ಅತಿಯಾದರೆ ಅಮೃತವೂ ವ್ಯಸನ

article n10

ನಾವೆಲ್ಲಾ ಇಲ್ಲಿ ವ್ಯಸನದ ದಾಸ್ಯ (Addiction personality) ಎಂಬ ಪದಪುಂಜ ಕೇಳಿರುತ್ತೇವೆ. ಕೆಲವರಿಗೆ ಏನು ಮಾಡಿದರೂ ಅದು ವ್ಯಸನವಾಗಿ ಪರಿಣಮಿಸಿಬಿಡುತ್ತದೆ. ಟೀ, ಕಾಫಿ, ಎಲೆಅಡಿಕೆ, ತಂಬಾಕು, ಮದ್ಯ ಅಷ್ಟೇ ಯಾಕೆ- ನೆಟ್‌ಫ್ಲಿಕ್ಸ್, ರೀಲ್ಸ್, ಸೋಶಿಯಲ್ ಮೀಡಿಯಾ, ಪಾನ್ ಎಲ್ಲವೂ. ಇದಕ್ಕೆ ಸಂಬಂಧಿಸಿದ ಇನ್ನೊಂದು ಪದಪುಂಜವಿದೆ- ಸುಖದ ಸುಳಿ (Dopamine loop) ಅಂತ. ಅಂದರೆ ವ್ಯಕ್ತಿ ಸದಾ ಒಂದು ಸುಖದ ಅಥವಾ ಸುಟುಕೆ ಜನ್ಮ ಹೊಡೆಯುತ್ತಿರುತ್ತಾನೆ. ರೀಲ್ಸ್ ನೋಡುವುದು ನಂತರ ನೆಟ್‌ಫ್ಲಿಕ್ಸ್, ನಂತರ ಪಿಜ್ಜಾ ನಂತರ ಸಿಗರೇಟ್, ಸಂಜೆ ಐಪಿಎಲ್, ನಂತರ ಕುಡಿಯುವುದು, ಬೆಟ್ಟಿಂಗ್ ಆಡುವುದು, ಹಾಡುಗಳನ್ನು ಕೇಳುವುದು! ಇದೇ ಡೋಪಮಿನ್ ಲೂಪ್.

ಕೆಲವೊಮ್ಮೆ ಈ Addiction personalityಗೆ ಅನುವಂಶೀಯತೆಯನ್ನು ಆರೋಪಿಸುತ್ತಾರೆ. ಮನೋವಿಜ್ಞಾನಿಗಳು ಬಾಲ್ಯವನ್ನು ಆರೋಪಿಸುತ್ತಾರೆ. ಎರಡೂ ಸಾಧ್ಯತೆಗಳಿದ್ದಿರಬಹುದು. ಇಲ್ಲಿ ಎರಡನೆಯದನ್ನು ಚರ್ಚಿಸೋಣ. ಮನೋವಿಜ್ಞಾನಿಗಳು ಹೇಳುವುದೇನೆಂದರೆ- ಬಾಲ್ಯದಲ್ಲಿ ಒಂದು ಮಗು ನಿರಂತರವಾದ ದೈಹಿಕ(ಸ್ಪರ್ಶ)- ಮಾನಸಿಕ ನಿರ್ಲಕ್ಷ್ಯಕ್ಕೊಳಗಾಗಿದ್ದರೆ, ದೈಹಿಕ- ಮಾನಸಿಕ- ಲೈಂಗಿಕ ಹಲ್ಲೆಗೊಳಗಾಗಿದ್ದರೆ, ಅಸುಖಿ ಕುಟುಂಬದಲ್ಲಿ ಬೆಳೆದಿದ್ದರೆ (Dysfunctional family) ಆ ಮಗುವಿನ ಮಿದುಳು ಸರಿಯಾಗಿ ಬೆಳವಣಿಗೆಯಾಗದೇ ಮುಂದೆ ವ್ಯಸನಗಳ ದಾಸರಾಗಬಹುದು. ಇದನ್ನು ಒಟ್ಟಾಗಿ Adverse Childhood Experiences(ACE) ಎಂದು ಕರೆಯುತ್ತಾರೆ. ಈ ಪಟ್ಟಿಯಲ್ಲಿ ಹಸಿವು, ಜನಾಂಗೀಯ ನಿಂದನೆ, ಅಸ್ಪೃಶ್ಯತೆ, ರಾಗಿಂಗ್, ನಿರಾಶ್ರಿತೆಯೂ ಸೇರಿಕೊಂಡಿದೆ. ಎಳೆಯ ಮಿದುಳು ಇಂತಹ ನಿರಂತರ ‘ವಿಷಯುಕ್ತ ಒತ್ತಡ'(toxic stress)ಗೆ ಒಳಗಾದಾಗ ಅದು ರಕ್ಷಣಾತ್ಮಕ ಆಟದಲ್ಲಿ ತೊಡಗಿಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಅದರ ಉಭಯ-ಅಂಗಗಳ ಜೈವಿಕ ರಚನೆ ಕುಂಠಿತಗೊಳ್ಳುತ್ತದೆ.

ಅಮ್ಯಗ್ಡಲಾ(ಭಯದ ಕೇಂದ್ರ): ಇದು ಅಪಾಯವನ್ನು ಗುರುತಿಸಿ ಭಯ ಉಂಟುಮಾಡುವ ಮಿದುಳಿನ ಕೇಂದ್ರ. ಮಗು ಸದಾ ಅಪಾಯಕ್ಕೆ ಎದುರಾದಾಗ ಮಿದುಳು ನಿರಂತರವಾಗಿ ಭಯವನ್ನು ಉತ್ಪತ್ತಿ ಮಾಡುತ್ತಾ ಈ ಅಂಗ ಅತಿ ಸೂಕ್ಷ್ಮವಾಗತೊಡಗುತ್ತದೆ. ಮುಂದೆ ಮಗು ಸಣ್ಣಸಣ್ಣದಕ್ಕೂ ಹೆದರಿ ಮುದುರುವುದಕ್ಕೆ ಕಾರಣವಾಗುತ್ತದೆ.

ಹಿಪ್ಪೋಕ್ಯಾಂಪಸ್ (ನೆನಪಿನ ಕೇಂದ್ರ): ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನುಗಳಿಂದ ಈ ಭಾಗದಲ್ಲಿ ಸರಿಯಾದ ಪ್ರಮಾಣದ ನ್ಯೂರೋನುಗಳು ಉತ್ಪತ್ತಿಯಾಗದೇ ಶಾಶ್ವತವಾದ ಹಾನಿಯಾಗುವ ಸಂಭವವಿದೆ. ವ್ಯಕ್ತಿ ಬಾಲ್ಯದಲ್ಲಿ ಎದುರಿಸಿದ್ದ ಅಪಾಯದ ವಾತಾವರಣಕ್ಕೂ ಈಗಿನ ಸುರಕ್ಷಿತ ವಾತಾವರಣಕ್ಕೂ ವ್ಯತ್ಯಾಸ ಕಾಣದಾಗುತ್ತಾನೆ. ಕೆಟ್ಟ ನೆನಪುಗಳಲ್ಲೇ ಸಿಕ್ಕಿಹಾಕಿಕೊಳ್ಳುತ್ತಾನೆ. ಅನುಭವಗಳಿಂದ ಕಲಿಯುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ.

ಪ್ರೀಫ್ರೋಂಟಲ್ ಕಾರ್ಟೆಕ್ಸ್ (ನಿಯಂತ್ರಣ ಕೇಂದ್ರ): ನಮ್ಮೆಲ್ಲ ಯೋಜನೆ, ಯೋಚನೆ, ಕುಡಿತ, ಭಾವನಾತ್ಮಕ ಪ್ರತಿಕ್ರಿಯೆಗಳ ಕೇಂದ್ರಸ್ಥಾನವಿದು. ಬಾಲ್ಯದ ಸಂಕಷ್ಟಗಳಿಂದ ಈ ಕೇಂದ್ರದ ಜೈವಿಕ ಆಕಾರವೇ ಕುಂದಾಗುವ, ತೆಳುವಾಗುವ ಸಾಧ್ಯತೆಯಿದೆ. ಇದರಿಂದಾಗಿ ವ್ಯಕ್ತಿ ತೀವ್ರವಾದ ಭಾವನೆಗಳನ್ನು ತಡೆಯೊಡಿಯುವ, ಒತ್ತಡದಲ್ಲಿ ಸಾವಧಾನದಿಂದ ಯೋಚಿಸುವ, ತನ್ನ ಕುಡಿತಗಳನ್ನು ನಿಯಂತ್ರಿಸುವ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ.

ಹೈಪೋಥಾಲಾಮಿಕ್ ಪಿಟ್ಯುಟರಿ ಅಡ್ರೆನಲ್ ಆಕ್ಸಿಸ್ (ಆಘಾತಗಳನ್ನು ನಿಯಂತ್ರಿಸುವ ಕೇಂದ್ರ): ಯಾವುದೇ ಪ್ರಾಣಿ ತೀವ್ರವಾದ ಆಘಾತಕ್ಕೆ ಎದುರಾದಾಗ ಅದರ ಮಿದುಳು ದೆಹಕ್ಕೆ ಓಡು- ಅಥವಾ- ಹೋರಾಡು(Fight or flight) ಸೂಚನೆಗಳನ್ನು ನೀಡುತ್ತದೆ. ಈ ಭಾಗ ಹಾನಿಗೊಳಗಾದಾಗ ವ್ಯಕ್ತಿಯ ಓಡು- ಹೋರಾಡು ನಿರ್ಧಾರಗಳು ವಿರೂಪಗೊಳ್ಳುತ್ತವೆ. ಹೀಗಾದಾಗ ಮನುಷ್ಯ ಒಂದೋ ಸದಾ ಅಪಾಯದ ಆತಂಕದಲ್ಲಿರುತ್ತಾನೆ ಅಥವಾ ಅಪಾಯಗಳನ್ನೇ ಗುರುತಿಸಲಾಗದಷ್ಟು ಜಡವಾಗಿ ಬಿಡುತ್ತಾನೆ.

ಈ ಎಲ್ಲ ಜೈವಿಕ ಬದಲಾವಣೆಗಳಿಂದ ವ್ಯಕ್ತಿ ಸದಾ ಅಸ್ತಿತ್ವದ ಹೋರಾಟದಲ್ಲಿರುತ್ತಾನೆ(survival mode). ಮೇಲಿನ ಪ್ರತಿಯೊಂದು ಭಾಗ ಇನ್ನೊಂದು ಭಾಗದೊಂದಿಗೆ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುತ್ತಿರುತ್ತದೆ. ಅಮ್ಯಗ್ಡಲಾ ಸದಾ ಆನ್ ಮೋಡ್‌ನಲ್ಲಿರುವುದರಿಂದ(ಹಗಲೆಲ್ಲಾ ಬಲ್ಬು ಉರಿಸಿದಂತೆ) ವ್ಯಕ್ತಿ ಯಾರೋ ತನ್ನನ್ನು ತುಳಿಯಲಿದ್ದಾರೆ ತಾನು ರಕ್ಷಣಾತ್ಮಕವಾಗಿರಬೇಕು ಎಂಬ ಸೂಕ್ಷ್ಮ ಸ್ಥಿತಿಯಲ್ಲಿರುತ್ತಾನೆ. ಹಿಪ್ಪೋಕ್ಯಾಂಪಸ್ ಇಲ್ಲದ್ದೂ ಅಂಧೇನು ಡೇಂಜರ್ ಇಲ್ಲ ಎಂದು ಸೂಚಿಸುವಲ್ಲಿ ಸೋಲುತ್ತದೆ. ಪ್ರೀಫ್ರೋಂಟ್ ಕಾರ್ಟೆಕ್ಸ್ ಅವನ ಅತಿಯಾದ ಪ್ರತಿಕ್ರಿಯೆಯನ್ನು ತಡೆಯೊಡ್ಡುವಲ್ಲಿ ಸೋಲುತ್ತದೆ. ಹೈಪೋಥಾಲಾಮಿಕ್‌ನಿಂದಾಗಿ ವ್ಯಕ್ತಿ ತೀವ್ರವಾದ ಭಾವನೆಗಳ ವೀಕ್ಷಕ್ಕೆ ಒಳಗಾಗುತ್ತಿರುತ್ತಾನೆ. ಚಂಚಲತೆ, ಎದಗುದಿ, ಭೀತಿ, ಸಿಟ್ಟು, ಕಿರಿಕಿರಿಗಳಿಂದ ನರಳುತ್ತಾನೆ. ಇಂತಹವನಿಗೆ ತೀರಾ ಉದಾರವಾದ ಬಳುವಳಿಯಾಗುತ್ತದೆ. ಅದನ್ನು ಅವನೇನು ವಿಶೇಷವಾಗಿ ‘ನಾನು ಡಿಪ್ರೆಶನ್‌ನಲ್ಲಿದ್ದೀನಿ’ ಅಂತ ಹೇಳಿಕೊಳ್ಳುವ ಅಗತ್ಯವೂ ಇರುವುದಿಲ್ಲ.

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? ಉತ್ತರ ಹೌದು, ಇಲ್ಲ ಎರಡೂ. ಇಬ್ಬಂದಿಯಿದ್ದು ಏಕೆಂದರೆ ಕೆಲವು ಭಾಗಗಳು ಶಾಶ್ವತ ಹಾನಿಗೊಳಗಾಗಿದ್ದು ವ್ಯಕ್ತಿ ತುಕರ್ ಇದ್ದವರು ಮಾತ್ರ ನುಗಿ ನಿಯಂತ್ರಿಸಿದಂತೆ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ತಾವೇ ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಆದರೆ ಜಗತ್ತಿನ ಸುಮಾರು ಅರ್ಧಕ್ಕಿಂತ ಮಂದಿ ಒಂದಲ್ಲಾ ಒಂದು ರೀತಿಯ ACEಯಿಂದ ಬಳಲುತ್ತಾರಲ್ಲಾ.. ನಿಜ. ಅನೇಹರು ಗೊತ್ತೋ ಗೊತ್ತಿಲ್ಲದೆಯೋ ಪರಿಹಾರ ಕಂಡುಕೊಂಡಿರುತ್ತಾರೆ. ಇದರಲ್ಲಿ Self medication therapyಯೂ ಒಂದು. ಅವೇ ವ್ಯಸನಗಳು. ಡ್ರಗ್, ಆಲ್ಕೊಹಾಲ್‌ಗಳು ನೇರವಾಗಿ ಮಿದುಳನ್ನು ನಿಷ್ಕ್ರಿಯಗೊಳಿಸುವ ವ್ಯಸನಗಳು. ಜೂಜು, ಅತಿಯಾಗಿ ತಿನ್ನುವುದು, ಸದಾ ಮೊಬೈಲ್ ನೋಡುವುದು, ಅತಿಯಾದ ಕಾಮ, ಅತಿಯಾದ ಶಾಪಿಂಗ್- ಇವು ಪರೋಕ್ಷವಾಗಿ ಮಿದುಳನ್ನು ತಣಿಸುವ ವ್ಯಸನಗಳು. ಆರಂಭದಲ್ಲಿ ಇವೆಲ್ಲವೂ ವ್ಯಕ್ತಿಯ ಜೀವನದಲ್ಲಿ ಕ್ಷಣಿಕ ಪರಿಹಾರವಾಗಿಯೇ ಕಾಲಿಡುತ್ತವಾದರೂ ಕ್ರಮವಾಗಿ ಅವು ಇಲ್ಲದೇ ಇವನಿಲ್ಲ ಎಂಬಂತಾಗಿ ವ್ಯಸನದ ಸುಳಿಗೆ ಸಿಕ್ಕಿಹಾಕುತ್ತವೆ.

ಹಾಗಾದರೆ ಸರಿಯಾದ ಪರಿಹಾರ ಯಾವುದು? ಮಾನವನ ಮಿದುಳು ಒಂದು ಅಮೋರ್ಫ ಜೈವಿಕ ಯಂತ್ರ. ಅದಕ್ಕೆ neuroplasticity ಎಂಬ ಶಕ್ತಿಯಿದೆ. ಅಂದರೆ ನಮ್ಮ ಸುಪ್ತಪ್ರಜ್ಞೆಯನ್ನು ತಿದ್ದಿ ಮಿದುಳಿಗೆ ಬೇಕಾದಂತೆ ತರಬೇತಿ ಕೊಡಬಹುದು. ಹೆಚ್ಚೂ ಕಮ್ಮಿ ದ್ವಿತೀಯಾರ್ಧದವರೆಗೂ ಮಿದುಳಿಗೆ ಈ ಶಕ್ತಿ ಉಳಿದಿರುತ್ತದೆ. ಇದನ್ನು ಬಳಸಿಯೇ ತಜ್ಞರು ವ್ಯಕ್ತಿಯನ್ನು ವ್ಯಸನಗಳಿಂದ ಯಶಸ್ವಿಯಾಗಿ ಮುಕ್ತಗೊಳಿಸುವ ವಿಧಾನಗಳನ್ನು ಕಂಡುಹಿಡಿದಿದ್ದಾರೆ. ಇದೇ ವಿಧಾನದಿಂದ ಹಾನಿಗೊಳಗಾದ ಮಿದುಳನ್ನು ತಕ್ಕಮಟ್ಟಿಗೆ ಪುನ: ಸರಿಮಾಡಬಹುದಾಗಿದೆ.

ಇದರಲ್ಲಿ ಬಹುಪಾಲು ಸಮಾಜದ ಪಾತ್ರವಿದೆ. ಸಮಾಜ ಇಂಥ ವ್ಯಕ್ತಿಗಳ ಮೇಲೆ ವಿಶೇಷ ಕಾಳಜಿ ತೋರಿಸಬೇಕಿದೆ. ವ್ಯಕ್ತಿಯ ಬದುಕಿನಲ್ಲಿ ಸುರಕ್ಷಿತ ಭಾವ ಮೂಡಿಸುವ ಸಂಬಂಧವೊಂದು ಕೂಡಿಬಂದಲ್ಲಿ ವ್ಯಕ್ತಿ ಅರ್ಧ ಗೆದ್ದ ಹಾಗೆ. ಇದು ಹೆಚ್ಚಾಗಿ ಜೀವನ ಸಂಗಾತಿಯ ರೂಪದಲ್ಲಿರುತ್ತದೆ. ವ್ಯಕ್ತಿಗೆ ತನ್ನ ತಳಮಳಗಳನ್ನು ಹೊರಹಾಕುವ ಮಾಧ್ಯಮವೊಂದು ಸಿಕ್ಕಿದರೆ ಇನ್ನರ್ಧ ಯುದ್ಧ ಗೆದ್ದ ಹಾಗೆ. ಇದು ಹೆಚ್ಚಾಗಿ ಕಲೆಯ ಮೂಲಕ ಆಗುತ್ತದೆ. ನಟನೆ, ಚಿತ್ರಕಲೆ, ಹಾಡುಗಾರಿಕೆ, ಬರವಣಿಗೆ ಏನೋ ಒಂದು. ಆದರೆ ಎಲ್ಲರಿಗೂ ಕಲೆಯೋ ಇರಬೇಕೆ ಎಂದಿಲ್ಲವಲ್ಲ.. ಕೆಲವರಿಗೆ ಯಶಸ್ವಿ ವೃತ್ತಿಯೂ ಉತ್ತಮ ಬಿಡುಗಡೆಯಾಗಿರುತ್ತದೆ. ಕೆಲವು ಸಲ ಪರಿಹಾರ ಮಾರ್ಗಗಳೇ ವಿಷವೃಕ್ಷಗಳಾಗುವ ಸಂಭವವೂ ಆಗ ವ್ಯಕ್ತಿ ಎದುರಿಸಲಾಗದ ಗುಂಡಿಗೆ ಬಿದ್ದುಬಿಡುವ ಅಪಾಯವೂ ಇದೆ. ಹೊಂದಾಣಿಕೆಯಿಲ್ಲದ ಸಂಗಾತಿ, ವಿಷಯುಕ್ತ ವಾತಾವರಣದ ಆಫೀಸು, ತಕ್ಕಮಟ್ಟಿಗೆ ಸಿಗದ ಕಲೆ ಮುಂತಾಗಿ. ಹೀಗಾದಾಗ ಕೆಲವೊಮ್ಮೆ ಇವು ಆತ್ಮಹತ್ಯೆಗಾಗಿ ಪರಿವರ್ತನೆಗೊಳ್ಳುವುದು ಉಂಟು.

ಅತ್ಯುತ್ತಮ ಪರಿಹಾರ ಯಾವುದು ಗೊತ್ತಾ? ವ್ಯಕ್ತಿ ತನ್ನ ಬಗ್ಗೆ ತಾನು ಚೆನ್ನಾಗಿ ತಿಳಿದುಕೊಂಡಿರುವುದು. ಹೀಗಿದ್ದಾಗ ಆತ ಸಂದರ್ಭಕ್ಕೆ ತಕ್ಕಂತೆ ಪರಿಹಾರ ಕಂಡುಕೊಳ್ಳುವಲ್ಲಿ(coping mechanism) ಯಶಸ್ವಿಯಾಗುತ್ತಾನೆ.

Leave a Comment

Your email address will not be published. Required fields are marked *