ಜಿಬ್ಲಿ ಸಂಸಾರ: ನಮ್ಮನ್ನು ನಾವು ಗೊಂಬೆಯಾಗಿ ನೋಡಿಕೊಳ್ಳುತ್ತಿರುವುದೇಕೆ?

article m2

ಜಪಾನ್‌ನ ಸ್ಟುಡಿಯೋ ಜಿಬ್ಲಿ 80ರ ದಶಕದಲ್ಲಿ ಸೃಷ್ಟಿಸಿದ್ದ ಅನಿಮೇಷನ್ ರೂಪಗಳು ಇದ್ದಕ್ಕಿದ್ದಂತೆ ಹೊಸ ಟ್ರೆಂಡ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವಾಗಿದೆ. ಎಲ್ಲರೂ ತಮ್ಮ ದೈನಂದಿನ ಕ್ಷಣಗಳನ್ನು ಜಿಬ್ಲಿ ಕನ್ನಡಿಯಲ್ಲಿ ನೋಡಲು ಬಯಸುತ್ತಿದ್ದಾರೆ. ಏನಿದು ಜಿಬ್ಲಿ ಅಲೆ?

ಎಲ್ಲಿ ನೋಡಿದರೂ ಮನುಷ್ಯನ ಅನಿಮೇಷನ್ ಅವತಾರಗಳು. ಕಾರ್ಟೂನ್ ಪಾತ್ರಗಳು ಸಾಮಾಜಿಕ ಜಾಲತಾಣ ಜಗತ್ತನ್ನು ಆವರಿಸಿಕೊಂಡಿವೆಯೇ? ‘ಜಿಬ್ಲಿ’ ಅಲೆ ಶುರುವಾದಾಗಿನಿಂದ ಎಲ್ಲರಿಗೂ ಹೀಗೆನಿಸತೊಡಗಿದೆ. ಕೃತಕ ಬುದ್ಧಿಮತ್ತೆ (AI) ಅಬ್ಬರ ಶುರುವಾದಾಗಿನಿಂದ ಎಷ್ಟೆಲ್ಲ ಬೆಳೆವಣಿಗೆಗಳು ನಮ್ಮನ್ನು ಪ್ರಭಾವಿಸುತ್ತಿವೆ! ಮೊನ್ನೆ ಮೊನ್ನೆ ಡಿಪ್‌ಫೇಕ್ ಬಂದಿತ್ತು; ಈಗ ಜಿಬ್ಲಿ ಚಿತ್ರಗಳು. ದೇಶ-ದೇಶಗಳ ಪ್ರಧಾನಿ/ಅಧ್ಯಕ್ಷರು, ಕ್ರಿಕೆಟ್ ತಾರೆಯರು, ಬಿಲಿಯನೇರ್ ಮಟ್ಟದ ಉದ್ಯಮಿಗಳು, ಸಿನೆಮಾ ನಟ-ನಟಿಯರು, ಕ್ರೀಡಾಪಟುಗಳಿಂದ ಹಿಡಿದು ನಮ್ಮೂರಿನವರೆಗಿನ ಯುವಕ, ಯುವತಿಯರ ಫೇಸ್‌ಬುಕ್ ಪ್ರೊಫೈಲ್ ಚಿತ್ರಗಳೂ ಜಿಬ್ಲಿಯಾಗಿ ಬದಲಾಗಿವೆ.

ಏನಿದು ಜಿಬ್ಲಿ ಕನ್ನಡಿ?

ಕಳೆದ ವಾರ ಓಪನ್ ಎಐ ಕಂಪನಿ ತನ್ನ ಚಾಟ್‌ಜಿಪಿಟಿ ಮೂಲಕ ಜಿಬ್ಲಿ ಶೈಲಿಯ ಚಿತ್ರಗಳನ್ನು ಸೃಷ್ಟಿಸುವ ಕಲೆಯನ್ನು ಸಾಬೀತುಪಡಿಸಿತ್ತು. ಎಐ ಉಪಕರಣಗಳ ಮೂಲಕ ನೀವು ಈಗಾಗಲೇ ಸಾಕಷ್ಟು ಚಿತ್ರಗಳನ್ನು ಸೃಷ್ಟಿಸಿರಬಹುದು. ಇದು ಅದರ ಮುಂದುವರಿದ ಭಾಗ. ಆದರೆ, ಇಲ್ಲಿನ ವಿಶೇಷತೆ ಏನೆಂದರೆ ಎಐ ತಾನೇ ಕಲ್ಪಿಸಿಕೊಂಡ ಚಿತ್ರ ಸೃಷ್ಟಿಸುವ ಬದಲು ಜಿಬ್ಲಿ ಶೈಲಿಯಲ್ಲಿ ನೀವು ಕೇಳಿದರೆ ಅದೇ ಶೈಲಿಯಲ್ಲಿ ಚಿತ್ರ ಸಿದ್ಧಪಡಿಸುತ್ತದೆ. ಚಿತ್ರಗಳು ಮುದ್ದಾಗಿರುತ್ತವೆ. ನಮ್ಮನ್ನು ನಾವು ಗೊಂಬೆಯಾಗಿ ನೋಡುವುದು ಮುದವಲ್ಲವೇ? ಹಾಗಾಗಿ ಜನ ಈ ‘ಕನ್ನಡಿಗಾಗಿ’ ಮುಗಿಬೀಳುತ್ತಿದ್ದಾರೆ.

ನಿಮ್ಮದೇ ಭಾವಚಿತ್ರಗಳನ್ನು ಜಿಬ್ಲಿಯಾಗಿಸುವುದು ಹೇಗೆ?

  1. ಎಐ ಉಪಕರಣಗಳಾದ ಚಾಟ್‌ಜಿಪಿಟಿ, ಲಿಯೋನಾರ್ಡೊ ಎಐ, ಮಿಡ್‌ಜರ್ನಿ, ಬಿಂಗ್ ಮುಂತಾದ ಕಡೆ ಹೋಗಿ ನಿಮ್ಮ ಫೋಟೋ ಅಪ್ಲೋಡ್ ಮಾಡಿ “generate ghibli style image of this picture” ಎಂದು ಕೇಳಬಹುದು.

  2. ಹೊಸ ಕಾಲ್ಪನಿಕ ಚಿತ್ರ ಬೇಕಿದ್ದಲ್ಲಿ ಈ ಬಗೆಯ ಪ್ರಾಂಪ್ಟನ್ನು ಕೊಡಬಹುದು: “A Studio Ghibli-style portrait of a young man with curly black hair, glasses, smiling gently, with soft watercolor background, in a hand-drawn anime look”.

ಜಿಬ್ಲಿಯನ್ನೂ ಬಿಟ್ಟಿಲ್ಲ ವಿವಾದ!

ಈ ಹೊಸ ಕನ್ನಡಿ ಹೊಸ ವಿವಾದವನ್ನೂ ಹುಟ್ಟುಹಾಕಿದೆ. ಜಗತ್ತನ್ನು ಇಬ್ಬಾಗವಾಗಿ ಸೀಳಿದೆ. ಒಂದು ವರ್ಗ, ‘ಇದು ಕಲೆಯನ್ನು ಕೊಲ್ಲುತ್ತಿದೆ’ ಎಂದು ಬಹಳ ನೊಂದಿದ್ದರೆ, ಇನ್ನೊಂದು ವರ್ಗವು ‘ಇದು ಕಲೆಯನ್ನು ಡೆಮಾಕ್ರಟೈಸೇಶನ್ ಮಾಡಿದೆ’ ಎಂದು ಹಿರಿಹಿರಿ ಹಿಗ್ಗುತ್ತಿದೆ.

ಜಿಬ್ಲಿ ವಿರೋಧಿಗಳ ವಾದ

ಎಐ ಕನ್ನಡಿಯ ಪರವಾಗಿರುವವರ ವಾದ

ಜಿಬ್ಲಿ ಎಲ್ಲಿಂದ ಬಂತು?

ಜಿಬ್ಲಿ ಶೈಲಿ ಎಂಬುದು 1970ರ ದಶಕದಲ್ಲಿ ಜಪಾನಿನ ಕಲಾಕಾರ, ಸಿನೆಮಾ ನಿರ್ಮಾಪಕ ಹಯಾವೊ ಮಿಯಾಝಾಕಿ ಆ ಕಾಲದಲ್ಲಿ ಲಭ್ಯವಿದ್ದ ಅನಿಮೇಷನ್‌ನಿಂದ ಬೇಸತ್ತು ಹುಟ್ಟುಹಾಕಿದ ಕಲೆ. ನೀವು ಚಿತ್ರಗಳಲ್ಲಿ ನೋಡಿರುತ್ತೀರಿ; ಒಂದು ಶೈಲಿಯಲ್ಲಿ ಇಡೀ ಜಗತ್ತನ್ನು ಕಟ್ಟುನಿಟ್ಟಾಗಿ ಚಿತ್ರಿಸುತ್ತಾರೆ. ಇನ್ನೊಂದು ಶೈಲಿಯಲ್ಲಿ ಎಲ್ಲವನ್ನೂ ಮುದ್ದಾದ ಆಕಾರದಲ್ಲಿ ಚಿತ್ರಿಸುತ್ತಾರೆ. ಆದರೆ ಜಿಬ್ಲಿ ಅನಿಮೇಷನ್‌ನಲ್ಲಿ ತತ್ವಶಃ ವಾಸ್ತವಕ್ಕೆ ಹತ್ತಿರವಾಗಿರುತ್ತವೆ, ಅಷ್ಟೇ ಮೃದುವಾಗಿರುತ್ತವೆ. ಅಬ್ಬರವಿಲ್ಲದ ಕಲೆಯೇ ಜಿಬ್ಲಿ.

ಅದು ಫಿಬ್ರಿಯೋ ಜಿಬ್ಲಿಯೋ?

Ghibli ಮೂಲಕ ಇಟಾಲಿಯನ್ ಪದ. ಇದರ ಅರ್ಥ ಮರುಭೂಮಿಯ ಬಿಸಿಗಾಳಿ. 1985ರಲ್ಲಿ ಮಿಯಾಝಾಕಿ ಮತ್ತು ಮಿಸಾವೊ ತಕಹಾಟಾ ಸೇರಿ ಜಿಬ್ಲಿ ಸ್ಟುಡಿಯೋ ಆರಂಭಿಸಿದರು. ಮೂಲ ಇಟಾಲಿಯನ್ ಪದವನ್ನು ‘ಫಿಬ್ಲಿ’ ಎಂದು ಉಚ್ಚರಿಸುತ್ತಾರೆ. ಆದರೆ ಮಿಯಾಝಾಕಿ ತನ್ನ ಕಲೆಗೆ ಇಟ್ಟ ಹೆಸರು ಮತ್ತು ಆ ಹೆಸರನ್ನು ಉಚ್ಚಾರಣೆ ಮಾಡುವುದು ‘ಜಿಬ್ಲಿ’ ಎಂದೇ. ಅದ್ದರಿಂದ ಕಲಾಶೈಲಿಯ ದೃಷ್ಟಿಯಿಂದ ಅದನ್ನು ‘ಜಿಬ್ಲಿ’ ಎನ್ನುವುದೇ ಸೂಕ್ತ.

ಅಂತಿಮವಾಗಿ...

ಕಲೆಯನ್ನು ಡೆಮಾಕ್ರಟೈಸ್ ಮಾಡುವ ಮೂಲಕ ಜಗತ್ತನ್ನು ಇನ್ನಷ್ಟು ಸುಂದರಗೊಳಿಸಬಹುದು. ಕಲಾವಿದರು ಮತ್ತು ತಂತ್ರಜ್ಞರು ಜೊತೆಗೂಡಿ ಕೆಲಸ ಮಾಡುವ ದಿನಗಳು ಹತ್ತಿರದಲ್ಲಿವೆ. ಕಾಲ ಬದಲಾದಂತೆ ಕಲೆಯು ಕಂಪ್ಯೂಟರ್ ಗುಂಡಿಗಳ ಮೇಲೆ ಕೆಲಸ ಮಾಡಬೇಕಾಗಬಹುದು.

Leave a Comment

Your email address will not be published. Required fields are marked *