಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ!

ಗೂಗಲ್ ಮ್ಯಾಪ್ ಮತ್ತು ರಿವ್ಯೂ

ನಿಮ್ಮ ಅಂಗಡಿ/ಕಛೇರಿಯನ್ನು ಗೂಗಲ್ ಮ್ಯಾಪ್‌ನಲ್ಲಿ ಪಟ್ಟಿ ಮಾಡಿರಲೇ ಬೇಕು. ಅದು ಬೇಕಾ ಅಂಗಡಿ ಆಗಿರಲಿ ಮಾರಾಟದ ಅಂಗಡಿ ಆಗಿರಲಿ ಅದರ ಬಗ್ಗೆ ರಿವ್ಯೂ (ರೇಟಿಂಗ್, ವಿಮರ್ಶೆ) ಕೊಡುತ್ತಾರೆ. Google Review, Repuso, Broadly, ReviewTrackers ನಂತಹ ಟೂಲ್‌ಗಳು ನಿಮ್ಮ ಅಂಗಡಿ ಅಥವಾ ಸೇವೆಗಳ ಬಗ್ಗೆ ಬಂದಿರುವ ವಿಮರ್ಶೆಗಳನ್ನು ಒಟ್ಟುಗೂಡಿಸಿ, ಅವುಗಳಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ವಿಶ್ಲೇಷಿಸುತ್ತವೆ. ಗ್ರಾಹಕರ ಪ್ರತಿಕ್ರಿಯೆಯಲ್ಲಿರುವ ಭಾವನೆಗಳನ್ನು ಗುರುತಿಸಿ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಫಿಲ್ಟರ್ ಮಾಡುತ್ತವೆ. ಯಾವುದೇ ಹಾನಿಕಾರಕ ವಿಮರ್ಶೆ ಅಥವಾ ಕಮೆಂಟ್ ಬಂದಾಗ, ನಿಮಗೆ ತಕ್ಷಣವೇ ನೋಟಿಫಿಕೇಶನ್ ಕಳುಹಿಸುತ್ತವೆ. ಇದರಿಂದ ನಿಮ್ಮ ಬ್ರಾಂಡ್ ಗೌರವವನ್ನು ಕಾಪಾಡಿಕೊಳ್ಳಬಹುದು. ಮುಖ್ಯವಾಗಿ ಬಾರಿ ಬರುವ ವಿಮರ್ಶೆಗಳಿಂದ ನಿಮಗೆ ಎಲ್ಲಿ ಇಂಪ್ರೂವ್ ಮಾಡಿಕೊಳ್ಳಬಹುದು ಎಂದು ಉಚಿತ ಸಲಹೆ ಸಿಕ್ಕಂತಾಗುತ್ತದೆ. ಈ ಸಲಹೆಗಳು ದುಡ್ಡು ಕೊಟ್ಟರೂ ಸಿಗಲ್ಲ.

ಗ್ರಾಹಕರ ನಿರ್ವಹಣೆ ಈಗ ಸುಲಭ!

ಯಾವುದೇ ವ್ಯವಹಾರದ ಯಶಸ್ಸಿಗೆ, ಮಾರಾಟಕ್ಕೆ, ಹೊಸ ಗ್ರಾಹಕರನ್ನು (leads) ಹುಡುಕುವುದು ಮತ್ತು ವ್ಯಾಪಾರದ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. Zoho CRM Zia, Salesforce, HubSpot ನಂತಹ ಟೂಲ್‌ಗಳು ಗ್ರಾಹಕರ ಬಗ್ಗೆ ಡೇಟಾ ಸಂಗ್ರಹಿಸಿ, ಹೊಸ ಲೀಡ್‌ಗಳನ್ನು ಗುರುತಿಸಿ, ಅವರಿಗೆ ಆಸಕ್ತಿಯನ್ನು ಆಧರಿಸಿ ಸಂದೇಶಗಳನ್ನು ಕಳುಹಿಸುತ್ತವೆ. ನಿಮ್ಮ ಸೈಟ್‌ನಲ್ಲಿ ಬರುವ enquiry ಗಳನ್ನು ವಿಶ್ಲೇಷಿಸಿ, ಯಾವ ಲೀಡ್ ಹೆಚ್ಚು ಮಾರಾಟಕ್ಕೆ ಯೋಗ್ಯವಾಗಿದೆ ಎಂದು ಗುರುತಿಸುತ್ತವೆ ಮತ್ತು ಅವುಗಳಿಗೆ ಹೆಚ್ಚು ಗಮನ ಹರಿಸಲು ಸೂಚಿಸುತ್ತವೆ. ಎಐ ನಿಮಗೆ ‘ಯಾವ ಗ್ರಾಹಕರು ಬಹಳ ದಿನಗಳಿಂದ ನಿಷ್ಕ್ರಿಯರಾಗಿದ್ದಾರೆ’ ಅಥವಾ ‘ಯಾವ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಬೇಕು’ ಅಂತ ತಿಳಿಸುತ್ತದೆ. QuickBill, Razorpay Sense, Shopify POS ನಂತಹ ಪಾವತಿ ಟೂಲ್‌ಗಳು ಅಸಮ ಪಾವತಿ ಅಥವಾ ವಂಚನೆಯ ಚಟುವಟಿಕೆಗಳನ್ನು ತಕ್ಷಣವೇ ಗುರುತಿಸಿ, ನಿಮಗೆ ಎಚ್ಚರಿಕೆ ನೀಡುತ್ತವೆ.

ತಂತ್ರಜ್ಞಾನ ಮಾರುಕಟ್ಟೆ ಒಂಥರಾ ಬೆಂಗಳೂರಿನ ಎಂ.ಜಿ ರಸ್ತೆ ಇದ್ದ ಹಾಗೆ. ಇಲ್ಲದವು ಇಲ್ಲ ಅಲ್ಲಂಗೆ ಎಲ್ಲವೂ ಇವೆ. ನೀವು ಹುಡುಕಬೇಕಷ್ಟೇ ಹಣ ಈ ಆ್ಯಪ್‌ಗಳಿಗೆ ಸಣ್ಣ ಮೊತ್ತದ ಮಸಾಲ ಶುಲ್ಕವಿರುತ್ತದೆ. ಆದರೆ ಅದರಿಂದಾಗುವ ಲಾಭ ಮಾತ್ರ ಹತ್ತು ಪಟ್ಟು. ಎಲ್ಲಿ ಹೋದರೆ ಸುದ್ದಿ ಮುಗಿಯಲ್ಲ. ಇಲ್ಲೂ ನಿಲ್ಲೋಣ. ಮಸಾಲ ಮಾಡಿದ್ದರೆ ಬಕಾಲ ಎನ್ನುವ ತಂತ್ರಜ್ಞಾನವೇ ಇದೆ ಅಲ್ವೋ?

Leave a Comment

Your email address will not be published. Required fields are marked *