Technology

article4 cover

ಎಪಿಕೆ ಫೈಲ್, ನಿಮಗೂ ಬಂದಿತ್ತಾ?

ಮೊನ್ನೆ ಸಚಿನ್ ಎಂಬುವವರೊಬ್ಬರು ಫೇಸ್‌ಬುಕ್‌ನಲ್ಲಿ ಮೆಸೇಜ್ ಮಾಡಿ “ಸರ್ ನನ್ನ ವಾಟ್ಸಾಪ್ ಹ್ಯಾಕ್ ಆಗಿದೆ,” ಎಂದರು. “ಹ್ಯಾಕ್ ಆಗಿದೆ ಅಂದ್ರೆ ಏನು ಅರ್ಥ? ಏನಾಗಿದೆ?,” ಕೇಳಿದೆ. “ನನ್ನ ನಂಬರ್‌ನಿಂದ ಎಲ್ಲರಿಗೂ ಏನೇನೋ ಮೆಸೇಜು ಹೋಗ್ತಿದೆ,” ಅವರ ಉತ್ತರ. ಬಹುಶಃ ಇವರು ಬೇರೆಲ್ಲೋ ವಾಟ್ಸಾಪ್ ವೆಬ್ ಬಳಸಿದ್ದಾರೆ, ಅಲ್ಲಿಂದ ಇನ್ಯಾರೋ ಈ ಕಿತಾಪತಿ ಮಾಡಿದ್ದಾರೆ ಎಂದಿನಿಸಿ ಕೇಳಿದೆ. ಅವರು ಕಂಪನಿ ಲ್ಯಾಪ್ಟಾಪ್‌ನಲ್ಲಿ ಮತ್ತು ತನ್ನ ತಮ್ಮನ ಲ್ಯಾಪ್ಟಾಪ್‌ನಲ್ಲಿ ಬಳಸುವುದಾಗಿ ತಿಳಿಸಿದರು. ಸಾಮಾನ್ಯವಾಗಿ ಕಂಪನಿ ಲ್ಯಾಪ್ಟಾಪ್‌ಗಳು ತುಂಬಾ ಸೆಕ್ಯೂರ್ ಇರುತ್ತವೆ. […]

ಎಪಿಕೆ ಫೈಲ್, ನಿಮಗೂ ಬಂದಿತ್ತಾ? Read More »

article3 cover

ಯೋಳ್ತೀನ್ ಕೇಳಿ, ಹಾರ್ಡ್‌ಡಿಸ್ಕ್‌ ಕತೆ

ಮೊನ್ನೆ ಕನ್ನಡದ ಖ್ಯಾತ ಲೇಖಕಿಯೊಬ್ಬರು ಫೋನ್ ಮಾಡಿ “ಮಧು, ಕನ್ನಡ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ ಆಗಿಬಿಟ್ಟಿದೆ,” ಎಂದರು. “ಅರೆರೆ ಯಾರಾದ್ರೂ ಹೋಗ್ಬಿಟ್ರಾ?” ಅಂತ ಕೇಳಿದೆ. “ಇಲ್ಲಾರೀ ನನ್ನ ಹಾರ್ಡ್‌ಡಿಸ್ಕು ಹೊಗೆ ಹಾಕಿಕೊಂಡಿದೆ, ಲ್ಯಾಪ್ಟಾಪು ಎತ್ತಿ ಹಾಕುತ್ತಿದೆ. ಎರಡು ವರ್ಷಗಳ ಬರಹಗಳು, ಎರಡು ಕಾದಂಬರಿಗಳು…” ಎಂದು ನೋವನ್ನಿತ್ತುಕೊಂಡರು. ಅಲ್ಲಿಗಾಗಲೇ ತಮಗೆ ತಿಳಿದಿದ್ದ ‘ವೈದ್ಯರ’ ಬಳಿಗೆಲ್ಲ ಹೋಗಿ ಬಂದಿದ್ದರು. “ನೋಡಿ ಎತ್ತಿಹಾಕ್ತೀರಿ ಅಂತೀರಿ. ಡೇಟಾ ಹೋಗಿರಲ್ಲ ಚಿಂತಿಸಬೇಡಿ. ಸಾಮಾನ್ಯವಾಗಿ ನೀರು, ಬೆಂಕಿಗಳಂಥವು ತಾಗಿದರೆ ಮಾತ್ರ ಡೇಟಾ ನಷ್ಟ ಆಗುವುದು. ನಿಮ್ಮ

ಯೋಳ್ತೀನ್ ಕೇಳಿ, ಹಾರ್ಡ್‌ಡಿಸ್ಕ್‌ ಕತೆ Read More »

article2 1

ಎಐಗೆ ಹೆಚ್ಚಿನ ಡೇಟಾ ಉಣಿಸಿದರೆ ಮನುಷ್ಯನಂತೆ ಯೋಚಿಸುತ್ತದೆಯೇ?

ಎಐ ಸುತ್ತ ಎದ್ದಿರುವ ಅಘಾದ ಭರವಸೆಗಳಿರುವಂತೆ ಅದರ ಸುತ್ತ ಅನುಮಾನಗಳೂ ಇವೆ. ಅದರಲ್ಲಿ ಎರಡು ಪ್ರಮುಖ ಅನುಮಾನಗಳೆಂದರೆ ಒಂದು – ಆರ್ಥಿಕ ಲಾಭಕ್ಕೆ ಸಂಬಂಧಿಸಿದ್ದು, ಇನ್ನೊಂದು ತಂತ್ರಜ್ಞಾನದ ಮಿತಿಗೆ ಸಂಬಂಧಿಸಿದ್ದು. ಮೊದಲಿಗೆ- ಗೂಗಲ್, ಮೈಕ್ರೋಸಾಫ್ಟ್‌ನಂಥ ದಿಗ್ಗಜ ಕಂಪನಿಗಳು ಈ ತಂತ್ರಜ್ಞಾನದ ಮೇಲೆ ಲಕ್ಷಾಂತರ ಕೋಟಿ ಸುರಿಯುತ್ತಿವೆ. ಆದರೆ, ತಜ್ಞರು ಮತ್ತು ಆರ್ಥಿಕ ವಿಶ್ಲೇಷಕರು ಒಂದು ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಅದೇನೆಂದರೆ, ಈಗ ನಡೆಯುತ್ತಿರುವ ಹೂಡಿಕೆಗೂ, ಅದರಿಂದ ಭವಿಷ್ಯದಲ್ಲಿ ಬರಬಹುದಾದ ಲಾಭಕ್ಕೂ ತಾಳೆಯೇ ಆಗುತ್ತಿಲ್ಲ. ಯಾಕೆ ಲೆಕ್ಕಾಚಾರ ‘ಮ್ಯಾಚ್’

ಎಐಗೆ ಹೆಚ್ಚಿನ ಡೇಟಾ ಉಣಿಸಿದರೆ ಮನುಷ್ಯನಂತೆ ಯೋಚಿಸುತ್ತದೆಯೇ? Read More »

article1

ಬಿಸಿಐ(ಬ್ರೈನ್‌ ಕಂಪ್ಯೂಟರ್‌ ಇಂಟರ್‌ಫೇಸ್‌)

ಒಂದು ನೂರು ವರ್ಷಗಳ ಹಿಂದೆ ಯಂತ್ರಗಳು ಅಷ್ಟು ದೂರದಲ್ಲಿ ಕೂತು ನಾವು ಹೇಳಿದ ಕೆಲಸ ಮಾಡಿಕೊಡುತ್ತಿದ್ದವು, ಉದಾಹರಣೆಗೆ ಇಂಜಿನ್ನುಗಳು. ಆಮೇಲಾಮೇಲೆ ಅವು ನಮ್ಮ ಸಮೀಪ ಬಂದು ನಮ್ಮೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸತೊಡಗಿದವು, ಉದಾರಣೆಗೆ ಫೋನುಗಳು. ಈಗೀಗ ಅವು ನಮ್ಮ ದೇಹವನ್ನು ಪ್ರವೇಶಲಾರಂಭಿಸಿವೆ. ಉದಾಹರಣೆಗೆ ಮೈಕ್ರೋ ಎಲೆಕ್ಟ್ರೋಡ್‌ಗಳು. ಇವು ನಮ್ಮ ಕೂದಲಿಗಿಂತ ತೆಳುವಾಗಿರುತ್ತವೆ. ಶರೀರದಲ್ಲಿ ಇಂಪ್ಲಾಂಟ್‌ ಆಗಿ ಮೆದುಳಿನ ನರಗಳೊಂದಿಗೆ ಸಂವಹಿಸುತ್ತ ಮೆದುಳನ್ನು ನಿರ್ದೇಶಿಸುತ್ತವೆ. ಪಾರ್ಕಿನ್ಸನ್‌, ಆಲ್ಜೀಮರ್‌ಗಳಂತಹ ಕಾಯಿಲೆಗಳಿಗೆ ಮದ್ದಾಗಲಿವೆ. ಇವುಗಳಿಂದಾಗಿ ನಮ್ಮ ದೇಹವನ್ನು ಸರ್ಕ್ಯೂಟ್‌ನಿಂದ, ನಮ್ಮ ಆಲೋಚನೆಯನ್ನು ಕಂಪ್ಯೂಟರ್‌ನ

ಬಿಸಿಐ(ಬ್ರೈನ್‌ ಕಂಪ್ಯೂಟರ್‌ ಇಂಟರ್‌ಫೇಸ್‌) Read More »