ಇನ್ನೋವೇಟರ್ಸ್ ಡಿಲೆಮಾ

article6 cover

The Innovator’s Dilemma ಕ್ಲೇಟನ್ ಕ್ರಿಸ್ಟೆನ್ಸೆನ್ ಎಂಬ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು 1997ರಲ್ಲಿ ಬರೆದಿರುವ ಪುಸ್ತಕ. ಜಗತ್ತಿನ ಆರು ಅತ್ಯುತ್ತಮ ಬಿಸಿನೆಸ್ ಪುಸ್ತಕಗಳಲ್ಲಿ ಇದೂ ಒಂದು ಎಂದು ಖ್ಯಾತಿ ಪಡೆದಿದೆ. ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್, ಆಪಲ್‌ನ ದಿವಂಗತ ಸ್ಟೀವ್ ಜಾಬ್ಸ್, ನೆಟ್ ಫ್ಲಿಕ್ಸ್ ನ ಸ್ಥಾಪಕ ರೀಡ್ ಹೇಸ್ಟಿಂಗ್ಸ್, ಇಂಟೆಲ್‌ನ ಮಾಜಿ ಮುಖ್ಯಸ್ಥ ಆಂಡಿ ಗ್ರೋವ್ ಮುಂತಾಗಿ ಅನೇಕರು ಈ ಪುಸ್ತಕ ತಮ್ಮ ಮೇಲೆ ಪ್ರಭಾವ ಬೀರಿರುವುದಾಗಿ ಹೇಳಿಕೊಂಡಿದ್ದಾರೆ.

ಅಂಥದ್ದೇನಪ್ಪ ಇದೆ ಇದರಲ್ಲಿ? ದೊಡ್ಡ ಕಂಪನಿಗಳು ತಮ್ಮ ನಿರಂತರ ಯಶಸ್ಸಿನಿಂದ ನಮ್ಮನ್ನು ಬೆರಗುಗೊಳಿಸುತ್ತವೆ. ಬ್ರಿಟಿಷ್ ಎಂಪೈರಿನಂತೆ ಸಾಮ್ರಾಜ್ಯ ವಿಸ್ತರಿಸುತ್ತಲೇ ಹೋಗುತ್ತವೆ. ಆದರೆ, ಒಂದಿನ ಇದ್ದಕ್ಕಿದ್ದಂತೆ ವಿಜಯನಗರ ಸಾಮ್ರಾಜ್ಯ ಅಧಃಪತನವಾದಂತೆ ಮಾರನೇ ದಿನಕ್ಕೆ ಪತನವಾದಂತೆ ಮುಖಾಡೆ ಮಲಗಿಬಿಡುತ್ತವೆ. ಅಥವಾ ಏನಾಗಿದೆ ಯಾಕಾಗಿದೆ ಎಂದು ಗೊತ್ತಾಗುವಷ್ಟರಲ್ಲಿ ಗೊತ್ತಾತ್ತಿದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿ ಟೈಟಾನಿಕ್ ನಂತೆ ಶಿಥಿಲವಾಗಿಕೊಂಡು ನಿಧಾನಕ್ಕೆ ಪ್ರಾಣ ಬಿಡುತ್ತವೆ. ಇದೆಲ್ಲ ಯಾಕಾಗುತ್ತದೆ ಎಂಬುದನ್ನು ಈ ಪುಸ್ತಕ ಚರ್ಚಿಸುತ್ತದೆ.

ಇನ್ನೋವೇಶನ್ ಎಂದರೆ ಹೊಸತು ಕಂಡುಹಿಡಿಯುವುದು. ಇದರಲ್ಲಿಯೂ 2 ವಿಧಗಳು. ಒಂದು ಇರೋದನ್ನೇ ಸ್ವಲ್ಪ ಸ್ವಲ್ಪ ಇಂಪ್ರೂವ್ ಮಾಡುತ್ತಾ ಮಾರುಕಟ್ಟೆಗೆ ಹೊಸತನ್ನು ಕೊಡುವುದು. ಒಂದು ಗಂಟೆ ಹಿಡಿಯುತ್ತಿದ್ದ ಮೊಬೈಲ್ ಚಾರ್ಜಿಂಗ್ ಅನ್ನು ಹತ್ತು ನಿಮಿಷಕ್ಕೆ ಇಳಿಸುವುದು ಇದಕ್ಕೆ ಉದಾಹರಣೆ. ಎರಡನೆಯದು ಡಿಸ್ರಪ್ಟಿವ್ ಇನ್ನೋವೇಶನ್ ಎಂದು. ಮಾರುಕಟ್ಟೆಯನ್ನೇ ತಲೆಕೆಳಗು ಮಾಡುವಂಥದ್ದು. ಅಂದ್ರೆ ಪೆಟ್ರೋಲ್ ಬದಲು ನೀರಿಲ್ಲಗಾಡಿ ಓಡಿಸುವ ಬಗೆಯನ್ನಲ್ಲ, ಕಾಲ್ ಮಾಡಲೆಂದು ಹುಟ್ಟಿಕೊಂಡ ಫೋನ್ ಅನ್ನು ಜನ ಕ್ಯಾಮೆರಾವನ್ನಾಗಿ ಬದಲಾಯಿಸಿಕೊಂಡರಲ್ಲ, ಅದರಿಂದ ನಿಜವಾದ ಕ್ಯಾಮೆರಾಗಳ ಅಸ್ತಿತ್ವವೇ ಇಲ್ಲವಾಯಿತಲ್ಲ, ಅದುವೇ ಡಿಸ್ರಪ್ಟಿವ್ ಇನ್ನೋವೇಶನ್. ಒಂದು ಸಮಯದಲ್ಲಿ ಒಂದೇ ಕೆಲಸ ಮಾಡಲು ಇದ್ದ ಫೋನ್ ಅನ್ನು ಕಂಪ್ಯೂಟರು ಸಮ ಹತ್ತು ಹಲವು ಕೆಲಸ ಮಾಡುವಂತೆ ಸ್ಮಾರ್ಟ್ ಆಗಿ ಬದಲಿಸಿದ್ದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ. ಏನಾಗಿದೆ ಎಂದು ಗೊತ್ತಾಗಿಯೂ ಏನೂ ಮಾಡಲಾಗದ ನೋಕಿಯಾ ಮುಳುಗಿದ್ದು ಹೀಗೆ. ಕಂಪನಿಯನ್ನು ಮೈಕ್ರೋಸಾಫ್ಟ್‌ಗೆ ಮಾರುತ್ತಾ ಮುಖ್ಯಸ್ಥ ಸ್ಟೀಫನ್ ಎಲೋಪ್ “ನಾವು ಯಾವ ತಪ್ಪನ್ನೂ ಮಾಡಲಿಲ್ಲ ಆದರೂ ಸೋತೆವು,” ಎನ್ನುವಾಗ ಆತನ ಕಣ್ಣುಗಳು ಅಕ್ಷರಶಃ ಮಂಜಾಗಿದ್ದವು.

ಇದಕ್ಕೆ ವಿರುದ್ಧ ಉದಾಹರಣೆಗಳು ಇದಾವೆ. ಹಲವಾರು ವರ್ಷ ಆನ್‌ಲೈನ್‌ನಲ್ಲಿ ಕೇವಲ ಪುಸ್ತಕಗಳನ್ನು ಆನಂತರ ಹಾಡು ಸಿನಿಮಾಗಳ ಸಿಡಿ ಮಾರುತ್ತಿದ್ದ ಅಮೆಜಾನ್ ಎಂಬ ಪುಟ್ಟ ಕಂಪನಿ ಕಾಲಾನಂತರ ರೀಟೇಲ್ ಮಾರುಕಟ್ಟೆಯನ್ನೇ ತಲೆಕೆಳಗು ಮಾಡಿಬಿಟ್ಟಿತು. ನಾಲ್ಕು ಗೋಡೆ ಕಟ್ಟಿ ಅಂಗಡಿ ಇಟ್ಟು ನಡೆಸುವ ವ್ಯಾಪಾರವನ್ನೇ ಅರ್ಧ ಮುಳುಗಿಸಿತು. ನಂಬಿರಿ, ಅಮೆಜಾನ್‌ನಲ್ಲಿ ಈಗ ಸೂಜಿ ಸಹ ಸಿಗುತ್ತದೆ. ಅಂತೆಯೇ ಆಪಲ್ ಐಫೋನ್ ತಯಾರಿಸುವ ಮೂಲಕ ತನ್ನದೇ ಐಪಾಡ್ ನ ಮಣ್ಣು ಮಾಡಿತು.

ಇಷ್ಟರಲ್ಲಿ ಒಂದು ಐಡಿಯಾ ಸಿಕ್ಕಿರುತ್ತೆ ಅಂದುಕೊಳ್ಳೋಣ. ದೊಡ್ಡ ಕಂಪನಿಗಳು ಎಲ್ಲವನ್ನೂ ಸರಿಯಾಗಿಯೇ ಮಾಡುತ್ತಾ ಗ್ರಾಹಕರು ಕೇಳಿದ್ದನ್ನೇ ಕೊಡುತ್ತಾ ಬಹಳ ಆರೋಗ್ಯವಾಗಿ ಸಾಗುತ್ತಿರುತ್ತವೆ. ಅತ್ತೆಲೊಂದು ಬದಿಯ ಮನೆಯಲ್ಲಿ ಹುಚ್ಚು ಉತ್ಸಾಹದ ಪುಟ್ಟ ಕಂಪನಿ ಯಾರೋ ಕೆಳದ ತಂತ್ರಜ್ಞಾನದ ಬಾಲ ಹಿಡಿದು ಅದನ್ನೇ ಪೋಷಿಸುತ್ತಾ ಎಲೆ ಮರೆಯಲ್ಲೇ ಗೂಡು ಕಟ್ಟುತ್ತಾ ಒಂದಿನ ತನ್ನ ಟೀಂ ಬಂದಾಗ ಮುಗಿಲೆತ್ತರಕ್ಕೆ ಬೆಳೆದು ನಿಂತು ಬಿಡುತ್ತದೆ. ಕೆಜಿಎಫ್ ಬರುವ ತನಕ ಯಶ್ ಅಷ್ಟೊಂದು ಯಶಸ್ಸು ಕಂಡವರಲ್ಲ, ಕೆಜಿಎಫ್ ಯಶಸ್ಸಿನ ನಂತರ ಅವರು ಅಲ್ಲಲ್ಲಿಯೇ ಬರಿ ನಿದರ್ಶನ ಉದಾಹರಣೆ ಕೊಡಲು ಆರಂಭಿಸಿದರು. ಮೊದಲ ನಾಲ್ಕೈದು ವರುಷ ಭೂಮಿಯೊಳಗೆ ಉಳಿಯುವ ಬಿದಿರು ಐದನೇ ವರುಷ ಎಕ್ಸದಂ 80 ಅಡಿ ಎತ್ತರಕ್ಕೆ ಎದ್ದು ನಿಲ್ಲುತ್ತದೆ ಎಂದು.

ಇದಕ್ಕೆ ಇತ್ತೀಚಿನ ಉದಾಹರಣೆ ಎನ್ವಿಡಿಯಾ. ಇದು ತೊಂಬತ್ತರ ದಶಕದಲ್ಲಿ ಆರಂಭವಾದ ಕಂಪನಿ. ಆಗೆಲ್ಲಾ ಜಗತ್ತು ಕಂಪ್ಯೂಟರುಗಳನ್ನು ನಿಧಾನಕ್ಕೆ ತಬ್ಬಿಕೊಳ್ಳುವ ಹೊತ್ತು. ಆ ಸಮಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ತಾನು ಕಂಪ್ಯೂಟರುಗಳಲ್ಲಿ ಗೇಮ್ ಆಡಲೆಂದು ಗ್ರಾಫಿಕ್ಸ್ ಕಾರ್ಡ್ (ಜಿಪಿಯು) ತಯಾರಿಸುವ ಕಂಪನಿ ಇದು. ಅಂದರೆ ಬಹಳ ಸೀಮಿತ, ಪುಟ್ಟ ಮಾರುಕಟ್ಟೆ. ಸರಿಸುಮಾರು 2006ರ ತನಕ ಇದು ಅಷ್ಟೊಂದು ಸದ್ದು ಮಾಡಿರಲಿಲ್ಲ, ಆಗ ಅದರ ಮಾರುಕಟ್ಟೆಯ ಮೌಲ್ಯ ಕೇವಲ 13 ಬಿಲಿಯನ್ ಡಾಲರ್. ಆ ಸಮಯದಲ್ಲಿ ಅದು ‘ಕೂಡ’ ಎನ್ನುವ ತಂತ್ರಜ್ಞಾನವನ್ನು ಪರಿಚಯಿಸಿತು. ಸರಳವಾಗಿ ಕೂಡ ಎಂದರೆ ಕೇವಲ ವಿಡಿಯೋ ಗೇಮ್‌ಗಳಿಗೆ ಸೀಮಿತವಾಗಿದ್ದ ಜಿಪಿಯುಗಳನ್ನು ಬೇರೆ ಯಾವಾ ಕ್ಷೇತ್ರಗಳಲ್ಲಿ ಬೇಕಾದರೂ ಉಪಯೋಗಿಸುವಂಥ ತಂತ್ರಜ್ಞಾನ. ಒಂದು ರೀತಿ ಸಾರ್ವತ್ರೀಕರಿಸುವಿಕೆ.

ಅಲ್ಲಿಂದ ಅದರ ಜಿಪಿಯುಗಳು ವೈಜ್ಞಾನಿಕ ಕ್ಷೇತ್ರಕ್ಕೆ, ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟವು. ವೇರು ಮಾರುಕಟ್ಟೆಯ ಕಂಪ್ಯೂಟರುಗಳಿಗೆ ಲಗ್ಗೆಯಿಟ್ಟವು. ಕ್ರಿಪ್ಟೋ ಕರೆನ್ಸಿ ಬಂತು, ಅದಕ್ಕಾಗಿ ಮೈನಿಂಗ್ ಬೇಡಿಕೆ ಹುಟ್ಟಿತು, ಅದಕ್ಕಾಗಿ ಪವರ್ ಫುಲ್ ಸಿಪಿಯು ಬೇಕಾಯಿತು, ಎನ್ವಿಡಿಯಾದ ಜಿಪಿಯು ಎದ್ದು ಕಂಡಿತು. ನಂತರ ಎಐ ಬಂತು, ಅದಕ್ಕಾಗಿ ಹತ್ತರಷ್ಟು ಪವರ್‌ಫುಲ್ ಸಿಪಿಯು ಬೇಕಾಯಿತು, ಎನ್ವಿಡಿಯಾ ಜಿಪಿಯುಗಳಪ್ಪೇ ಈ ಕೆಲಸ ಮಾಡಲು ಸಾಧ್ಯವಾಯಿತು. ತತ್ಪರಿಣಾಮ ಇಂದು ಎನ್ವಿಡಿಯಾದ ಒಂದು ಶೇರಿನ ಮೌಲ್ಯ ಒಂಬತ್ತುನೂರು ಡಾಲರ್ ಆಗಿದೆ! ಮಾರುಕಟ್ಟೆಯ ಮೌಲ್ಯ 2006ರಲ್ಲಿ ಹದಿಮೂರು ಬಿಲಿಯನ್ ಡಾಲರ್ ಇದ್ದದ್ದು ಈಗ ಎರಡು ಸಾವಿರ ಬಿಲಿಯನ್ ಡಾಲರ್ ಆಗಿದೆ!

ಇದೆಲ್ಲದರಿಂದ ನಾವು ಏನು ಅರ್ಥ ಮಾಡಿಕೊಳ್ಳಬಹುದು ಎಂದರೆ ಬೃಹತ್ ಸಾಮ್ರಾಜ್ಯಗಳಂತೆಯೇ ಶಕ್ತಿಶಾಲಿ ದೇಶಗಳಂತೆಯೇ ಮನುಷ್ಯನ ವಯೋಬೆಳೆಗಳಂತೆಯೇ ಕಾರ್ಪೊರೇಟ್ ಜಗತ್ತು ಸಹ ಎಂದು. ಇದೆಲ್ಲವೂ ನಿರಂತರ ತಿರುಗುವ ಚಕ್ರ. ‘ಕ್ರಿಸ್ಟೆನ್ಸನ್ ಡಿಲೆಮಾ’ ಎಂದಿರುವುದು ಇದಕ್ಕೇನೇ.

Leave a Comment

Your email address will not be published. Required fields are marked *