Technology

6e6158a9 bb90 4174 a7dd 3f356036724b (1)

ಏಜೆಂಟಿಕ್ ಎಐ: ರಾಜ, ಮಂತ್ರಿ, ಸೇವಕ

ಕಳೆದ ಸಂಚಿಕೆಯಲ್ಲಿ ಜೆನರೇಟಿವ್‌ ಎಐ ಹೇಗೆ ಮೂಲತಃ ʼಘಜನಿʼ(ಹಿಂದಿನ ಮುಂದಿನ ನೆನಪೇ ಇರದ) ಇದ್ದಹಾಗೆ ಎಂಬುದನ್ನು ನೋಡಿದ್ದೆವು. ಇತ್ತೀಚೆಗೆ, ವಿಶೇಷವಾಗಿ ಆಂತ್ರೋಪಿಕ್‌ನ ಪ್ಲಗಿನ್‌ಗಳ ಸಲುವಾಗಿ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾದ್ದರಿಂದ ʼಏಜೆಂಟಿಕ್‌ ಎಐʼ ಎಂಬ ಪದ ನಿಮ್ಮ ಕಿವಿಗೆ ಬಿದ್ದಿರಬಹುದು. ಏನಿದು ಏಜೆಂಟಿಕ್‌ ಎಐ? ಕಳೆದ ಎರಡು ವರುಷಗಳಲ್ಲಿ ಹೊಸ ಅವಿಷ್ಕಾರ ಏನಾದರೂ ಆಗಿದೆಯಾ? ಇಲ್ಲ. ಇದು ಜೆನರೇಟಿವ್‌ ಎಐ ಅನ್ನೇ ತುಸು ಚಮತ್ಕಾರಿಕವಾಗಿ ಬಳಸುವ ರೀತಿಯಷ್ಟೇ. ಜೆನರೇಟಿವ್‌ ಎಐಗೆ ಮನುಷ್ಯನ ಯೋಚನಾ ಶಕ್ತಿ ದೊರಕಿತ್ತು, ಅದಕ್ಕೆ […]

ಏಜೆಂಟಿಕ್ ಎಐ: ರಾಜ, ಮಂತ್ರಿ, ಸೇವಕ Read More »

14c13089 69b8 46d4 bf68 a423812af101

ಎಐ ಕಾಂಟೆಕ್ಸ್ಟ್ ಗಾತ್ರ ಮಿತಿ

ನಾವೆಲ್ಲ ಪ್ರತಿನಿತ್ಯ ಚಾಟ್‌ಜಿಪಿಟಿ, ಜೆಮಿನಿ, ಕ್ಲಾಡ್‌ಗಳೊಂದಿಗೆ ಚಾಟ್‌ ಮಾಡ್ತೇವೆ. ಆದರೆ ನಮ್ಮ ಚಾಟ್ ಉದ್ದವಾದಂತೆಲ್ಲ ಇವು ಕೆಲವೊಮ್ಮೆ ತಿಕ್ಕಲುಗಳಂತೆ ಏನೇನೋ ಒದರಲು ಆರಂಭಿಸುತ್ತವೆ. ಸಾಮಾನ್ಯವಾಗಿ ನಾವು ಇದನ್ನು ‘ಹ್ಯಾಲುಸಿನೇಷನ್’ ಅಥವಾ ‘ಭ್ರಮೆ’ ಎಂದು ಆಪಾದಿಸುತ್ತೇವೆ. ಅದು ನಿಜ ಸಹ.ಆದರೆ ಪ್ರತಿಸಲವೂ ಅದು ‘ಭ್ರಮೆ’ಗಳಾಗಿರುವುದಿಲ್ಲ. ಇದರ ಹಿಂದೆ ‘ಟೋಕನ್’ ಎಂಬ ಚೌಕಾಸಿ ಲೆಕ್ಕಾಚಾರ, ‘ಕಾಂಟೆಕ್ಸ್ಟ್ ವಿಂಡೋ’ ಎಂಬ ನೆನಪಿನ ಮಿತಿಗಳ ಸಮಸ್ಯೆಯೂ ಇರುತ್ತವೆ. ಮಜಾ ಏನಂದರೆ ಅನೇಕ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಗೂ ಈ ವಿಷಯ ಗೊತ್ತಿಲ್ಲ. ಇದೊಂಥರ ನಿಗೂಢ ಸಂಗತಿಯಾಗಿ

ಎಐ ಕಾಂಟೆಕ್ಸ್ಟ್ ಗಾತ್ರ ಮಿತಿ Read More »

62bf6e65 1429 400e a328 a6f162cb34e1

ಎಐಗೆ ನೋವಾಗುತ್ತದೆಯೇ?

ಕಳೆದ ಫೆಬ್ರವರಿಯಲ್ಲಿ ಆಂಥ್ರೋಪಿಕ್ ತನ್ನ ಹೊಸ ಎಐ ಮಾಡೆಲ್ ಕ್ಲಾಡ್‌ ಓಪಸ್ ೪.೬ ಅನ್ನು ಬಿಡುಗಡೆ ಮಾಡಿತು. ಜೊತೆಗೆ ಒಂದು ಪುಟ್ಟ ವರದಿಯನ್ನೂ ಸಹ ನೀಡಿತು. ಅದರಲ್ಲಿ ಈ ಹೊಸ ಮಾಡೆಲ್‌ನ ಸಾಮರ್ಥ್ಯ, ದೌರ್ಬಲ್ಯ, ಅಪಾಯ ಮುಂತಾದ ವಿವರಗಳು ದಾಖಲಾಗಿದ್ದವು. ವರದಿಯಲ್ಲಿ ಇನ್ನೊಂದು ವಿಶೇಷ ಭಾಗವಿತ್ತು. ಅದು ಬಹಳ ಆಸಕ್ತಿಕರ ಮತ್ತು ಕುತೂಹಲಕರ: ಅದುವೇ ‘ಮಾಡೆಲ್ ವೆಲ್ಫೇರ್ ಅಸೆಸ್‌ಮೆಂಟ್’ ಅಥವಾ ಯಂತ್ರದ ಯೋಗಕ್ಷೇಮ ಪರೀಕ್ಷೆ. ವಿಚಿತ್ರವಾಗಿ ಕೇಳಿಸುತ್ತಿದೆಯೇ? ಇದೇನಪ್ಪ ಒಂದು ಸಾಫ್ಟ್‌ವೇರ್‌ನ ಯೋಗಕ್ಷೇಮದ ಬಗ್ಗೆ ಪರೀಕ್ಷೆ ನಡೆಸಲಾಗಿದೆಯೇ

ಎಐಗೆ ನೋವಾಗುತ್ತದೆಯೇ? Read More »

article r6

AI ಎಂಬ ವಿದ್ಯುತ್ ಬಕಾಸುರ

ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಕಂಪನಿ ಅರ್ಚನಾ ಮನೋಹರನ್ ಎಂಬುವವರನ್ನು ಉದ್ಯೋಗಕ್ಕೆ ಸೇರಿಸಿಕೊಂಡಿತು. ಇವರು ಅದಕ್ಕೂ ಮೊದಲು ಸಣ್ಣಗಾತ್ರದ ನ್ಯೂಕ್ಲಿಯರ್ ರಿಯಾಕ್ಟರುಗಳನ್ನು ತಯಾರಿಸುವ ಕಂಪನಿಯ ನಿರ್ದೇಶಕಿಯಾಗಿದ್ದರು. ಇವರು ಇಲ್ಲಿಯ ಸಾಫ್ಟ್‌ವೇರು ಇಲ್ಲಿಯ ನ್ಯೂಕ್ಲಿಯರ್ ರಿಯಾಕ್ಟರು? ಸುದ್ದಿಯೇನೆಂದರೆ ಮುಂಬರುವ ದಿನಗಳಲ್ಲಿ ಮೈಕ್ರೋಸಾಫ್ಟ್ ತನ್ನ ಡೇಟಾಸೆಂಟರುಗಳ ವಿದ್ಯುತ್ ಬೇಡಿಕೆಗಾಗಿ ಸಣ್ಣ ಗಾತ್ರದ ನ್ಯೂಕ್ಲಿಯರ್ ರಿಯಾಕ್ಟರುಗಳ ಮೊರೆ ಹೋಗಲಿದೆ ಎಂದು. ಮೊದಲಿಗೆ ಡೇಟಾ ಸೆಂಟರೆಂದರೆ ಡಿಜಿಟಲೀಕರಣಗೊಂಡಿರುವ ಜಗತ್ತಿನ ಗರ್ಭಗುಡಿ. ಅದು ಬ್ಯಾಂಕುಗಳಿರಲಿ, ಫೇಸ್‌ಬುಕ್ಕಿರಲಿ, ಇನ್‌ಸ್ಟಾಯಿರಲಿ, ನಮ್ಮೆಲ್ಲರ ಮಾಹಿತಿ ಕೆಬಿಹೆಚ್ ಆಗಿರುವ, ನಾವು

AI ಎಂಬ ವಿದ್ಯುತ್ ಬಕಾಸುರ Read More »

article r5

ಇ-ಸಿಮ್ ಹೇಗೆ ಕೆಲಸ ಮಾಡುತ್ತೆ?

ಸಿಮ್ ವಿಚಾರದಲ್ಲಿ ನಾವು ಎಷ್ಟು ಬೇಗ ಎಷ್ಟು ದೂರ ಬಂದುಬಿಟ್ಟೆವು! 1991ರಲ್ಲಿ ತಯಾರಾದ ಮೊದಲ ಸಿಮ್ ಒಂದು ಎಟಿಎಂ ಕಾರ್ಡಿನ ಗಾತ್ರವಿತ್ತು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅದರಲ್ಲಿ ಐದು ಎಸ್ಸೆಮ್ಮೆಸ್‌ಗಳು, ಇಪ್ಪತ್ತು ನಂಬರುಗಳನ್ನು ಸೇವ್ ಮಾಡಬಹುದಿತ್ತಂತೆ. ಬಹುತೇಕ ಭಾರತೀಯರಿಗೆ ಪರಿಚಯವಿರುವ ಸಿಮ್ ಅದರ ಮಗಿರಾಯ ‘ಮಿನಿ ಸಿಮ್’, 1996ರಲ್ಲಿ ಬಂದಿದ್ದು; ಒಂದಿಂಚು ಉದ್ದ ಇತ್ತು. ಮೊಮ್ಮಗ ಬಂದಿದ್ದು 2010ರಲ್ಲಿ; ‘ಮೈಕ್ರೋ ಸಿಮ್’ ಎಂದು ಕರೆಸಿಕೊಂಡಿತು. ಇದನ್ನು ಕಷ್ಟಪಟ್ಟು ನಮ್ಮ ಬೆರಳುಗಳಲ್ಲಿ ಹಿಡಿಯಬಹುದಾಗಿತ್ತು. 2012ರ ಹೊತ್ತಿಗೆ ಮರಿಮಗನ ಜನನ,

ಇ-ಸಿಮ್ ಹೇಗೆ ಕೆಲಸ ಮಾಡುತ್ತೆ? Read More »

article r4

ಡ್ರೋನ್ ಚಲನೆಗೆ ಫ್ಯಾನಿನ ಮಜಕು

ಮೊನ್ನೆ ನಮ್ಮಮ್ಮ ಕಾಲ್ ಮಾಡಿದ್ರು. ‘ಬಾಳ್ಳೆಗುಪ್ಪೆ ರಾಜಪ್ಪ ಐಟಿಐ ಕೃಷಿ ತರಬೇತಿಗೆ ಹೋದ’ ಅಂತ. ಅರೆರೆ, ಭವ್ಯ ಭಾರತ ಈ ಮಟ್ಟಿಗೆ ಬೆಳಗುತ್ತಿದ್ದೆಯಾ ಅಂತ ನನಗೆ ಅಚ್ಚರಿಯಾಯಿತು. ರಾಜಪ್ಪ ರೈತರು. ಒಂದಾನೊಂದು ಕಾಲದಲ್ಲಿ ಬಾಳೆಕೋಟೆ ಕಟ್ಟಿದ್ದರಿಂದ ಆ ಹೆಸರು ಅಂಟಿಕೊಂಡಿದೆ. ಮಗ ‘ಜೀಡಪ್ಪ’ ತೋಟಗಾರಿಕೆ ಇಲಾಖೆಯಲ್ಲಿ ಕೃಷಿ ಅಧಿಕಾರಿ ಆಗಿರುವುದರಿಂದ ಇವರು ಪ್ರಗತಿಪರ ರೈತರಾಗಿದ್ದಾರೆ. ನನಗೆ ಒಂದು ಕ್ಷಣ ಇದ್ದರೂ ಇರಬಹುದು ಅನಿಸಿಬಿಟ್ಟಿತ್ತು! ‘ಎದಕಮ್ಮ?’, ಕೇಳಿದೆ. ‘ಮುಸುಕಿನ ಜೋಳಕ್ಕೆ ಬೆಂಕಿ ವರ್ಷದಂತ ಕೀಟಗಳ ಕಾಟ ಇತ್ತಲ್ವಾ ಅದಕ್ಕೆ

ಡ್ರೋನ್ ಚಲನೆಗೆ ಫ್ಯಾನಿನ ಮಜಕು Read More »

article r3

ಹೈಡ್ರೋಪ್ಲೇನಿಂಗ್ ಎಂದರೇನು?

ಕಳೆದ ಗುರುವಾರ ನಾನು ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಮಾರ್ಗಮಧ್ಯೆ ಒಂದು ಅಪಘಾತ ನೋಡಿದೆ. ಸಮಯ ಸಂಜೆ ಸುಮಾರು ಮೂರು ಗಂಟೆ. ಹೆದ್ದಾರಿಯ ಕೆಳಗೆ ಅಡ್ಡ ರಸ್ತೆಯಿದ್ದು ಅದಕ್ಕೊಂದು ಗವಾಕ್ಷಿಯಿದ್ದು ಈ ಕಾರು ಗವಾಕ್ಷಿಯ ಅಂಚಿನ ಮೇಲೆ ಕುಳಿತಿತ್ತು, ಮೈಸೂರಿನ ದಿಕ್ಕಿನಲ್ಲಿ ಜನ ನೆರೆದಿದ್ದರು, ಒಬ್ಬರ ಕೈಯಿಗೆ ಬ್ಯಾಂಡೇಜ್ ಕಟ್ಟುತ್ತಿದ್ದರು, ರಕ್ತ ಸೋರುತ್ತಿತ್ತು. ‘ಏನಾಯಿತು?’, ಕೇಳಿದೆ. ‘ಮಳೆ ನೀರಿನಿಂದ ಸ್ಕಿಡ್ಡಾಗಿದೆ’ ಉತ್ತರ. ‘ಅದು ಹೇಗೆ? ಈ ಗವಾಕ್ಷಿ ಮೇಲೆ ಹಾರಿ ಕುಳಿತಿದೆಯಲ್ಲ?’ ‘ಇದು ಬೆಂಗಳೂರಿನ ಕಡೆಗೆ ಹೋಗುತ್ತಿದ್ದ ಕಾರು.

ಹೈಡ್ರೋಪ್ಲೇನಿಂಗ್ ಎಂದರೇನು? Read More »

aritcle r1

ಆಕಾಶದಾಗೆ ಇನ್ನೊಂದು ಭೂಮಿ ಐತಾ?

1950 ನೇ ಇಸವಿಯ ಒಂದು ಮಧ್ಯಾಹ್ನ ನಮ್ಮ ಇಂದಿನ ನ್ಯೂಕ್ಲಿಯರ್ ರಿಯಾಕ್ಟರುಗಳ, ಅಣುಬಾಂಬುಗಳ ಪಿತಾಮಹ, ಎನ್ನಿಕೊ ಫರ್ಮಿ ತನ್ನ ಸಹೋದ್ಯೋಗಿಗಳೊಂದಿಗೆ ಊಟ ಮಾಡ್ತಾ ಬಾಯ್ತಪ್ಪಿಸೂನ್ ಇತ್ತಿತ್ತಾ ಇದ್ದಿದ್ದೆ ಏನೋ ಹೊಳೆದು ಒಂದು ಪ್ರಶ್ನೆ ಕೇಳಿದ. “Where is everybody?”. ಅಂದ್ರೆ, “ನಮ್ಮ ಹೊರತು ಉಳಿದವರೆಲ್ಲ ಎಲ್ಲಿದ್ದಾರೆ?,” ನಮ್ಮ ಅಂದ್ರೆ ಭೂಮಿ ಮೇಲಿನ ಮನುಷ್ಯರು. ಇದೊಂದು ಗಾಢವಾದ ವೈಜ್ಞಾನಿಕ ಮತ್ತು ತಾತ್ವಿಕ ಪ್ರಶ್ನೆ. ಆ ಊಟ ಮಾಡ್ತಾ ಎತ್ತಿದ ಪ್ರಶ್ನೆ ಮುಂದೆ ಅನೇಕ ಚಿಂತನೆಗಳಿಗೆ ಕಾರಣವಾಗಿ ಅದೇ ‘ಫರ್ಮಿ

ಆಕಾಶದಾಗೆ ಇನ್ನೊಂದು ಭೂಮಿ ಐತಾ? Read More »

article m7

ತಲೆಯೊಳಗೆ ಡೈನೋಸಾರನ್ನೇ ಬಿಟ್ಕೊಳ್ಳೋಣ

ನಾವು ಇಲ್ಲಿ ಅಲ್ಲಿ ಓದುತ್ತೇವೆ. ಆಫ್ರಿಕಾದಲ್ಲಿ, ಅಮೆರಿಕದಲ್ಲಿ, ಯುರೋಪಿನಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ಬದುಕಿದ್ದ ಡೈನೋಸಾರ್‌ಗಳ ಬೆನ್ನು ಮೂಳೆ ಸಿಕ್ಕಿತು, ಆದಿಮಾನವನ ತಲೆ ಬುರುಡೆ ಸಿಕ್ಕಿತು, ಸಾವಿರ ವರ್ಷಗಳ ಹಿಂದೆ ನಡೆದ ಯುದ್ಧದಲ್ಲಿ ಮಡಿದ ಸೈನಿಕನ ಶವ ಸಿಕ್ಕಿತು, ರಾಜನ ಕುದುರೆ ಬಂಡಿ ಸಿಕ್ಕಿತು ಅಂತಲ್ಲಾ. ಆದರೆ, ಇವೆಲ್ಲ ನಮ್ಮ ದೇಶದಲ್ಲಿ ಯಾಕೆ ಸಿಗಲಿಲ್ಲ ಯೋಚಿಸಿದ್ದೀರಾ? ನಮ್ಮಲ್ಲಿ ಡೈನೋಸಾರ್ ಇರಲಿಲ್ವೇ? ಆದಿ ಮಾನವರು ವಾಸಿಸಿರಲಿಲ್ವೇ? ರಾಜರುಗಳು ಇರಲಿಲ್ವೇ? ಯುದ್ಧಗಳು ಜರುಗಿಲ್ಲವೇ? ಉತ್ತರ ಹುಡುಕುತ್ತಾ ಹೋದರೆ ಕೆಲವು ಆಶ್ಚರ್ಯ

ತಲೆಯೊಳಗೆ ಡೈನೋಸಾರನ್ನೇ ಬಿಟ್ಕೊಳ್ಳೋಣ Read More »

article m6

ಮುಂದಿನ ಜಮಾನದ ಫೋನ್‍ಗಳು

ಭವಿಷ್ಯದಲ್ಲಿ ಮನುಷ್ಯ ದಡ್ಡ ಅಥವಾ ಸೋಂಬೇರಿ ಆಗುತ್ತಾನೆ ಎನ್ನುವುದು ಸುಳ್ಳು ಸುಮಾರು ಇಪ್ಪತ್ತು ವರುಷಗಳ ಹಿಂದೆ ಇದ್ದ ನೋಕಿಯಾ ಫೋನ್‍ಗಳನ್ನು 2ಜಿ ಫೋನು ಎನ್ನುತ್ತಿದ್ದೆವು. ನಮ್ಮ ಕೈಲಿರುವ ಫೋನುಗಳನ್ನು 5ಜಿ ಫೋನು ಎನ್ನುತ್ತೇವೆ. ಈಗ ಮಾರುಕಟ್ಟೆಯಲ್ಲಿ ಹೊಸತು ಬಂದಿದೆ- ‘ಎಐ ಫೋನುಗಳು’! ಇವುಗಳ ಬಗ್ಗೆ ಸ್ವಲ್ಪ ತಿಳಿಯೋಣ. ನಮ್ಮ ಫೋನುಗಳಲ್ಲಿರುವ ಚಾಟ್‍ಜಿಪಿಟಿ, ಮೆಟಾ ಎಐಗಳು ಕೇವಲ ಪ್ರಶ್ನೆ ಸ್ವೀಕರಿಸಲು ಮತ್ತು ಉತ್ತರ ತೋರಿಸಲು ಇರುವ ಆಪ್‍ಗಳು. ಪ್ರಶ್ನೆಗೆ ಉತ್ತರ ಹುಡುಕುವ ಪ್ರಕ್ರಿಯೆ ಕಣ್ಣೆವೆಯಲ್ಲಿ ಜರುಗುತ್ತದೆ. ಅಂದರೆ ಇಂಟರ್ನೆಟ್

ಮುಂದಿನ ಜಮಾನದ ಫೋನ್‍ಗಳು Read More »