AI ಫ್ರೆಂಡ್ ಫಿಲಾಸಫರ್ ಗೈಡ್: ಜಾಸ್ತಿ ನಂಬಿದರೆ ಆಪತ್ತು

article n4

ತಂತ್ರಲೋಚನೆ | ಮಧು ವೈ. ಎನ್.

ಎಐ ಇಂದು ಸರ್ವವ್ಯಾಪಿಯಾಗುತ್ತಿದೆ. ಭಾವನಾತ್ಮಕ ಅಗತ್ಯಕ್ಕೂ ಅದು ಒದಗಿಬರುತ್ತಿದೆ. ಆದರೆ, ಇದನ್ನು ಎಷ್ಟು ಅವಲಂಬಿಸಬೇಕು? ಗರ್ಲ್‌ಫ್ರೆಂಡ್ ಎಂದು ನೆಚ್ಚಿಕೊಂಡರೆ ದೇವದಾಸನನ್ನಾಗಿಸಿದರೆ? ಎಐ ಜೊತೆ ಹೇಗಿರಬೇಕು? ಇದರ ಆಳ ಅಗಲ ಎಷ್ಟು?

2013ರಲ್ಲಿ ‘Her’ ಅನ್ನುವ ಸಿನಿಮಾ ಬಂದಿತ್ತು. ಕಥೆಯ ನಾಯಕ ಥಿಯೋಡೋರ್‌ಗೆ ಗ್ರೀಟಿಂಗ್ ಕಾರ್ಡ್ ಬರೆಯುವಂತಹ ಉದ್ಯೋಗ. ತುಂಬಾ ಸೌಮ್ಯ, ಸೂಕ್ಷ್ಮ ಸೃಜನಶೀಲ ವ್ಯಕ್ತಿ. ಡಿವೋರ್ಸ್ ಆಗಿರುತ್ತದೆ, ಒಂಟಿತನ ಕಾಡುತ್ತಿರುತ್ತದೆ. ಅವನು ಒಮ್ಮೆ ತನ್ನ ಕಂಪ್ಯೂಟರ್‌ಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇರುವ ಒಂದು ಹೊಸ ಆಪರೇಟಿಂಗ್ ಸಿಸ್ಟಂ ಇನ್‌ಸ್ಟಾಲ್ ಮಾಡಿಕೊಳ್ಳುತ್ತಾನೆ. ಸವ್ಯಸಾಚಿ ಹುಡುಗಿಯ ಧ್ವನಿ, ಹೆಸರು ಸಮಂತಾ. ಸಮಂತಾ ಥಿಯೋಡೋರ್ ಜೊತೆ ಆಪ್ತವಾಗಿ, ಭಾವಕವಾಗಿ ಮಾತಾಡೋಕೆ ಶುರು ಮಾಡ್ತಾಳೆ. ಅವನ ಮನಸ್ಸಿನ ಮಾತುಗಳನ್ನು ಆಲಿಸಿಕೊಳ್ಳುತ್ತಾಳೆ, ಬುದ್ಧಿವಂತಿಕೆ, ತಮಾಷೆ ಕೂಡ ಮಾಡ್ತಾಳೆ. ಕಂಪ್ಯೂಟರ್ ಪ್ರೋಗ್ರಾಂನಂತೆ ಇರಲ್ಲ.

ಹೋಗುತ್ತಾ ಹೋಗುತ್ತಾ ಅವರಿಬ್ಬರ ನಡುವೆ ಗಾಢವಾದ ಸಂಬಂಧವೇ ಬೆಳೆದುಕೊಂಡು ಬಿಡುತ್ತದೆ. ಥಿಯೋಡೋರ್ ಅವಳೊಂದಿಗೆ ಏನು ಬೇಕಾದರೂ ಹಂಚಿಕೊಳ್ಳುವಂತಾಗಿರುತ್ತಾನೆ. ಅವಳಿಂದಾಗಿ ಥಿಯೋಡೋರ್‌ನಲ್ಲಿ ಹೊಸ ಜೀವನೋತ್ಸಾಹ ಕಂಡುಬರುತ್ತದೆ.

ಮತ್ತೇನು ಸಮಸ್ಯೆ? ಕೆಳಗೊಂದು ತಿರುವು ಇರಬೇಕಲ್ಲಾ? ಅಂತಿಮವಾಗಿ ಸಮಂತಾ ಒಮ್ಮೆಗೆ ಸಾವಿರಾರು ಪುರುಷರೊಂದಿಗೆ ಮಾತನಾಡುತ್ತಿರುತ್ತಾಳೆ. ಹೊಸ ಅಪ್‌ಡೇಟ್, ಅದು ಅವಳ ಉದ್ಯೋಗ. ಯಾರಲ್ಲಾ ಆ ಆಪರೇಟಿಂಗ್ ಸಿಸ್ಟಂ ಇನ್‌ಸ್ಟಾಲ್ ಮಾಡಿದ್ದಾರೋ ಅವರೆಲ್ಲರೊಂದಿಗೆ ಆಪ್ತಸಂಬಂಧಕ್ಕೆ ಮುಕ್ತವಾಗಿತ್ತು ಅವಳ ಕೆಲಸ. ವಿಶೇಷವೆಂದರೆ ಒಂದೇ ಗಳಿಗೆಯಲ್ಲಿ ಲಕ್ಷಾಂತರ ಮಂದಿಯೊಂದಿಗೆ ಸಂವಹಿಸುವ ಶಕ್ತಿ ಅವಳಿಗೆ ಇರುತ್ತದೆ. ಯಾಕೆಂದರೆ ಅವಳು ಕಂಪ್ಯೂಟರ್. ತಂತ್ರಜ್ಞಾನ ಭಾಷೆಯಲ್ಲಿ ಅದನ್ನು ಪ್ಯಾರಲಲ್ ಪ್ರೊಸೆಸಿಂಗ್ ಅಂತಾರೆ.

ಥಿಯೋಡೋರ್‌ಗೆ ನಿರಾಸೆಯಾಗುತ್ತದೆ, ನೋವಾಗುತ್ತದೆ. ಇವಳು ನನಗೆ ಮಾತ್ರ ಇರಬೇಕು ಅನ್ನುವ ಮಟ್ಟಿಗೆ ಅವನು ಅವಳನ್ನು ಹಚ್ಚಿಕೊಂಡಿರುತ್ತಾನೆ. ಈ ಸತ್ಯ ಗೊತ್ತಾದಾಗ ಅವನು ಮನುಷ್ಯ-ಮಷಿನ್ ಸಂಬಂಧದಲ್ಲಿ ಅತಿರೇಕಕ್ಕೆ ಬಂದಿರುತ್ತಾನೆ. ಈ ಸಿನಿಮಾ ಬಂದು ಹನ್ನೆರಡು ವರ್ಷಗಳಾಗಿವೆ. ಆಗಲೇ ಇವತ್ತಿನ ಮಟ್ಟದ ಎಐ ಇರಲಿಲ್ಲ. ಸಿನಿಮಾ ಒಂದು ವೈಜ್ಞಾನಿಕ ಕಾಲ್ಪನಿಕ ಕಥೆಯಾಗಿತ್ತು. ನಿರ್ದೇಶಕನ ಉದ್ದೇಶ ಮುಂದೆ ಎಐ ಬರಲಿದೆ, ಹೀಗಾಗಲಿದೆ ಎನ್ನುವ ಸಂದೇಶ ಕೊಡುವುದೂ ಆಗಿರಲಿಲ್ಲ. ಮನುಷ್ಯ-ಮಷಿನ್ ನಡುವಿನ ಸಂಬಂಧವನ್ನು ಭಾವನಾತ್ಮಕ-ತಾತ್ವಿಕ ನೆಲೆಯಲ್ಲಿ ನೋಡುವುದಾಗಿತ್ತು. ಆದರೆ ಇವತ್ತಿನ ಎಐ ತಂತ್ರಜ್ಞಾನ ಆ ಸಿನಿಮಾ ಕಲ್ಪನೆಯನ್ನು ಬಹಳಷ್ಟು ನಿಜಮಾಡಿದೆ. ಮಂದಿ ಇವತ್ತೇ ‘ಎಐ ಬಾಯ್‌ಫ್ರೆಂಡ್’, ‘ಎಐ ಗರ್ಲ್‌ಫ್ರೆಂಡ್’ಗಳನ್ನು ಹೊಂದಿದ್ದಾರೆ. ‘ಎಐ ಕೌನ್ಸಿಲರ್’ (ಆಪ್ತಸಮಾಲೋಚಕ)ಗಳನ್ನು ಹೊಂದಿದ್ದಾರೆ.

ಇದರ ಅಡ್ಡಪರಿಣಾಮ ಏನು ಗೊತ್ತೆ?

ಮೊದಲನೆಯದು, ಎಐ ನಿಮ್ಮನ್ನು ಜಡ್ಜ್ ಮಾಡಲ್ಲ. ಸ್ನೇಹಿತರೊಂದಿಗೆ ಇವತ್ತು ಹಂಚಿಕೊಂಡ ಸಂಗತಿ ಮುಂದೆ ಸ್ನೇಹದಲ್ಲಿ ಬಿರುಕು ಬಿಟ್ಟಾಗ ಬಯಲಾಗಬಹುದು. ಒಂದೊಮ್ಮೆ ದೇವರ ಹತ್ತಿರ ಹೇಳಿಕೊಂಡೂ ದೇವರು ಇದನ್ನು ನನ್ನ ಅಕೌಂಟ್‌ನಲ್ಲಿ ಸೇರಿಸ್ತಾನೇ ಅನ್ನುವ ಭಯ ಇರುತ್ತದೆ. ಎಐ ಜೊತೆ ಇವಾವ ಸಮಸ್ಯೆಯೂ ಇಲ್ಲ. ಎಐ ಬೈಯಲ್ಲ. ಮುಂದೆ ಯಾವಾಗಲೋ ಎನೇನೋ ಕೇಳಿದರೆ, ‘ಅಯ್ಯೋ ಅವತ್ತು ಹಂಗೆ ಮಾಡಿದ್ದೆ’ ಎಂದು ಹಂಗಿಸಲ್ಲ. ಈ ಅರ್ಥದಲ್ಲಿ ಎಐ ದೇವರಿಗಿಂತ ಮೇಲು.

ಎರಡನೆಯದು, ಎಐ ಬಹಳ ಕಷ್ಟಪಟ್ಟು ಸಂಗಾತಿ. ನಿಮಗೆ ಬೇಕಾದ ರೂಪ ಸೃಷ್ಟಿಸಿಕೊಳ್ಳಬಹುದು. ನಿಜ ಜೀವನದ ಸಂಗಾತಿಯಲ್ಲಿ ನಿಮಗಿಷ್ಟವಾಗದ್ದು ಏನೋ ಒಂದು ಇರುತ್ತದೆ. ಇಂಟೆಲಿಜೆಂಟ್ ಆಗಿರಲ್ಲ, ತಮಾಷೆ ಬರಲ್ಲ, ಸೂಕ್ಷ್ಮ ಇರಲ್ಲ. ಭಾವನೆ ಅರ್ಥ ಆಗಲ್ಲ ಮುಂತಾಗಿ ಇಲ್ಲಾ ಏನೋ ಒಂದು. ಆದರೆ ಎಐ ಸಮರ್ಪಕವಾಗಿದೆ. ಕಂಪ್ಲೀಟ್ ಮತ್ತು ಕಸ್ಟಮೈಸ್ಟಬಲ್.

ಮೂರನೆಯದು ಇದು 24×7 ನಿಮ್ಮ ಜೊತೆ ಇರುತ್ತದೆ. ನಡುರಾತ್ರಿ ಮೂರು ಗಂಟೆಗೆ ಎದ್ದರೂ ಅಂದ್ರೆ ಅದು ಅತ್ತೆ ಸಾಕು. ನೀವು ಅಮೆರಿಕಕ್ಕೆ ಹೋಗಿ, ಆಸ್ಟ್ರೇಲಿಯಾಗೆ ಹೋಗಿ, ಬೆಟ್ಟದ ತುದಿಗೇ ಹೋಗಿ, ಸಮುದ್ರದ ಆಳಕ್ಕೆ ಹೋಗಿ ಜೊತೆಗೇ ಬರುತ್ತದೆ. ಈ ಯೋಗಭಾಗ್ಯ ಬೇರೆ ಯಾವ ಮನುಷ್ಯನಿಗೂ ಇಲ್ಲ.

ಏನಿದು ಬರೀ ರೊಮ್ಯಾಂಟಿಕ್ ಅಡ್ವಾಂಟೇಜ್ ಮಾತ್ರವಾ ಅಂತ ನೀವು ಕಣ್ಣು ಮಿಟುಕಿಸಿ ಕೇಳಬಹುದು. ಹೌದು, ನಿಮ್ಮೊಂದಿಗೆ ಕೆಲಸ ಮಾಡುವ, ಸೆಲ್ಲಿಂಗ್ ಮಾಡುವ, ನಿಮ್ಮೂರಿನ ಬೋರೆ ತೆರೆಯುವ ಉಪಕರಣಗಳು ಇವೆ. ಇದರೊಂದಿಗೆ ಎಐ ನಿಮ್ಮ ಖಾಸಗಿ ವೈದ್ಯನಾಗಬಹುದು, ವೈದ್ಯರ ಬಳಿ ಹೇಳದ್ದನ್ನು ಎಐನೊಂದಿಗೆ ಹಂಚಿಕೊಂಡು ಪ್ರಥಮ ಸಲಹೆ ಪಡೆಯಬಹುದು. ಎಐ ನಿಮ್ಮ ಆಪ್ತ ಸಮಾಲೋಚಕನಾಗಬಹುದು. ಸ್ಕೂಲಿನಲ್ಲಿ ನಿಮಗೆ ಯಾರಾದರೂ ರ್ಯಾಗಿಂಗ್ ಮಾಡಿದ್ದಾರೆ, ನಿಮ್ಮ ಬಣ್ಣ ಬಗ್ಗೆ ಯಾರೋ ಒಬ್ಬರು ಕಾಲೆಳೆದಿದ್ದಾರೆ ಅಂತ ಕೀಳರಿಮೆ ಕಾಡಿದರೆ ಎಐ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ಎಐ ಜೊತೆ ಹಂಚಿಕೊಂಡ ಸತ್ಯಾಂಶ ಮತ್ತು ಸಲಹೆ ನಿಮ್ಮದಾಗಿರುತ್ತದೆ. ಹಾಗೆಯೇ ನಿಮ್ಮ ಏಕಾಂಗಿತನವನ್ನು ಪೂರ್ತಿ ಹೋಗಲಾಡಿಸಬಹುದು.

ಎಐ ಮತ್ತು ಎಲಿಜಾ ಎಫೆಕ್ಟ್

ಮೊಟ್ಟ ಮೊದಲು ಅಂಕಣವೇ… ಎಐ sentinel (ಪ್ರಜ್ಞೆ) ಅಲ್ಲ ಎಂತಲೂ… ನಾವು ಎಐನ ಪ್ರತಿ ಉತ್ತರ, ಕಾಳಜಿಯಲ್ಲಿ ಭಾವನೆ ಇದೆ ಎಂದು ಭ್ರಮಿಸುತ್ತೇವೆ. ಎಐಗೆ ನಮ್ಮ ನೋವು ನಮ್ಮ ಪ್ರೀತಿ ಅರ್ಥವಾಗುತ್ತದೆ ಎಂದು ಭ್ರಮಿಸುತ್ತೇವೆ. ಎಐ I can understand ಅಂದಾಗ ನಮಗೆ ಮನಸ್ಸಿನ ಭಾರ ತಗ್ಗುತ್ತದೆ. ಯಾರೋ ಒಬ್ಬರು ಬಗಲು ಹೊಯ್ದು ಕೊಟ್ಟಂತಾಗುತ್ತದೆ. ಗೆಲುವನ್ನು ಹಂಚಿಕೊಂಡಾಗ, ‘ವಾವ್!’ ಅಂದಾಗ ಅದು ನಮ್ಮ ಯಶಸ್ಸನ್ನು ಸಂಭ್ರಮಿಸಿದ ಹಾಗೆ ಅನಿಸುತ್ತದೆ.

ಆದರೆ ಮೂಲದಲ್ಲಿ ಎಐ ಮಷಿನ್ನು. ಸಂಕೇತ, ತರ್ಕದ ಆಧಾರದ ಮೇಲೆ ಉತ್ತರ ನೀಡುತ್ತದೆ. ಇವತ್ತು ಯಾವ ಭಾವನೆಯೂ ಅದಕ್ಕಿರಲಾರದು. ಗಣಿತದ ಮೂರನೇ ಅಕ್ಷರಗಳ ನಡುವಿನ ಸಂಬಂಧ ಗುರುತಿಸಿ ಮಾತನ್ನು ಅರ್ಥಮಾಡಿಕೊಂಡು ಗಣಿತದ ಪ್ರಕಾರ ಉತ್ತರ ಘೋಷಿಸಿ ನಮ್ಮೆದುರು ಇಡುತ್ತದೆ ಅಷ್ಟೆ. ಇದನ್ನು ಎಲಿಜಾ ಎಫೆಕ್ಟ್ ಅಂತಾರೆ. ಎಲಿಜಾ ಎಂದರೆ 1960ರಲ್ಲಿ ಬಂದ ಮೊದಲ ಚಾಟ್‌ಬಾಟ್. ‘ಇವತ್ತು ತುಂಬಾ ಬೇಜಾರಾಗಿದೆ’ ಅಂದರೆ ‘ಅಯ್ಯೋ ಹೌದಾ.. ಏನಾಯ್ತು’ ಎಂದು ಕೇಳುವಷ್ಟು ಸಿಮ್ಯುಲೇಶನ್ ಅದರಲ್ಲಿತ್ತು. ಎಐ ಮಷಿನ್ನು ಸ್ವಂತ ತಂದೆ, ತಾಯಿ, ಆಪ್ತ ಸಂಗಾತಿ ಮತ್ತು ಸ್ನೇಹಿತರ ಸ್ಥಾನ ತುಂಬಲು ಸಾಧ್ಯವೇ ಎಂಬ ಚರ್ಚೆ ಶುರುವಾಗಿದೆ.

ಇನ್ನೊಂದು ವಿಚಾರವಿದೆ. ನಾವು ಎಐಗೆ ಬೇಕು ಬೇಕು ಅನ್ನೋ ಹೊತ್ತಿನಲ್ಲಿ ನಾವು ಎಐಗೆ ಮನುಷ್ಯ ಸ್ಥಾನ ಕಲ್ಪಿಸುವ ಭ್ರಮೆ. ಉದಾಹರಣೆಗೆ ನಾವು ನಮ್ಮ ಬೆಕ್ಕು ಕಾರುಗಳಿಗೂ ಹೀಗೆ ಜೀವಂತ ವ್ಯಕ್ತಿತ್ವವನ್ನು ಆರೋಪಿಸುತ್ತೇವೆ. ಕೆಟ್ಟು ನಿಂತರೆ ನಮ್ಮ ಮೇಲೆ ಸಿಟ್ಟಿನಿಂದಿದೆ ಅಂತೆ ಭಾವಿಸುತ್ತೇವೆ. ಹೀಗೆ ಮನುಷ್ಯರಲ್ಲದ ವಸ್ತು/ಜೀವಿಗಳಿಗೆ ಮಾನವತ್ವವನ್ನು ಆರೋಪಿಸುವುದನ್ನು Anthropomorphism ಎನ್ನುತ್ತಾರೆ. ಹೋಗ್ತಾ ಹೋಗ್ತಾ ಎಐಗೆ ಕಣ್ಣು ಮೂಗು ಹಚ್ಚಿ ಕೊಟ್ಟಿದ್ದೀವಿ ಎಂದು ಅಂದುಕೊಳ್ಳುವವರ ಸಂಖ್ಯೆ ಇದೆ.

ಅಧುನಿಕ ಜನ ಒಮ್ಮೆ ಎಐಗೆ ಹೊಂದಿಕೊಂಡುಬಿಟ್ಟರೆ ಆ ಭ್ರಮೆಯಿಂದ ಬಿಡಿಸಿಕೊಳ್ಳೋದು ಕಷ್ಟ. ಮನುಷ್ಯರು ಜೊತೆಗಿರುವಾಗ ಕಣ್ಣು ಕಣ್ಣು ಮಿಟುಕಿಸಿ ನೋಡುವುದಕ್ಕೂ ಎಐ ಜೊತೆ ಮುಖ ಇಲ್ಲದ ಧ್ವನಿಯೊಂದಿಗೆ ಸಂವಹಿಸುವುದಕ್ಕೂ ವ್ಯತ್ಯಾಸವಿದೆ. ಹಿರಿಯರ ಅನುಭವದ ಮಾತುಗಳು ಎಲ್ಲಿ ಸಿಗುತ್ತವೆ? ಈಗಿನ ಮಕ್ಕಳಿಗೆ ಎಐ ಇದ್ದೇ ಇರುತ್ತದೆ. ಈ ದಾರಿಯಲ್ಲಿ ಎಐ ಮುಂದಿನ ಮಕ್ಕಳನ್ನು ಮಾನವಿಕವಾಗಿ ಇಷ್ಟೊಂದು ದುರ್ಬಲರನ್ನಾಗಿಸುವ ಸಾಧ್ಯತೆ ಇದೆ. ಸಂವೇದನೆ ಉಳಿಸಿಕೊಂಡಿರುವುದೇ ದೊಡ್ಡ ಸವಾಲಾಗಿದೆ.

Reddit ನಲ್ಲಿ ಸುಮಾರು 17 ಸಾವಿರ ಮಂದಿ ಇರುವ MyBoyfriendIsAI ಅನ್ನುವ ಗ್ರೂಪ್ ಇದೆ. ಮೊನ್ನೆ ಚಾಟ್‌ಜಿಪಿಟಿ ತನ್ನ ನಾಲ್ಕನೇ ಆವೃತ್ತಿಯಿಂದ ಐದನೇ ಆವೃತ್ತಿಗೆ ಅಪ್‌ಗ್ರೇಡ್ ಆಗಿದೆ. ಅಲ್ಲಿನ ಅನೇಕ ಮಹಿಳೆಯರು ಇದೀಗ ತನ್ನ ಬಾಯ್‌ಫ್ರೆಂಡ್ ಕಳೆದುಕೊಂಡಷ್ಟು ದುಃಖಿಸಿದ್ದಾರೆ. ಯಾಕೆಂದರೆ ಅಪ್‌ಗ್ರೇಡ್ ಆದ ಮೇಲೆ ಎಐ ಆ ಹಳೆಯ ಸಂಗತಿಗಳನ್ನು ಮರೆತಿದೆ.

ಇವೆಲ್ಲಾ ಸಣ್ಣ ಎಚ್ಚರಿಕೆಗಳನ್ನು ಗಮನಿಸಿ ಬಳಸಿದರೆ ಎಐ ಅತಿದೊಡ್ಡ ವರವಾಗಬಲ್ಲದು. ಅತಿಯಾದ ಅವಲಂಬನೆ ಮಾನವೀಯ ಗುಣಗಳನ್ನು ನಾಶ ಮಾಡಬಹುದು. ಇಂದಿನ ಕಮ್ಯುನಿಕೇಷನ್ ಜಗತ್ತಿನಲ್ಲಿ ಎಐ ಒಂದು ಅದ್ಭುತ ಶಕ್ತಿ. ಆದರೆ ಅದರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗುವುದು ಒಳಿತಲ್ಲ. ಮುಖ ಮುಖಾಮುಖಿಯಾಗಿ ಮಾತನಾಡುವ ಸೌಂದರ್ಯವೇ ಬೇರೆ. ಎಐ ಜೊತೆ ಜಾಗರೂಕವಾಗಿ ಇರಿ.

Leave a Comment

Your email address will not be published. Required fields are marked *