ಎಐ ಸುತ್ತ ಎದ್ದಿರುವ ಅಘಾದ ಭರವಸೆಗಳಿರುವಂತೆ ಅದರ ಸುತ್ತ ಅನುಮಾನಗಳೂ ಇವೆ. ಅದರಲ್ಲಿ ಎರಡು ಪ್ರಮುಖ ಅನುಮಾನಗಳೆಂದರೆ ಒಂದು – ಆರ್ಥಿಕ ಲಾಭಕ್ಕೆ ಸಂಬಂಧಿಸಿದ್ದು, ಇನ್ನೊಂದು ತಂತ್ರಜ್ಞಾನದ ಮಿತಿಗೆ ಸಂಬಂಧಿಸಿದ್ದು.
ಮೊದಲಿಗೆ- ಗೂಗಲ್, ಮೈಕ್ರೋಸಾಫ್ಟ್ನಂಥ ದಿಗ್ಗಜ ಕಂಪನಿಗಳು ಈ ತಂತ್ರಜ್ಞಾನದ ಮೇಲೆ ಲಕ್ಷಾಂತರ ಕೋಟಿ ಸುರಿಯುತ್ತಿವೆ. ಆದರೆ, ತಜ್ಞರು ಮತ್ತು ಆರ್ಥಿಕ ವಿಶ್ಲೇಷಕರು ಒಂದು ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಅದೇನೆಂದರೆ, ಈಗ ನಡೆಯುತ್ತಿರುವ ಹೂಡಿಕೆಗೂ, ಅದರಿಂದ ಭವಿಷ್ಯದಲ್ಲಿ ಬರಬಹುದಾದ ಲಾಭಕ್ಕೂ ತಾಳೆಯೇ ಆಗುತ್ತಿಲ್ಲ.
ಯಾಕೆ ಲೆಕ್ಕಾಚಾರ ‘ಮ್ಯಾಚ್’ ಆಗುತ್ತಿಲ್ಲ? ದೊಡ್ಡ ಟೆಕ್ ಕಂಪನಿಗಳು ಎಐ ಅಭಿವೃದ್ಧಿಗಾಗಿ ಬೃಹತ್ ‘ಡೇಟಾ ಸೆಂಟರ್’ಗಳನ್ನು ಸ್ಥಾಪಿಸುತ್ತಿವೆ. ಗಣಕಲ ಪಕ್ಷದ ವೈಜ್ಞಾನಿಕರಲ್ಲಿ ಇಂಥ ಒಂದು ದೊಡ್ಡ ಡೇಟಾ ಸೆಂಟರ್ ಸ್ಥಾಪಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. ಇದರ ವೆಚ್ಚದ ಲೆಕ್ಕಾಚಾರ ನೋಡಿದರೆ ಎಂಥವರಿಗೂ ತಲೆ ತಿರುಗುತ್ತದೆ. ಒಂದು ಅಂದಾಜಿನ ಪ್ರಕಾರ, ಕೇವಲ 1 ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ನಿರ್ಮಿಸಿ, ಅದಕ್ಕೆ ಬೇಕಾದ ದುಬಾರಿ ಜಿಪಿಯು ಚಿಪ್ಗಳನ್ನು ಅಳವಡಿಸಲು ಸುಮಾರು 80 ಬಿಲಿಯನ್ ಡಾಲರ್ (ಸುಮಾರು 6.7 ಲಕ್ಷ ಕೋಟಿ ರೂ.) ಬೇಕಾಗುತ್ತದೆ. ಜಾಗತಿಕವಾಗಿ ಒಟ್ಟಾರೆ ಇಂಥ 100 ಗಿಗಾವ್ಯಾಟ್ ಸಾಮರ್ಥ್ಯದ ವ್ಯವಸ್ಥೆಯನ್ನು ನಿರ್ಮಿಸುವ ಯೋಜನೆಗಳಿವೆ. ಇದರ ಒಟ್ಟು ಮೊತ್ತ ಬರೋಬ್ಬರಿ 8 ಟ್ರಿಲಿಯನ್ ಡಾಲರ್ಗೂ (ಸುಮಾರು 670 ಲಕ್ಷ ಕೋಟಿ ರೂ.) ಅಧಿಕ!
ಆರ್ಥಿಕ ನಿಯಮದ ಪ್ರಕಾರ, ನೀವು ಇಷ್ಟು ದೊಡ್ಡ ಮೊತ್ತ ಹೂಡಿಕೆ ಮಾಡಿದರೆ, ಸಾಲದ ಬಡ್ಡಿ ಮತ್ತು ಅಸಲು ತೀರಿಸಲು ವರ್ಷಕ್ಕೆ ಕನಿಷ್ಠ 1 ಟ್ರಿಲಿಯನ್ ಡಾಲರ್ (ಸುಮಾರು 84 ಲಕ್ಷ ಕೋಟಿ ರೂ.) ಲಾಭ ಗಳಿಸಬೇಕು. ಇದರ ಜೊತೆಗಿರುವ ಇನ್ನೊಂದು ಅತಿ ದೊಡ್ಡ ರಿಸ್ಕ್ ಏನೆಂದರೆ, ಈ ಎಐ ಹಾರ್ಡ್ವೇರ್ಗಳ (ಚಿಪ್) ಆಯಸ್ಸು ಕೇವಲ 3ರಿಂದ 5 ವರ್ಷಗಳು. ಅಂದರೆ, 5 ವರ್ಷದ ನಂತರ ಇಡೀ ವ್ಯವಸ್ಥೆಯನ್ನು ಬದಲಿಸಿ ಹೊಸದನ್ನು ತರಬೇಕು. ಅಂದರೆ ಐದು ವರ್ಷಗಳಲ್ಲಿ ಈ ಕಂಪನಿಗಳು ತಮ್ಮ ಖರ್ಚು ವೆಚ್ಚ ಲಾಭ, ಎಲ್ಲವನ್ನೂ ಎತ್ತಬೇಕು. ಸದ್ಯದ ಮಟ್ಟಿಗೆ ಎಐನಿಂದ ಇಷ್ಟು ದೊಡ್ಡ ಮೊತ್ತದ ಲಾಭ ಗಳಿಸುವ ಯಾವುದೇ ಸ್ಪಷ್ಟ ಮಾರ್ಗ ಕಂಪನಿಗಳ ಮುಂದಿಲ್ಲ. ಆದಾಯ ಬರುವ ಮುನ್ನವೇ ಹೂಡಿಕೆ ಮಾಡಿದ ಯಂತ್ರಗಳು ಹಳೆಯದಾಗಿಬಿಡುವ ಆತಂಕ ಇಲ್ಲಿದೆ.
ಹಾಗಾದರೆ, ಈ ಹೂಡಿಕೆಯೆಲ್ಲವೂ ವ್ಯರ್ಥವೇ? ಖಂಡಿತ ಇಲ್ಲ. ಇದನ್ನು ಅರ್ಥಮಾಡಿಕೊಳ್ಳಲು ನಾವು 90ರ ದಶಕದ ‘ಆಪ್ಟಿಕಲ್ ಫೈಬರ್’ ಕ್ರಾಂತಿಯನ್ನು ನೆನಪಿಸಿಕೊಳ್ಳಬೇಕು. ಆಗ ಟೆಲಿಕಾಂ ಕಂಪನಿಗಳು ಇಂಟರ್ನೆಟ್ ಕ್ರಾಂತಿಯ ನಿರೀಕ್ಷೆಯಲ್ಲಿ ಪ್ರಪಂಚದಾದ್ಯಂತ ಸಮುದ್ರದಾಳದಲ್ಲಿ ಮತ್ತು ಭೂಮಿಯೊಳಗೆ ಮಿತಿಮೀರಿ ಆಪ್ಟಿಕಲ್ ಫೈಬರ್ ಕೇಬಲ್ಗಳನ್ನು ಹಾಕಿದ್ದವು. ಆದರೆ, ನಿರೀಕ್ಷಿತ ಮಟ್ಟದಲ್ಲಿ ತಕ್ಷಣಕ್ಕೆ ಇಂಟರ್ನೆಟ್ ಬಳಕೆದಾರರು ಸಿಗಲಿಲ್ಲ. ಇದರಿಂದಾಗಿ ಹಲವು ಕಂಪನಿಗಳು ದಿವಾಳಿಯಾದವು. ಆದರೆ, ಅಂದು ಹಾಕಿದ ಆ ಕೇಬಲ್ಗಳು ಹಾಗೆಯೇ ಉಳಿದುಕೊಂಡವು.
ಇದರಿಂದಾಗಿ ಫೈಬರ್ ಆಪ್ಟಿಕ್ ಕೇಬಲ್ಗಳ ಬಾಡಿಗೆ ಮೊತ್ತ ಕಡಿಮೆಯಾಯಿತು. ತತ್ಪರಿಣಾಮ, ಇಂಟರ್ನೆಟ್ ದರ ಕಡಿಮೆಯಾಯಿತು. ಅದರ ಪರಿಣಾಮ ಬಳಕೆದಾರರ ಸಂಖ್ಯೆ ಜಾಸ್ತಿಯಾಯಿತು. ತರುವಾಯ ಕೇಬಲ್ಗೆ ಹೂಡಿದ್ದ ದುಡ್ಡು ಕ್ರಮೇಣ ಲಾಭವಾಗಿ ಪರಿವರ್ತನೆಗೊಂಡಿತು. ಇದರಿಂದಾಗಿಯೇ ಇಂದು ನಾವು ಸ್ಮಾರ್ಟ್ಫೋನ್ಗಳಲ್ಲಿ ಅತಿ ಕಡಿಮೆ ದರದಲ್ಲಿ ವಿಡಿಯೋ ನೋಡಲು, ಕೆಲಸ ಮಾಡಲು ಸಾಧ್ಯವಾಗಿದೆ. ಅದೇ ರೀತಿ, ಈಗ ನಿರ್ಮಿಸುತ್ತಿರುವ ಬೃಹತ್ ಎಐ ಡೇಟಾ ಸೆಂಟರ್ಗಳ ಹೂಡಿಕೆ ಲೆಕ್ಕಾಚಾರ ಸದ್ಯಕ್ಕೆ ತಪ್ಪಿರಬಹುದು, ಕಂಪನಿಗಳಿಗೆ ನಷ್ಟವಾಗಬಹುದು. ಆದರೆ ಒಮ್ಮೆ ನಿರ್ಮಾಣವಾದ ಈ ಬೃಹತ್ ಕಂಪ್ಯೂಟಿಂಗ್ ಪವರ್ ಭವಿಷ್ಯದಲ್ಲಿ ಜನರಿಗೆ ಅತಿ ಕಡಿಮೆ ದರದಲ್ಲಿ ಎಐ ಸೌಲಭ್ಯ ಒದಗಿಸಲಿವೆ. ಅರ್ಥಾತ್ ಡೇಟಾಸೆಂಟರ್ ಹಾಗೆಯೇ ಇರುತ್ತದೆ. ಕಾಲಕಾಲಕ್ಕೆ ಚಿಪ್ಗಳನ್ನು ಬದಲಾಯಿಸಬೇಕಿರುತ್ತದೆಷ್ಟೆ. ಇದು ಮುಂದಿನ ದಿನಗಳಲ್ಲಿ ಉಣಿಸಲಾಗದ ಹೊಸ ಆವಿಷ್ಕಾರಗಳಿಗೆ ಅಡಿಪಾಯವಾಗಲಿದೆ.
ಎರಡನೇ ಸಂಶಯಕ್ಕೆ ಬರೋಣ. ಈಗಿನ ಎಐ ಎಂದಿಗೂ ಮನುಷ್ಯನಂತೆ ಯೋಚಿಸಲು ಸಾಧ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯ. ನಾವು ಇಂದು ಬಳಸುತ್ತಿರುವ ಚಾಟ್ ಜಿಪಿಟಿಯಂಥ ಟೂಲ್ಗಳು ‘ಲಾರ್ಜ್ ಲಾಂಗ್ವೇಜ್ ಮಾಡೆಲ್’ (LLM) ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತವೆ. ಸರಳವಾಗಿ ಹೇಳಬೇಕೆಂದರೆ, ಇವು ಮುಂದಿನ ಪದ ಯಾವುದು ಇರಬಹುದು? ಎಂದು ಊಹಿಸುವ ಅತ್ಯಾಧುನಿಕ ಗಿಣಿಗಳಷ್ಟೆ!
ಹೀಗಿದ್ದಾಗ ಇವುಗಳ ಬಳಿ ಎಷ್ಟೇ ಡೇಟಾ ಇದ್ದರೂ, ಇವುಗಳಿಗೆ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಬರುವುದಿಲ್ಲ. ಅಂದರೆ, ರೆಕ್ಕೆಗಳಿಲ್ಲದ ಲಾರಿಗಳಲ್ಲಿ ನೀವು ಎಷ್ಟು ದೊಡ್ಡ ಎಂಜಿನ್ ಇಟ್ಟರೂ ಎಷ್ಟು ಡೀಸೆಲ್ ತುಂಬಿಸಿದರೂ ಅದು ಹಾರಲಾಗದು. ಅಂತೆಯೇ, ಈಗಿರುವ ಮಾಡೆಲ್ಗಳಿಗೆ ಇನ್ನೂ ಹೆಚ್ಚು ಡೇಟಾ ಉಣಿಸಿದರೆ ಅವು ಇನ್ನೂ ಚೆನ್ನಾಗಿ ಮಾತನಾಡಬಲ್ಲವೇ ಹೊರತು, ಮನುಷ್ಯನಂತೆ ಹೊಸದಾಗಿ ಆಲೋಚಿಸಲಾರವು.
ಹಾಗಾಗಿ, ಮನುಷ್ಯನಂತೆ ಸ್ವಂತ ಬುದ್ಧಿ ಹೊಂದಿರುವ ‘ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್’ (AGI) ಸೃಷ್ಟಿಯಾಗಬೇಕಾದರೆ ಈಗಿನ ಎಲ್ಎಲ್ಎಂ ಮಾರ್ಗ ಸರಿಯಲ್ಲ ಎಂಬುದು ವಿಜ್ಞಾನಿಗಳ ವಾದ. ಈಗಿನ ತಂತ್ರಜ್ಞಾನದಲ್ಲಿ ಎಜಿಐ ಸಾಧ್ಯತೆ ಶೇ.1ಕ್ಕಿಂತಲೂ ಕಡಿಮೆ. ಅದಕ್ಕಾಗಿ ನರವಿಜ್ಞಾನ ಮತ್ತು ಕಂಪ್ಯೂಟರ್ ಸೈನ್ಸ್ನ ಸಂಪೂರ್ಣ ಹೊಸ ಸಂಶೋಧನೆಗಳೇ ನಡೆಯಬೇಕಿದೆ.
ಹಾಗಾದರೆ, ಈ ಎಲ್ಎಲ್ಎಮ್ಗಳಿಂದ ಏನೂ ಉಪಯೋಗವಿಲ್ಲವೇ? ಇಲ್ಲಿಯೂ ನಿರಾಶರಾಗಬೇಕಿಲ್ಲ. ನಿಜ ಹೇಳ್ಬೇಕೆಂದರೆ, ಎಜಿಐ ನಮಗೆ ಬೇಕೋ ಬೇಡವೋ ನಿರ್ಧರಿಸಬೇಕಾದಷ್ಟು ಅಪಾಯಕಾರಿ ತಂತ್ರಜ್ಞಾನ. ಸದ್ಯದ ಎಐ ಸಹಾಯಕಾರಿ ತಂತ್ರಜ್ಞಾನ. ಇದರಿಂದ ಏನೆಲ್ಲ ನಿರೀಕ್ಷಿಸಬಹುದೋ ಅದನ್ನು ಖಂಡಿತ ನೀಡಲಿದೆ. ಈಗಿನ ಎಐ ಮನುಷ್ಯರಿಗೆ ಪರ್ಯಾಯವಾಗುವ ಬದಲು ಮನುಷ್ಯನ ಕೆಲಸದ ವೇಗವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ಒಬ್ಬ ಸಾಮಾನ್ಯ ಕೋಡರ್ ಎಐ ಸಹಾಯದಿಂದ ಪರಿಣತ ಎಂಜಿನಿಯರ್ನಂತೆ ಕೆಲಸ ಮಾಡಬಹುದು. ಹಾಗೆ ಕಂಪನಿಯೊಂದರ ಲಕ್ಷಾಂತರ ಫೈಲ್ಗಳನ್ನು ಕ್ಷಣಾರ್ಧದಲ್ಲಿ ಓದಿ, ಬೇಕಾದ ಮಾಹಿತಿ ಪಡೆಯಬಹುದು. ಹಾಗಾಗಿ ಇದು ಸೃಜನಶೀಲ ಕೆಲಸಗಳಿಗಿಂತ ಹೆಚ್ಚಾಗಿ, ನೀರಸ ಮತ್ತು ಪುನರಾವರ್ತನೆಯ ಕೆಲಸಗಳನ್ನು ಸಲೀಸಾಗಿ ಮಾಡುತ್ತಾ ಉತ್ಪಾದಕತೆಯನ್ನು ಹೆಚ್ಚಿಸಲು ಸಹಕಾರಿ.
ಇಷ್ಟು ಕೇಳಿ ನಿಮ್ಮಲ್ಲೊಂದು ಹೊಸ ಸಂಶಯ ಮೂಡಬಹುದು. ನಷ್ಟವೇ ಕಾದಿದ್ದರೂ ಯಾಕೆ ಇವರು ಇಷ್ಟೆಲ್ಲ ಹಣ ಹೂಡುತ್ತಿದ್ದಾರೆ ಎಂದು. ನೋಡಿ ಇಲ್ಲಿ ಸುಮಾರು ಎಂಟು ಮಂದಿ ತೀವ್ರ ಸ್ಪರ್ಧೆಯಲ್ಲಿದ್ದಾರೆ. ಇವರಲ್ಲಿ ಕನಿಷ್ಠ ಐದು ಮಂದಿ ಸೋಲುತ್ತಾರೆ. ಇನ್ನುಳಿದ ಇಬ್ಬರೋ ಮೂವರೋ ನಿಶ್ಚಿತ ಗೆಲುವು ಸಾಧಿಸುತ್ತಾರೆ. ಆ ಮೊದಲ ಮೂರು ಸ್ಥಾನಗಳಿಗಾಗಿ ಇಷ್ಟೆಲ್ಲ ಹೋರಾಟ ನಡೆಯುತ್ತಿದೆ. ಯಾರು ಮೊದಲ ಆ ಸ್ಥಾನ ಗೆಲ್ಲುತ್ತಾರೋ ಅವರು ತಂತ್ರಜ್ಞಾನ ಲೋಕದ ಸೂಪರ್ ಪವರ್ ಆಗಲಿದ್ದಾರೆ! ತಮ್ಮ ದೇಶವನ್ನು ಸೂಪರ್ ಪವರ್ ಮಾಡಲಿದ್ದಾರೆ. ಸದ್ಯಕ್ಕೆ ಈ ರೇಸ್ನಲ್ಲಿ ಅಮೆರಿಕದ ಕಂಪನಿಗಳೇ ಮುಂದಿವೆ. ಆದರೆ, ಭವಿಷ್ಯದಲ್ಲಿ ಯಾರು ಬೇಕಾದರೂ ಈ ಸ್ಥಾನವನ್ನು ಕಿತ್ತುಕೊಳ್ಳಬಹುದು. ಹೀಗಾಗಿಯೇ ಅಮೆರಿಕ, ಚೀನಾ ಸೇರಿದಂತೆ ಪ್ರತಿಯೊಂದು ದೇಶವೂ ಈ ತಂತ್ರಜ್ಞಾನದ ಮೇಲೆ ಕುದುರೆ ಸವಾರಿ ಮಾಡಲು ಕೋಟಿ ಕೋಟಿ ಸುರಿಯುತ್ತಿವೆ.
ಅಂತರ್ಜಾಲದ ವಾರ್ ಆಫ್ ಬ್ರೌಸರ್ಸ್ - ಚಾಪ್ಟರ್ 2
ಕಳೆದ ವಾರ ಬ್ರೌಸರ್ಗಳ ಮೊದಲ ವಿಶ್ವಯುದ್ಧದ ಬಗ್ಗೆ ತಿಳಿದುಕೊಂಡೆವು. ಈ ಯುದ್ಧದ ಅಂತ್ಯದಲ್ಲಿ ನೆಟ್ಸ್ಕೇಪ್ ಬಾಗಿಲು ಮುಚ್ಚಿ ಎಕ್ಸ್ಪ್ಲೋರರ್ ಜಯಭೇರಿ ಬಾರಿಸಿತ್ತು. ನೆಟ್ಸ್ಕೇಪ್ ತನ್ನ ಸೋರ್ಸ್ಕೋಡ್ ಅನ್ನು ಸಾರ್ವಜನಿಕಗೊಳಿಸಿ ಮುಂದಿನ ಕ್ರಾಂತಿಯ ಬೀಜವನ್ನು ಬಿತ್ತಿ ಹೋಗಿತ್ತು. ಇದರ ಫಲವೇ 2004ರಲ್ಲಿ ಮೊಜಿಲ್ಲಾ ಫೈರ್ಫಾಕ್ಸ್ನ ಜನನ. ಫೈರ್ಫಾಕ್ಸ್, ಎಕ್ಸ್ಪ್ಲೋರರ್ಗಿಂತ ವೇಗವಾಗಿತ್ತು, ಸುರಕ್ಷಿತವಾಗಿತ್ತು. ಹೊಸ ಹೊಸ ಫೀಚರ್ಗಳನ್ನು ಅಳವಡಿಸಿತ್ತು. ಈಗಿನ ಬ್ರೌಸರ್ಗಳಲ್ಲಿರುವ ಟ್ಯಾಬ್ಗಳು, ಪಾಪ್-ಅಪ್ ಬ್ಲಾಕ್ ಮಾಡುವುದು, ‘ಎಕ್ಸ್ಟೆನ್ಷನ್’ಗಳು ಮುಂತಾದವೆಲ್ಲವೂ ಫೈರ್ಫಾಕ್ಸ್ನ ಆವಿಷ್ಕಾರಗಳು. ಬಳಕೆದಾರರು ಸಹಜವಾಗಿ ಫೈರ್ಫಾಕ್ಸ್ನತ್ತ ಹೊರಳಿದರು.
ಅಷ್ಟೊತ್ತಿಗೆ ಇಂಟರ್ನೆಟ್ ಎಂದರೆ ಗೂಗಲ್ ಎಂಬಷ್ಟು ವ್ಯಾಪಕವಾಗಿ ಗೂಗಲ್ ಬೆಳೆದುಬಿಟ್ಟಿತ್ತು. ಹಾಗಿರುವ ಮೇಲೆ ಅದರದ್ದೇ ಒಂದು ಬ್ರೌಸರ್ ಇರಬೇಕಲ್ಲವೇ? ಈ ಆಸೆಯ ಫಲವೇ ‘ಗೂಗಲ್ ಕ್ರೋಮ್’. ಕ್ರೋಮ್ ಫೈರ್ಫಾಕ್ಸ್ಗಿಂತ ವೇಗವಾಗಿತ್ತು, ಸ್ಟೇಬಲ್ ಆಗಿತ್ತು. ಕಡಿಮೆ ಮೆಮೊರಿಯನ್ನು ಬಳಸುತ್ತಿತ್ತು. ಒಂದು ಟ್ಯಾಬ್ ಕ್ರಾಶ್ ಆದರೂ ಇನ್ನೊಂದು ಟ್ಯಾಬ್ ಉಸಿರಾಡುತ್ತಿತ್ತು. ಮೇಲಾಗಿ ಗೂಗಲ್ನ ಟ್ರೇಡ್ಮಾರ್ಕ್ ಸಿಂಪ್ಲಿಸಿಟಿ ಎಂದಿನಂತೆ ಕ್ರೋಮ್ನಲ್ಲೂ ಇಟ್ಟಿದ್ದ ಟಪ್ಪೆಯಷ್ಟು ಸ್ಪಷ್ಟವಾಗಿರುತ್ತಿತ್ತು. ವೆಬ್ಸೈಟ್ ವಿಳಾಸ ತುಂಬುವಲ್ಲಿ ಹುಡುಕಾಟದ ಸಾಲುಗಳನ್ನೇ ಟೈಪಿಸಬಹುದಾಗಿತ್ತು. ತನ್ನದೇ ಸರ್ಚ್ ಎಂಜಿನ್, ಜಿಮೇಲ್, ಗೂಗಲ್ ಮ್ಯಾಪ್, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮುಂತಾಗಿ ಎಲ್ಲ ಕಡೆಯೂ ಗೂಗಲ್ ಇದ್ದಿದ್ದರಿಂದ ಜನರಿಗೆ ಕ್ರೋಮ್ ಗಾಳಿ ನೀರಿನಷ್ಟೇ ಅನಿವಾರ್ಯವಾಯಿತು. 2012ರ ಹೊತ್ತಿಗೆ ಗೂಗಲ್ ಫೈರ್ಫಾಕ್ಸ್ ಮತ್ತು ಎಕ್ಸ್ಪ್ಲೋರರ್ಗಳನ್ನು ಹಿಂದಿಕ್ಕಿತ್ತು. ಇಲ್ಲಿ ಗೂಗಲ್ ಮೈಕ್ರೋಸಾಫ್ಟ್ನ ಹಾದಿಯನ್ನೇ ತುಳಿದರೂ ಮೈಕ್ರೋಸಾಫ್ಟ್ನಂತ ಆವಿಷ್ಕಾರದ ವಿಷಯದಲ್ಲಿ ಹಿಂದೆ ಬೀಳಲಿಲ್ಲ; ಅದ್ದಂದಲೇ ಅದಕ್ಕೆ ಪರ್ಯಾಯವಾಗಿ ಒಂದೂವರೆ ದಶಕದ ಕಾಲ ಇನ್ನೊಂದು ಬ್ರೌಸರ್ ಹುಟ್ಟಲಿಲ್ಲ. ಎರಡನೇ ‘ವಿಶ್ವ ಬ್ರೌಸರ್ ಯುದ್ಧದ’ ಅಂತ್ಯದಲ್ಲಿ ಎಕ್ಸ್ಪ್ಲೋರರ್ ಹೇಳ ಹೆಸರಿಲ್ಲದಂತಾಗಿ ಫೈರ್ಫಾಕ್ಸ್ ತೆರೆಮರೆಗೆ ಸರಿದು ಕ್ರೋಮ್ ತ್ರಿವಿಕ್ರಮನಾಗಿತ್ತು.
ಕಾಲ ಬದಲಾಗಿದೆ. ಎಐ ಬಂದಿದೆ. ಜಗತ್ತು ಮೂರನೇ ವಿಶ್ವ ಬ್ರೌಸರ್ ಯುದ್ಧಕ್ಕೆ ಸಾಕ್ಷಿಯಾಗುತ್ತಿದೆ. ಈ ವರ್ಷ ಪರ್ಪ್ಲೆಕ್ಸಿಟಿ (Perplexity), ಆರ್ಕ್ (Arc-ChatGPT) ಎರಡು ಹೊಸ ಬ್ರೌಸರ್ಗಳು ಹೊರಬಂದಿವೆ. ಅದಕ್ಕೆ ಪ್ರತಿಕ್ರಿಯೆಯಾಗಿ ಕ್ರೋಮ್ ಜೆಮಿನಿಯಮಯವಾಗಿದೆ. ಮೈಕ್ರೋಸಾಫ್ಟ್ನ ಎಡ್ಜ್ ಕೊಪೈಲಟ್ ಮಯವಾಗುತ್ತಿದೆ. ಕಣದಲ್ಲಿ ಈಗ ನಾಲ್ಕು ಎಐ ಬ್ರೌಸರ್ಗಳು ಸ್ಪರ್ಧಿಸುತ್ತಿವೆ. ಆಪಲ್ನ ಸಫಾರಿಯನ್ನೂ ಸೇರಿಸಿಕೊಂಡರೆ ಐದು. ಬ್ರೌಸರ್ ಎಂದರೆ ಏನು? ಬ್ರೌಸಿಂಗ್ ಅಂದರೆ ಹೇಗೆ? ಎಂಬ ಅರ್ಥವನ್ನೇ ಬದಲಿಸಲು ಹೊರಟಿವೆ. ಮುಂಚೆ ಬ್ರೌಸರ್ ಒಂದು ಉಪಕರಣವಾಗಿ (ಕ್ರೋಮ್), ಸರ್ಚ್ ಎಂಜಿನ್ (ಗೂಗಲ್) ಹುಡುಕಿಕೊಡುವ ಸಾಯುವಕ್ಕಾಗಿ ಕೈಜೋಡಿಸಿ ನಿಮಗೆ ಇನ್ಯಾವುದೋ ವೆಬ್ಸೈಟ್ಗೆ ಹೋಗಲು ಸಹಾಯ ಮಾಡುತ್ತಿದ್ದವು. ಈಗಿನ ಎಐ ಬ್ರೌಸರ್ಗಳು ತಾವೇ ಉಪಕರಣವಾಗಿ, ತಾವೇ ಸರ್ಚ್ ಎಂಜಿನ್ನಾಗಿ ಮತ್ತು ತಾವೇ ಅಲ್ಲಿ ಹೋಗಿ ನಿಮಗೇನು ಕೆಲಸ ಬೇಕೋ ಆ ಕೆಲಸವನ್ನು ಮಾಡಿಕೊಡುವ ಅಸಿಸ್ಟಂಟ್ಗಳಾಗಿ – ಒಟ್ಟು ಮೂರು ಜವಾಬ್ದಾರಿಗಳನ್ನು ನಿರ್ವಹಿಸುತ್ತಿವೆ. ಈ ತನಕ ನಮ್ಮ ಬದುಕು ಎಷ್ಟು ಯಾಂತ್ರಿಕವಾಗಿತ್ತು, ಈ ಬ್ರೌಸರ್ ಎಷ್ಟು ಆಟೋಮ್ಯಾಟಿಕ್ ಮಾಡುತ್ತಿವೆ ಎಂಬುದು ಇದರಿಂದ ನಿಮಗೆ ಅರ್ಥವಾಗಿರಬೇಕು.
ನೀವು ರೈಲಿನ ಟಿಕೆಟ್ ಬುಕ್ ಮಾಡಬೇಕೆಂದಿದ್ದಲ್ಲಿ ಇಂಥ ದಿವಸ, ಇಷ್ಟು ಜನರಿಗೆ ಇಷ್ಟು ಟಿಕೆಟ್ ಬುಕ್ ಮಾಡಿಕೊಡು ಎಂದರೆ ಮಿಕ್ಕಿದ್ದೆಲ್ಲವನ್ನೂ ಅವೇ ಮಾಡಿಕೊಡುತ್ತವೆ. ನೀವು ಡುಯಿಂಗ್ ಹಾಕಿದರೆ ಮುಗಿಯಿತು. ಇದನ್ನೇ ‘ಏಜೆಂಟಿಕ್ ಮೋಡ್’ ಎನ್ನುತ್ತಾರೆ. ಎರಡನೆಯದಾಗಿ, ಒಂದು ಮಾಹಿತಿಗಾಗಿ ನೀವು ಹತ್ತಾರು ವೆಬ್ ಸೈಟ್ಗಳನ್ನು ತೆರೆದು ಎಲ್ಲವನ್ನೂ ಓದಿ ಅರ್ಥಮಾಡಿಕೊಳ್ಳುವ ಶ್ರಮಪಡಬೇಕಿಲ್ಲ; ಇವು ಕ್ಷಣಾರ್ಧದಲ್ಲಿ ನೂರು ವೆಬ್ಸೈಟ್ಗಳನ್ನು ಓದಿ ಸಮಗ್ರವಾದ ಸಂಕ್ಷಿಪ್ತವಾದ ನೇರ ಉತ್ತರವನ್ನು ನಿಮ್ಮೆದುರು ಇಡುತ್ತವೆ. ಮೂರನೆಯದಾಗಿ ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ನೆನಪಿನಲ್ಲಿಟ್ಟುಕೊಳ್ಳುತ್ತವೆ. ಮುಂಚೆ ವಾರಾದ ಹಿಂದೆ ಓಪನ್ ಮಾಡಿದ್ದ ಲಿಂಕ್ ಬುಕ್ಮಾರ್ಕ್ ಆಗಿ ಸೇವ್ ಮಾಡಿಟ್ಟುಕೊಂಡಿದ್ದರೆ ಮಾತ್ರ ಬದುಕು. ಈಗ ಹಾಗಿಲ್ಲ; ಹೋದ ತಿಂಗಳು ತೋರಿಸಿದ ಕಟ್ನ್ನು ಇನ್ನೊಮ್ಮೆ ತೋರಿಸು ಅಂದರೆ ಸಾಕು.
ಆದರೆ, ಈ ಹೊಸ ಬ್ರೌಸರ್ಗಳ ವಿಷಯದಲ್ಲಿ ಒಂದು ಕ್ಯಾಚ್ ಇದೆ. ಏನೆಂದರೆ ಅವು ಪಾಯದಿಂದ ಹಿಡಿದು ಹೊಸದಾಗಿ ಕಟ್ಟಿರುವ ಬ್ರೌಸರ್ಗಳಲ್ಲ. ಕ್ರೋಮಿಯಂ ಎಂಬ ಮುಕ್ತತಂತ್ರಜ್ಞಾನದ ಬ್ರೌಸರ್ನ ಅಡಿಪಾಯದ ಮೇಲೆ ತಮ್ಮ ಕಮ್ಮ ಕಟ್ಟಡ ಕಟ್ಟಿಕೊಂಡಿರುವುದು. ಈ ಕ್ರೋಮಿಯಂ ಯಾರು ಮತ್ತು ಯಾರದು ಅಂದಿರಾ? ಗೂಗಲ್ನದ್ದು! ಗೂಗಲ್ನ ಕ್ರೋಮ್ ಸಹ ಇದೇ ಪಾಯದ ಮೇಲೆ ನಿಂತಿರುವುದು. ಅಲ್ಲಿಗೆ ಬೇರೆ ಯಾರಾದರೂ ಗೂಗಲ್ ವಿರುದ್ಧ ಸ್ಪರ್ಧಿಸಬೇಕೆಂದರೂ ಅವರದ್ದೇ ಪಾಯ ಬಳಸಬೇಕಾಗಿದೆ. ಇದರಿಂದಾಗಿ ಯಾರೂ ಗೂಗಲ್ ಗಿಂತ ಬಹಳ ವಿಶೇಷವಾದ ಬ್ರೌಸರ್ ತಯಾರಿಸಲು ಸಾಧ್ಯವಿಲ್ಲ ಎನ್ನುವುದು ಸದ್ಯಕ್ಕಿರುವ ಸತ್ಯ. ಇದು ಗೂಗಲ್ಗೆ ಸಕಾರಿಯಾರಿ. ಆದರೆ, ಆವಿಷ್ಕಾರದ ದೃಷ್ಟಿಯಿಂದ ಮಾರಕ. ಜನ ಇದರಿಂದಾಗಿ ಚಲಿಸಲು ಪ್ರಯತ್ನಿಸದೆ ಏಕಸ್ವಾಮ್ಯತೆ (ಮೊನೊಪೋಲಿ)ಯಿಂದ ಜಡತ್ವ ಆವರಿಸುತ್ತದೆ. ಇರಲಿ, ಎಐ ಬ್ರೌಸರ್ಗಳು ಉಂಟುಮಾಡಲಿರುವ ಕ್ರಾಂತಿಯ ಪರಿಣಾಮ ಏನು ಗೊತ್ತೇ?
ನೋಡಿ ನಿಮಗೇ ಯಾವುದಾದರೂ ಮಾಹಿತಿ ಹುಡುಕಬೇಕೆಂದರೆ ನೇರ ಎಐ ಬ್ರೌಸರ್ ಕೇಳಿದರೆ, ಅದು ನಿಮಗೆ ಬೇಕಾದ್ದನ್ನು ಹುಡುಕಿ ಸಂಸ್ಕರಿಸಿ ಕೊಡುತ್ತದೆ. ಅಗತ್ಯವಿದ್ದಲ್ಲಿ ಇಂಥ ಮಾಹಿತಿಯನ್ನು ಇಂಥ ವೆಬ್ಸೈಟ್ಗಳಿಂದ ಹೇಳಿದೆ ಎಂದು ರೆಫರೆನ್ಸ್ ಕೊಡುತ್ತದೆ. ಆದರೆ, ಎಷ್ಟು ಜನ ಹೋಗಿ ಆ ರೆಫರೆನ್ಸ್ ಲಿಂಕ್ಗಳನ್ನು ಒತ್ತಿ ಪರಿಶೀಲಿಸುತ್ತಾರೆ? ಒಂದು ಸಮೀಕ್ಷೆ ಪ್ರಕಾರ 5% ಗಿಂತ ಕಡಿಮೆ. ತಾಳ್ಮೆಯಿಂದ ಯೋಚಿಸಿ. ವಿಶ್ವಾದ್ಯಂತ ಹಬ್ಬಿರುವ ಒಂದಿಡೀ ಅಂತರ್ಜಾಲ ಲೋಕವನ್ನು ಈ ಎರಡು ಮೂರು ಬ್ರೌಸರ್ಗಳು ಎಷ್ಟರ ಮಟ್ಟಿಗೆ ಕಟ್ಟಿ ಹಾಕಲಿವೆ. ಅಷ್ಟು ವಿಶಾಲ, ಲಕ್ಷಾಂತರ ವೆಬ್ಸೈಟ್ಗಳ ಮುಖಪುಟ ಅಥವಾ ಪ್ರಾಸ್ತಾವಿಕವಾಗಿವೆ. ಕೆಲವು ಸೋಶಿಯಲ್ ಮೀಡಿಯಾ ವೆಬ್ಸೈಟ್ ಹೊರತು ಜನ ಇನ್ನು ಮುಂದೆ ಇನ್ಯಾವ ವೆಬ್ಸೈಟ್ಗಳತ್ತಲೂ ತಲೆ ಹಾಕುವುದಿಲ್ಲವೆಂದರೆ ಅತಿಶಯೋಕ್ತಿಯಲ್ಲ.
ಇದರ ವಾಣಿಜ್ಯ ಪರಿಣಾಮ ನೋಡಿ. ಈ ತನಕ ಇಂಟರ್ನೆಟ್ ಆಧಾರಿತ ಜಾಹೀರಾತು ಎಂಬುದ್ದೊಂದು ಇತ್ತು. ಜನ ಹುಡುಕಿದಾಗ ತಮ್ಮ ವೆಬ್ಸೈಟ್ ಮೊದಲು ಕಾಣಿಸಿಕೊಳ್ಳುವಂತೆ ಗೂಗಲ್ಗೆ ದುಡ್ಡು ಕೊಡುತ್ತಿದ್ದರು. ಅದಕ್ಕೆ ಕತ್ತರಿ ಬಿತ್ತು. ಗೂಗಲ್ಗೂ ನಷ್ಟ, ಆ ವೆಬ್ಸೈಟ್ಗಳಿಗೂ ನಷ್ಟ! ಇನ್ನೆಲ್ಲಿಯೂ ಅವು ಎಐ ಬ್ರೌಸರ್ ಕಂಪನಿಗಳಿಗೆ ದುಡ್ಡು ಕೊಟ್ಟು ಅವುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಅದಾಗುತ್ತದಾ ಡೌಟು. ಯಾಕೆಂದರೆ ಎಐ ಪಕ್ಷಪಾತಿಯಾಗುವಂತಿಲ್ಲ. ಹಾಗೆ ಮಾಡಿದರೆ ವಿಶ್ವಾಸಕ್ಕೆ ಧಕ್ಕೆ. SEO (Search Engine Optimisation) ಎಂಬ ಮಾರುಕಟ್ಟೆ ಸಂಪೂರ್ಣವಾಗಿ ಮಕಾಡೆ ಮಲಗಲಿದೆ.
ಹಾಗೆ ಜಾಹೀರಾತಿನ ಮೂಲಕ ಸ್ಪರ್ಧೆಯನ್ನು ಗೆಲ್ಲುತ್ತಿದ್ದ ಕೆಟ್ಟ ಚಾಳಿಗೂ ಕಡಿವಾಣ ಬೀಳಲಿದೆ. ಕೆಟ್ಟ ಪ್ರಾಡಕ್ಟ್, ತಪ್ಪು ಮಾಹಿತಿ, ಕೆಟ್ಟ ವರದಿ ಮುಂತಾದವಕ್ಕೆ ಇನ್ನು ಮುಂದೆ ಜೀವನ ಕಷ್ಟವಾಗಬಹುದು. ಯಾಕೆಂದರೆ ಎಐ ಬ್ರೌಸರ್ಗಳು ಇದನ್ನು ಸಂಶ್ಲೇಷಿಸುತ್ತವೆ. ಉತ್ತಮ, ನಿಖರ, ಗುಣಮಟ್ಟದ ಸೇವೆ ಒದಗಿಸುವವಷ್ಟೇ ತೀವ್ರ ಸ್ಪರ್ಧೆಯಲ್ಲಿ ಇರುವುದರಿಂದ ಹೀಗೆ ಮಾಡುವುದು ಅವುಗಳಿಗೆ ಅನಿವಾರ್ಯ. ಹಾಗಾಗಿ ಎಐ ಬ್ರೌಸರ್ಗಳ ಕ್ಷಕಿರಣಕ್ಕೆ ಒಳಗಾಗಬೇಕೆಂದರೆ ನಿಮ್ಮ ಪ್ರಾಡಕ್ಟ್ ಉತ್ತಮವಾಗಿರಬೇಕು. ಮಾಹಿತಿ ಗುಣಮಟ್ಟದ್ದಾಗಿರಬೇಕು. ವರದಿ ಮೌಲ್ಯಯುತವಾಗಿರಬೇಕು. ಇಷ್ಟು ಅಲ್ಗೊಳಿತಮ್ಗಳ ಅಗ್ರಹಾರದಲ್ಲಿಯೇ ನೀವು ಪರಿಶುದ್ಧವಾಗಿ ಹೊರಬರಬೇಕು. ಇಂಥದೊಂದು ಒಳ್ಳೆ ಬದಲಾವಣೆಯನ್ನು ಎಐ ತರಲಿದೆ ಎಂಬ ಆಶಾವಾದ ನನ್ನದು.
ಹೋಮೋ ಸೇಪಿಯನ್ಸ್ ಕವಲೊಡೆದನೆ? (Has Homo Sapiens Diverged?)
ಒಂದು ನೂರು ವರ್ಷಗಳ ಹಿಂದೆ ಯಂತ್ರಗಳು ಅಷ್ಟು ದೂರದಲ್ಲಿ ಕೂತು ನಾವು ಹೇಳಿದ ಕೆಲಸ ಮಾಡಿಕೊಡುತ್ತಿದ್ದವು; ಉದಾಹರಣೆಗೆ, ಎಂಜಿನ್ನುಗಳು. ಆಮೇಲಾಮೇಲೆ ಅವು ನಮ್ಮ ಸಮೀಪ ಬಂದು ನಮ್ಮೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸತೊಡಗಿದವು; ಉದಾಹರಣೆಗೆ ಸ್ಮಾರ್ಟ್ಫೋನುಗಳು. ಈಗೀಗ ಅವು ನಮ್ಮ ದೇಹವನ್ನು ಪ್ರವೇಶಿಸಲಾರಂಭಿಸಿವೆ; ಉದಾಹರಣೆಗೆ, ಮೈಕ್ರೋ ಎಲೆಕ್ಟ್ರೋಡ್ಗಳು. ಇವು ನಮ್ಮ ಕೂದಲಿಗಿಂತ ತೆಳುವಾಗಿರುತ್ತವೆ. ಶರೀರದಲ್ಲಿ ಇಂಪ್ಲಾಂಟ್ ಆಗಿ ಮಿದುಳಿನ ನರಗಳೊಂದಿಗೆ ಸಂವಹಿಸುತ್ತ ಮಿದುಳನ್ನು ನಿರ್ದೇಶಿಸುತ್ತವೆ. ಪಾರ್ಕಿನ್ಸನ್, ಅಲ್ಝೈಮರ್ನಂಥ ಕಾಯಿಲೆಗಳಿಗೆ ಮದ್ದಾಗಲಿವೆ. ಇವುಗಳಿಂದಾಗಿ ನಮ್ಮ ದೇಹವನ್ನು ಸರ್ಕ್ಯೂಟ್ನಿಂದ, ನಮ್ಮ ಆಲೋಚನೆಯನ್ನು ಕಂಪ್ಯೂಟರನ ಪ್ರೊಸೆಸರಿಂದ ಬೇರ್ಪಡಿಸಿದ ಗೆರೆ ಕರಗುತ್ತಿದೆ. ಅರ್ಥಾತ್ ಮನುಷ್ಯ ಮತ್ತು ಯಂತ್ರ ಸಂಗಮವಾಗುತ್ತಿರುವ ಕಾಲದಲ್ಲಿದ್ದೇವೆ. ಎಐನಿಂದಾಗಿ ನಮ್ಮ ಜೈವಿಕ ನರಕೋಶಗಳು ಮತ್ತು ಯಾಂತ್ರಿಕ ಸರ್ಕ್ಯೂಟ್ಗಳು ಒಂದೇ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿರುವುದನ್ನು ಇದೇ ದೃಷ್ಟಿಯಿಂದ ಗಮನಿಸಬೇಕು.
ನೆನ್ನೆ ಮೊನ್ನೆ ತನಕ ನಾವು ಸೈಬಾರ್ಗ್ಗಳೆಂದರೆ (ಯಂತ್ರಮಾನವರು) ಲೋಹದ ಕೈಕಾಲುಗಳಿರುವ ಜೀವಿಗಳೆಂದು ಕಲಿತುಕೊಳ್ಳುತ್ತಿದ್ದೆವು. ನಿಜ ಹೇಳ್ಬೇಕೆಂದರೆ, ಈಗಾಗಲೇ ಒಂದು ರೀತಿಯಲ್ಲಿ ನಾವೇ ಸೈಬಾರ್ಗ್ಗಳಾಗಿದ್ದೇವೆ. ನಮ್ಮ ಜೇಬಿನಲ್ಲಿರುವ ಸ್ಮಾರ್ಟ್ಫೋನ್ ನಮ್ಮ ಬಾಹ್ಯ ಮಿದುಳಿನಂತೆ ಕೆಲಸ ಮಾಡುತ್ತದೆ. ಅದು ನಮ್ಮ ನೆನಪುಗಳನ್ನು (ಸಂಪರ್ಕಗಳು, ಫೋಟೋಗಳು) ಸಂಗ್ರಹಿಸುತ್ತದೆ, ದಾರಿ ತೋರಿಸುತ್ತದೆ (ಮ್ಯಾಪ್ಸ್), ನಮ್ಮ ಇಡೀ ದೈನಂದಿನ ಜೀವನವನ್ನು ನಿಭಾಯಿಸುತ್ತದೆ, ನಿರ್ದೇಶಿಸುತ್ತದೆ. ತಿನ್ನುವುದು, ಮಲಗುವುದು, ಉಸಿರಾಡುವುದರ ಹೊರತು ಎಲ್ಲವನ್ನೂ ಫೋನಿಗೆ ಹೊರಗುತ್ತಿಗೆ ಕೊಟ್ಟುಬಿಟ್ಟಿದ್ದೇವೆ.
ಬಿಸಿಐ ಪೈಕಿಗೆ ಸೇರುವ ಈ ಹೊಸ ತಂತ್ರಜ್ಞಾನಗಳು ನಮ್ಮ ಮಿದುಳಿಗೇ ಕೈ ಹಾಕುತ್ತಿವೆ ಎಂದರೆ ಉತ್ಪ್ರೇಕ್ಷೆಯಲ್ಲ. ನಮ್ಮ ಮಿದುಳಿನ ಪ್ರತಿ ನರಗಳ ವಿದ್ಯುತ್ ಸಂಕೇತಗಳನ್ನು ಓದಿ ಅವುಗಳನ್ನು ಕಂಪ್ಯೂಟರ್ ಅರ್ಥಮಾಡಿಕೊಳ್ಳಬಲ್ಲ ಡಿಜಿಟಲ್ ಸಿಗ್ನಲ್ಗಳಾಗಿ ಪರಿವರ್ತಿಸಿ ಸಿಪಿಯುನಲ್ಲಿ ಅವುಗಳ ಕಾರ್ಯತಂತ್ರವನ್ನು ವಿಶ್ಲೇಷಿಸಿ, ಬದಲಾಯಿಸಿ, ಮಿದುಳನ್ನು ಮರುನಿರ್ದೇಶಿಸುವ ಚಾಣಾಕ್ಷತನ ಹೊಂದಿವೆ ಈ ತಂತ್ರಜ್ಞಾನಗಳು. ನ್ಯೂರಲಿಂಕ್, ಸಿಂಕ್ರೋನ್ ಮತ್ತು ಬ್ಲ್ಯಾಕ್ರಾಕ್ ನ್ಯೂರೋಟೆಕ್ನಂಥ ಕಂಪನಿಗಳು ಪಾರ್ಶ್ವವಾಯು ಪೀಡಿತ ರೋಗಿಗಳು ಕೇವಲ ಆಲೋಚನೆಯ ಮೂಲಕವೇ ಕಂಪ್ಯೂಟರಿನ ಕರ್ಸರ್ ಚಲಿಸುವಂತೆ ಅಥವಾ ವಾಕ್ಯಗಳನ್ನು ಟೈಪ್ ಮಾಡುವಂತೆ ಮಾಡುವ ಇಂಪ್ಲಾಂಟ್ಗಳನ್ನು ರೂಪಿಸುತ್ತಿವೆ. ಎಂದರೆ ವಿಷಯದ ಗಾಂಭೀರ್ಯತೆ ಊಹಿಸಿಕೊಳ್ಳಿ. ಸದ್ಯಕ್ಕಿನ್ನೂ ನಮಗೊಂದು ಮಾಹಿತಿ ಬೇಕೆಂದರೆ ಗೂಗಲ್ನಲ್ಲಿ ಅಥವಾ ಚಾಟ್ ಜಿಪಿಟಿಯಲ್ಲಿ ಹುಡುಕುವ ಕಾಲದಲ್ಲಿದ್ದೇವೆ. ಬಿಸಿಐನಿಂದಾಗಿ ಮುಂದೆ ಬೇಕಾದ ಮಾಹಿತಿಯನ್ನು ಮಿದುಳಿನ ಮೂಲಕ ಹುಡುಕಿ ಮಿದುಳಿಗೆ ಹೊಳಿಸಬಲ್ಲ ದಿನಗಳು ಬರಬಹುದು. ಬರ್ತಾ ಬರ್ತಾ ಇದು ಹೆಂಗಾಗುತ್ತೆ ಅಂದರೆ ಶಿಪ್ ಆಫ್ ಥೀಸಿಯಸ್ ಅನ್ನು ನೆನಪಿಸುತ್ತದೆ. ನಮ್ಮ ಮಿದುಳಿನ ಹಾನಿಗೊಳಗಾದ ಒಂದು ನರಕೋಶವನ್ನು ಕೃತಕ ನರಕೋಶದಿಂದ ಬದಲಾಯಿಸಿದರೆ, ನಾವು ನಾವಾಗಿಯೇ ಇರುತ್ತೇವಿ ಅನ್ನಬಹುದು. ಒಂದು ಲಕ್ಷ ನರಕೋಶಗಳನ್ನು ಬದಲಾಯಿಸಿದರೆ ನಾವಾಗಿಯೇ ಉಳಿಯುತ್ತೇವಾ? ಮಿದುಳಿನ ಒಂದು ಭಾಗವನ್ನು ತೆಗೆದು ಅಲ್ಲಿ ನೆನಪಿನ ಶಕ್ತಿ ಅಥವಾ ಗಣಿತದ ಸಾಮರ್ಥ್ಯವನ್ನು ಹೆಚ್ಚಿಸುವ ಒಂದು ನ್ಯೂರಲ್ ಪ್ರೊಸೆಸರ್ ಅಳವಡಿಸಿಬಿಟ್ಟರೆ ಹೇಗೆ? ನಾವು ಸತ್ತರೂ ಆ ಚಿಪ್ಪು ಉಳಿಯುತ್ತದಲ್ಲ, ಆಗ ನಾವು ನಿಜಕ್ಕೂ ಸತ್ತಂತೆ ಅರ್ಥವಾ? ಈಗ ನಮಗೆ ನಮ್ಮ ಆಸ್ತಿ ಸಂರಕ್ಷಿಸುವ ಮೂಲಕ ನಮ್ಮನ್ನು ನಾವು ಬ್ಯಾಂಕ್ನಲ್ಲಿ ಸೇವ್ ಮಾಡಿಕೊಳ್ಳುತ್ತಿದ್ದೇವೆ. ಮುಂದೆ ನಮ್ಮ ಮಿದುಳನ್ನು ಚಿಪ್ಗೆ ಕಾಪಿ ಮಾಡಿ ಡೇಟಾಸೆಂಟರ್ಗಳಲ್ಲಿ ಸುಪ್ತವಾಗಿ ಇಟ್ಟರೆ? ಸಾವಿರ ವರ್ಷಗಳ ನಂತರ ಇಂದಿನ ಡೇಟಾಸೆಂಟರ್ಗಳೇ ಮುಂದಿನ ಪಿರಮಿಡ್ಗಳಾಗುವುದಿಲ್ಲವೇ?
ಜೊತೆಗೆ ಇಂಥ ಅರ್ಧಂಬರ್ಧ ಕೃತಕ ಮಿದುಳು ಹೊಂದಿದಾಗ ನಾವು ಆವಿಷ್ಕರಿಸುವ ಹೊಸ ವಸ್ತುವೊಂದರ ಶ್ರೇಯಸ್ಸು ಯಾರಿಗೆ ಸಲ್ಲುತ್ತೆ? ಅಥವಾ ಆ ಕೃತಕ ಮಿದುಳನ್ನು ಬಳಸಿ ಯಾರನ್ನಾದರೂ ಕೊಂದರೆ ಪಾಪ ಯಾರಿಗೆ ತಟ್ಟುತ್ತೆ? ನೈತಿಕ ಹೊಣೆ ಯಾರು ಹೊರಬೇಕು? ಶಿಕ್ಷೆ ಯಾರಿಗೆ ಕೊಡಬೇಕು?
ಮರೆವು ಮನುಷ್ಯನ ಮೂಲಭೂತ ಲಕ್ಷಣ. ಅದು ನಾವು ಒಬ್ಬ ವ್ಯಕ್ತಿಗೆ ತೋರುವ ಕ್ಷಮಾಪಣೆಯೂ ಹೌದು, ನಮ್ಮ ನೋವಿಗೆ ಪರಿಹಾರವೂ ಹೌದು. ಈಗಿರುವ ತಂತ್ರಜ್ಞಾನಗಳೇ ಮರೆವಿಗೆ ಪರ್ಯಾಯವಾಗಿ ನೆನಪುಗಳನ್ನು ಸಿಲಿಕಾನ್ ಚಿಪ್ನಲ್ಲಿ ಉಳಿಸುತ್ತಿವೆ. ಮನುಷ್ಯ ಸಾಯುವ ತನಕ ಯಾರೋ ಮಾಡಿದ ಅವಮಾನ, ಯಾರೋ ಎಂದ ಚುಚ್ಚುಮಾತುಗಳನ್ನು ನೆನಪಿಟ್ಟುಕೊಂಡು ಏನು ಮಾಡುವುದು?
ನೀಲ್ ಪೋಸ್ಟ್ಮನ್ “ಪ್ರತಿ ಹೊಸ ತಂತ್ರಜ್ಞಾನ ಒಂದು ವರ್ಗಕ್ಕೆ ಒಳ್ಳೆಯದು ಮಾಡಿದರೆ ಇನ್ನೊಂದು ವರ್ಗಕ್ಕೆ ಕೆಟ್ಟದು ಮಾಡುತ್ತದೆ ಮತ್ತು ಅಸಮಾನತೆ ಉಂಟು ಮಾಡಿ ಅಸಮಾನತೆ ಹೆಚ್ಚಿಸುತ್ತದೆ” ಎನ್ನುತ್ತಾನೆ. ಸೈಬಾರ್ಗ್ ಮಟ್ಟಕ್ಕೆ ಏರಿರುವವರು ಕೆಲವೇ ಗಂಟೆಗಳಲ್ಲಿ ಏನನ್ನೋ ಕಲಿಯಬಹುದು, ಊಹಿಸಲಾಗದ ವೇಗದಲ್ಲಿ ಡೇಟಾವನ್ನು ಸಂಸ್ಕರಿಸಬಹುದು. ನಿಸರ್ಗದ ಮಿತಿಯಲ್ಲಿರುವವರು ಈ ಶಕ್ತಿಗಳಿಲ್ಲದೇ ಮಂದಮತಿಗಳಾಗಿ ಹಿಂದೆ ಉಳಿಯಬಹುದು. ಇದೊಂದು ಹೊಸ ಬಗೆಯ ಜೈವಿಕಮಟ್ಟದ ವರ್ಗ ವಿಭಜನೆ ಹುಟ್ಟುಹಾಕುತ್ತಿದೆಯೇ ಎಂಬ ಪ್ರಶ್ನೆ ಮೂಡಿಸುತ್ತಿದೆ.
ಇದೆಲ್ಲವೂ ‘ಹೋಮೋ ಸೇಪಿಯನ್ಸ್’ ಪ್ರಭೇದ ಕವಲೊಡೆಯುತ್ತಿರುವ ಲಕ್ಷಣವೇ? ಸುಮ್ಮನೆ ಯೋಚಿಸಿ ನೋಡಿ. ಜೆನ್ ಜಿ ಅಂತೀವಲ್ಲ ಅವರ ಭಾಷೆಯೇ ಬೇರೆಯಿದೆ. ನಮ್ಮ ಭಾಷೆ ನಮ್ಮ ಅಜ್ಜಂದಿರಿಗೆ ಅರ್ಥವಾಗುತ್ತಿರಲಿಲ್ಲ, ಜೆನ್ ಜಿ ಭಾಷೆ ನಮಗೆ ಅರ್ಥವಾಗುತ್ತಿಲ್ಲ. ನಮ್ಮ ಸಂವೇದನೆಗಳಿಗೂ ಅವರ ಸಂವೇದನೆಗಳಿಗೂ ಈಗಾಗಲೇ ಬಹಳ ವಿಭಿನ್ನ ಎಂದು ಸಾಬೀತಾಗಿದೆ. ಇಲ್ಲಿ ಯಾರೂ ತಪ್ಪಲ್ಲ, ಯಾರೂ ಸರಿಯಲ್ಲ; ಹೊಸ ಬಗೆಯ ಹೋಮೋ ಸೇಪಿಯನ್ಸ್ನ ಉತ್ತರಾಧಿಕಾರಿಗಳು ಇವರೇ ಇರಬಹುದು ಅನ್ನಿಸುತ್ತದೆ. ನಿಮಗಿನ್ನೂ ಐದಾರು ವರ್ಷದ ಮುಗಿಯುವುದರಲ್ಲಿ ಖಂಡಿತ ಅದು ನೀವು ಅಂದುಕೊಂಡ ಮನುಷ್ಯನಾಗಿ ಉಳಿಯುವುದಿಲ್ಲ.
ಹಿಂದಿನ ಕಾಲದಲ್ಲಿ ಅತೀಂದ್ರಿಯವಾದಿಗಳು ಮೋಕ್ಷ ಹೊಂದಿ ದೈವಿಕ ಪ್ರಜ್ಞೆಯೊಂದಿಗೆ ಒಂದಾಗಲು ಬಯಸುತ್ತಿದ್ದರು; ಈಗಿನ ಕಾಲದಲ್ಲಿ ತಂತ್ರಜ್ಞರು ಕೃತಕ ಬುದ್ಧಿಮತ್ತೆಯೊಂದಿಗೆ ಒಂದಾಗಲು ಬಯಸುತ್ತಿದ್ದಾರೆ. ಒಂದು ಅಧ್ಯಾತ್ಮದ ಮೂಲಕ, ಇನ್ನೊಂದು ಸರ್ಕ್ಯೂಟ್ ಮೂಲಕ. ಆದರೆ, ಅಧ್ಯಾತ್ಮದ ಉದ್ದೇಶ ಮನುಷ್ಯನ ಅಹಂಕಾರವನ್ನು ಕರಗಿಸುವುದಾಗಿತ್ತು; ತಾಂತ್ರಿಕ ವಿಲೀನದ ಉದ್ದೇಶ ಅಹಂಕಾರ ಹೆಚ್ಚಿಸುವುದಾಗುತ್ತದೆಯೇ?
ಇದು ವಾರ್ ಆಫ್ ಬ್ರೌಸರ್ಸ್
ತಂತ್ರಜ್ಞಾನ ಲೋಕದಲ್ಲಿ ಹಿಂದೆಂದೂ ಜರುಗಿರದ ಬೆಳವಣಿಗೆಯೊಂದಕ್ಕೆ ಈ ವರ್ಷ ಸಾಕ್ಷಿಯಾಗುತ್ತಿದೆ. ಕೆಲವೇ ತಿಂಗಳುಗಳ ಅಂತರದಲ್ಲಿ ಜಗತ್ತಿಗೆ ಎರಡು ಬ್ರೌಸರುಗಳು ಬಿಡುಗಡೆಯಾಗಿವೆ. ಒಂದು ಪರ್ಪ್ಲೆಕ್ಸಿಟಿಯ ‘ಕಾಮೆಟ್’, ಇನ್ನೊಂದು ಓಪನ್ ಎಐನ ‘ಆರ್ಚ್’. ಆರ್ಚ್ ಸದ್ಯಕ್ಕಿನ್ನೂ ಮ್ಯಾಕ್ಗಳಲ್ಲಿಷ್ಟೇ ಲಭ್ಯ. ವಿಂಡೋಸ್ಗಳಲ್ಲಿ ಅದರಿಂದ ನಿಮ್ಮಲ್ಲಿ ಅನೇಕರು ಅದು ಹೇಗಿದೆಯೆಂದು ನೋಡಿರಲಿಕ್ಕಿಲ್ಲ. ಈ ಪಟ್ಟಿಗೆ ಭಾರತದ ‘ಆರತಿ’ ಬ್ರೌಸರನ್ನೂ ಸೇರಿಸಿದರೆ ಒಟ್ಟು ಮೂರು ಹೊಸ ಬ್ರೌಸರುಗಳು ಎಂದಾಗುತ್ತವೆ. ಆದರೆ, ಸದ್ಯಕ್ಕೆ ಮೊದಲ ಎರಡಷ್ಟೇ ವಿಶೇಷ, ಯಾಕೆಂದರೆ ಅವು ಎಐ ಆಧಾರಿತ ಬ್ರೌಸರುಗಳು. ಮೂರನೆಯದು ಎಐ ಅಳವಡಿಸಿಕೊಳ್ಳಲಿಲ್ಲವೆಂದರೆ ಪ್ರಯೋಜನವಿಲ್ಲ.
ವಿಷಯ ಏನಪ್ಪಾ ಅಂದರೆ, ಈ ಎಐ ಬ್ರೌಸರುಗಳು ಜನ ಇಂಟರ್ನೆಟ್ ನೋಡುವ ರೀತಿ, ಬಳಸುವ ರೀತಿ, ವಾಣಿಜ್ಯ ಉದ್ದೇಶಗಳು ಅವುಗಳೊಂದಿಗೆ ಬೆರೆಯುವ ರೀತಿ- ಎಲ್ಲವೂ ಬದಲಾಗಲಿದೆ. ಈ ಬದಲಾವಣೆ ಜಗತ್ತಿಗೆ ಕಲ್ಪದರ್ಶಿ ಕತ ಆಗಿದೆ. ನೋಡು ನೋಡುತ್ತಲೇ ನಾವು ಮತ್ತು ಅಂತರ್ಜಾಲ ಒಟ್ಟಿಗೆ ಮಾರ್ಪಡಲಿದ್ದೇವೆ. ಇದೆಲ್ಲ ಹೇಗೆ ಎಂದು ಕಡೆಯಲ್ಲಿ ಹೇಳೋಣ. ಸದ್ಯಕ್ಕೆ ಈ ಬ್ರೌಸರುಗಳ ಯುದ್ಧವನ್ನು ಐತಿಹಾಸಿಕ ಕುತೂಹಲಕ್ಕಾಗಿ ಆರಂಭದಿಂದ ನೋಡೋಣ.
1990ರಲ್ಲಿ CERNನಲ್ಲಿ ವಿಜ್ಞಾನಿಯಾಗಿದ್ದ ಟಿಮ್ ಬರ್ನರ್ಸ್-ಲೀ ಮೊದಲ ಬ್ರೌಸರ್ ತಯಾರಿಸಿದರು. ಅದನ್ನು ಅವರು WorldWideWeb ಎಂದು ಕರೆದರು. ಅದರಲ್ಲಿ ಬರೀ ಪಠ್ಯ ಬರುತ್ತಿತ್ತು. ಚಿತ್ರಗಳು ಇರಲಿಲ್ಲ. 1993ರಲ್ಲಿ ಮೊಸಾಯಿಕ್ ಎಂಬ ಸಾಮಾನ್ಯ ಜನರೂ ಬಳಸುವಂಥ ಹೊಸ ಬ್ರೌಸರ್ ಬಂತು. ಇದರಲ್ಲಿ ಪಠ್ಯದ ಜೊತೆಗೆ ಚಿತ್ರಗಳೂ ಇರುತ್ತಿದ್ದವು. ಆಗಲೇ ಜನ ಜಗತ್ತನ್ನು ‘ಮೊಸಾಯಿಕ್ಗಿಂತ ಮೊದಲು, ಮೊಸಾಯಿಕ್ ನಂತರ’ ಎಂದು ವಿಂಗಡಿಸಿದ್ದರು. ಆದರೆ, ನಿಜವಾದ ಕ್ರಾಂತಿಯಾಗಿದ್ದು ಈ ಮೊಸಾಯಿಕ್ ತಯಾರಿಸಿದವರಲ್ಲಿ ಇಬ್ಬರು 1994ರಲ್ಲಿ ನೆಟ್ ಸ್ಕೇಪ್ ಎಂಬ ಹೊಸ ಕಂಪನಿ ಶುರುಮಾಡಿ ನೆಟ್ ಸ್ಕೇಪ್ ನಾವಿಗೇಟರ್ ಎಂಬ ಹೊಸ ಬ್ರೌಸರನ್ನು ಹೊರತಂದಾಗ. ಇಂಟರ್ನೆಟ್ ನಿಧಾನವಿದ್ದ ಕಾಲದಲ್ಲಿ ಈ ಬ್ರೌಸರ್ನಲ್ಲಿ ಒಂದೊಂದೇ ಅಕ್ಷರ ಡೌನ್ಲೋಡ್ ಆದಂತೆ ಪರದೆ ಮೇಲೆ ಪ್ರತ್ಯಕ್ಷಗೊಳ್ಳುತ್ತ ಜನರಿಗೆ ನೈಜ ನೇರ ಬ್ರೌಸಿಂಗ್ ಅನುಭವ ಕೊಟ್ಟಿತು. ಈ ಬ್ರೌಸರ್ ಜಗತ್ತಿನ ಶೇ. 80ರಷ್ಟು ಮಾರ್ಕೆಟ್ಟನ್ನು ಗಳಿಸಿಕೊಂಡಿತು.
ಇದರ ಯಶಸ್ಸು ಬಿಲ್ ಗೇಟ್ಸ್ ಕಣ್ಣಿಗೆ ಬಿತ್ತು. ಅವರು ಆ ಕಾಲದಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ತಯಾರಿಸಿದವರಲ್ಲ ತಮ್ಮದೂ ಒಂದು ಇರಲಿ ಎಂದು 1995ರಲ್ಲಿ ‘ಇಂಟರ್ನೆಟ್ ಎಕ್ಸ್ ಪ್ಲೋರರ್’ ಎಂಬ ಹೊಸ ಬ್ರೌಸರನ್ನು ತಯಾರಿಸಿದರು. ನೆಟ್ ಸ್ಕೇಪ್ ಸಾರ್ವಜನಿಕರಿಗೆ ಉಚಿತ, ಕಂಪನಿಗಳಿಗೆ ಲೈಸೆನ್ಸ್ ಮೊತ್ತ ವಿಧಿಸಿತ್ತು. ಬಿಲ್ ಗೇಟ್ಸ್ ಎಕ್ಸ್ಪ್ಲೋರರನ್ನು ಎಲ್ಲರಿಗೂ ಉಚಿತ ಮಾಡಿಬಿಟ್ಟರು, ಮತ್ತು ತಮ್ಮ ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಡಿಫಾಲ್ಟ್ ಬ್ರೌಸರನ್ನಾಗಿಸಿದರು.
ಅಷ್ಟರಲ್ಲಿ, ನೆಟ್ ಸ್ಕೇಪ್ಗೆ ಹೋಲಿಸಿದರೆ ಈ ಎಕ್ಸ್ಪ್ಲೋರರ್ ಸಾಧಾರಣವಿತ್ತು. ಅರ್ಥಾತ್ ಬಿಲ್ ಗೇಟ್ಸ್ ನೆಟ್ ಸ್ಕೇಪ್ಗಿಂತ ಉತ್ತಮ ಬ್ರೌಸರನ್ನು ತಯಾರಿಸುವ ಆವಿಷ್ಕಾರಿಕ ಉದ್ದೇಶ ಹೊಂದಿರಲಿಲ್ಲ. ಅವರಿಗೆ ನೆಟ್ ಸ್ಕೇಪ್ನ ಮಾರುಕಟ್ಟೆ ಅಧಿಪತ್ಯವನ್ನು ತನದಾಗಿಸಿಕೊಳ್ಳಬೇಕಿತ್ತಷ್ಟೇ. ಊಹಾಫೋಹಗಳ ಪ್ರಕಾರ, ತಮ್ಮ ಆಪರೇಟಿಂಗ್ ಸಿಸ್ಟಂನಲ್ಲಿ ನೆಟ್ ಸ್ಕೇಪ್ ಸಲೀಸಾಗಿ ಇನ್ಸ್ಟಾಲ್ ಆಗದ ಹಾಗೆ ತಾವೇ ಒಂದು ಬಗ್ ಇಟ್ಟಿದ್ದರಂತೆ! ಜನ ಅದನ್ನು ಹಾಕಿಕೊಳ್ಳಲಾರದೆ, ತಮ್ಮ ಎಕ್ಸ್ಪ್ಲೋರರನ್ನೇ ಬಳಸಲಿ ಎಂದು.
ಈ ದಾಳಿ ಎದುರಾಳಿ ಯಾವ ಮಟ್ಟಕ್ಕೆ ಹೋಗಿತ್ತೆಂದರೆ 1997ರಲ್ಲಿ ಮೈಕ್ರೋಸಾಫ್ಟ್ನ ಉದ್ಯೋಗಿಗಳು ನೆಟ್ ಸ್ಕೇಪ್ ಕಂಪನಿಯ ಕಟ್ಟಡದ ಎದುರು ತಮ್ಮ ಬ್ರೌಸರಿನ ದೊಡ್ಡ ಕಟೌಟ್ ಹಾಕಿಸಿ ಸಂಭ್ರಮಿಸಿದರಂತೆ. ಮಾರನೇ ದಿನ ನೆಟ್ ಸ್ಕೇಪ್ ಉದ್ಯೋಗಿಗಳು ಅವರ ಕಟೌಟ್ ಕೆಡವಿ ‘ನೆಟ್ ಸ್ಕೇಪ್ 72, ಮೈಕ್ರೋಸಾಫ್ಟ್ 18’ ಎಂದು ಬರೆದು ಹೊಸ ಕಟೌಟ್ ಹಾಕಿಸಿದ್ದರಂತೆ. ಅಂದರೆ ತಮ್ಮ ಮಾರುಕಟ್ಟೆಯ ಪಾಲು ಇಷ್ಟಿದೆ ಅಂತ.
ಇಲ್ಲೇ ಒಂದು ದುರಂತ ಅಡಗಿದೆ. ನೆಟ್ ಸ್ಕೇಪ್ ಕೇವಲ ಒಂದು ಬ್ರೌಸರಿನಿಂದ ನಡೆಯುತ್ತಿದ್ದ ಪುಟ್ಟ ಕಂಪನಿ. ಅಂಥದರ ಮೇಲೆ ಅನಗತ್ಯದ ಮೈಕ್ರೋಸಾಫ್ಟ್ ಕಾಲೂರಿತು. ಸಣ್ಣ ಜೀವಿ ಬದುಕಲು ಸಾಧ್ಯವೇ ಹೇಳಿ? 2002ರೊತ್ತಿಗೆ ನೆಟ್ ಸ್ಕೇಪ್ ಹೆಸರಿಲ್ಲದಂತಾಗಿ ಮೈಕ್ರೋಸಾಫ್ಟ್ ಬ್ರೌಸರಿನ ಶೇ. 97ರಷ್ಟು ಮಾರುಕಟ್ಟೆಯನ್ನು ತನದಾಗಿಸಿಕೊಂಡಿತ್ತು. ಈ ಅರ್ಥದಲ್ಲಿ ಬಿಲ್ ಗೇಟ್ಸ್ ಚೀನಾ ಗುರುವಾರ ಪ್ರದರ್ಶಿಸುವುದು ಒಂದು ಸಾಧಾರಣ ಪ್ರಾಬಲ್ಯವನ್ನು ಜಗತ್ತಿನ ಮೇಲೆ ಹೇರಿ ವಿಜಯ ಸಾಧಿಸಿದ್ದರು.
ಸರಿ ಆಯ್ತು, ಆಮೇಲಾದ್ರೂ ಅವರು ಅದರ ಮೇಲೆ ಹೆಚ್ಚೆಚ್ಚು ಸಂಶೋಧನೆ ಆವಿಷ್ಕಾರ ಮಾಡಬೇಕಲ್ಲವೇ? ಉತ್ತಮ ಗೊಳಿಸಬೇಕಲ್ಲವೇ? ಮೈಕ್ರೋಸಾಫ್ಟ್ ಅದನ್ನೂ ಮಾಡಲಿಲ್ಲ. ಒಂದು ದಶಕದ ಕಾಲ ಬ್ರೌಸರಿನ ಲೋಕದಲ್ಲಿ ಯಾವುದೇ ಸ್ಪರ್ಧೆಯಿರದೆ ಜನ ಇಂಟರ್ನೆಟ್ ಎಕ್ಸ್ಪ್ಲೋರರ್ನೊಂದಿಗೆ, ಅದರ ನ್ಯೂನತೆಗಳೊಂದಿಗೆ ಹೆಣಗಾಡಬೇಕಾಯಿತು. ಅವು ತಂತ್ರಜ್ಞಾನ ಲೋಕದ ಏಕಸ್ವಾಮ್ಯತೆಯ ಕರಾಳ ದಿನಗಳು. ಎಲ್ಲೂ ಕಡೆಯೂ ಎಕ್ಸ್ಪ್ಲೋರರೇ ಡಿಫಾಲ್ಟ್ ಆಗಿದ್ದರಿಂದ ಅದರಿಂದ ಹೊರಬರಲು ಮುಖ್ಯ ತಂತ್ರಜ್ಞರಿಗೆ ಕಷ್ಟದ ಕೆಲಸವಾಗಿತ್ತು.
ಹೀಗಾಗಿಯೇ ಇವತ್ತಿಗೂ ಅಮೆರಿಕದಲ್ಲಿ ಮೊನೊಪಲಿ ಎಂದರೆ ಕೋರ್ಟ್ಗಳೇ ಅಡ್ಡಬಂದು ದಂಡ ವಿಧಿಸುತ್ತವೆ. ಕಳೆದ ವರ್ಷ ಅಮೆರಿಕದ ಕೋರ್ಟ್ ಗೂಗಲ್ಗೆ ಸರ್ಚ್ ಎಂಜಿನ್ ವಿಷಯದಲ್ಲಿ ಅದೆಷ್ಟೋ ಕೋಟಿ ಡಾಲರು ದಂಡ ವಿಧಿಸಿದೆ. ವಿಷಯ ಇಷ್ಟೇ. ಗೂಗಲ್ ಆ್ಯಪಲ್ ಕಂಪನಿಗೆ ಐಫೋನ್ನ ಸಫಾರಿ ಬ್ರೌಸರಿನಲ್ಲಿ ತನ್ನನ್ನೇ ಡಿಫಾಲ್ಟ್ ಸರ್ಚ್ ಎಂಜಿನ್ನಾಗಿಸಲು ದೊಡ್ಡ ಮೊತ್ತ ಕೊಟ್ಟಿತ್ತು. ಕೋರ್ಟು ಇದು ಅಪರಾಧ ಎಂದು ಬಗೆದು ದಂಡ ವಿಧಿಸಿತು. ಸುದ್ದಿ ಕೇಳಿದವರಿಗೆ ಆಶ್ಚರ್ಯವಾಗಬೇಕು, ‘ಅರೆ! ಅವನ ದುಡ್ಡು ಅವನ ಕಂಪನಿ, ಅವರಿಬ್ಬರ ನಡುವಿನ ಒಪ್ಪಂದ, ಇದರಲ್ಲಿ ಕೋರ್ಟಿಗೇನು ಕಷ್ಟ?’ ಎಂದು. ಈ ರೀತಿಯ ಮೊನೊಪಲಿಯ ಒಪ್ಪಂದಗಳು ಏನು ಮಾಡುತ್ತವೆಂದರೆ ಸ್ಪರ್ಧೆಯನ್ನು ಕೊನೆಗಾಣಿಸಿ ಜನರ ಮೇಲೆ ಕೆಟ್ಟ ಪ್ರಾಡೆಕ್ಟ್ ಅನ್ನು ಹೇರುತ್ತವೆ. ಜನರಿಂದ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತವೆ. ತಂತ್ರಜ್ಞಾನ ಲೋಕದಲ್ಲಿ ನೆಟ್ ಸ್ಕೇಪ್ ಮತ್ತು ಮೈಕ್ರೋಸಾಫ್ಟ್ ನಡುವಿನ ಯುದ್ಧ ಐತಿಹಾಸಿಕವಾದದ್ದು. ಭಾರತದ ಕೋರ್ಟ್ಗಳು ಯಾವುದಾದರೂ ಮಹತ್ವದ ತೀರ್ಪು ಕೊಡುವಾಗ ಹಳೆಯ ಬ್ಯಾಟ್ / ಕ್ಯೂಬಾಟ್ ಕೇಸುಗಳನ್ನು ಕೋರ್ಟ್ ಮಾಡಿದಂತೆ ತಂತ್ರಜ್ಞಾನ ಲೋಕ ಯಾವುದಾದರೂ ವಿಷಯದ ಮೇಲೆ ಜಿಜ್ಞಾಸೆ ನಡೆಸುವಾಗ ಈ ಹಳೆಯ ಯುದ್ಧವನ್ನು ನೆನಪಿಸಿಕೊಳ್ಳುತ್ತದೆ. the path of least resistance often triumphs over superior technology ಎಂಬ ಪಾಠವನ್ನು ಮೆಲುಕು ಹಾಕುತ್ತದೆ.
ಹಾಗಂತ ಜಗತ್ತು ಇಷ್ಟೇ, ಬಲಿಷ್ಠರ ಸೃಷ್ಟಿ ಎಂದು ಕೈಚೆಲ್ಲಬೇಕಾ? ಅರೇ, ಸ್ವಲ್ಪ ತಡೆಯಿರಿ. ಕಹಾನಿ ಮಿ ಟ್ವಿಸ್ಟ್ ಹೈ. ನೆಟ್ ಸ್ಕೇಪ್ ಯುದ್ಧಭೂಮಿಯಲ್ಲಿ ಹೋರಾಡಿ ಮಡಿಯಿತಲ್ಲ, ಸಾಯುವ ಮುನ್ನ ಅದೊಂದು ಚಾಣಾಕ್ಷ ನಡೆ ಇಟ್ಟಿತು. ಏನಂದರೆ ತನ್ನ ಬ್ರೌಸರಿನ ಸೋರ್ಸ್ ಕೋಡನ್ನು ಮುಕ್ತ ತಂತ್ರಜ್ಞಾನವನ್ನಾಗಿಸಿತು. ಅರ್ಥಾತ್ ಯಾರು ಬೇಕಾದರೂ ಅದರ ಕೋಡ್ ನೋಡಬಹುದು, ಬಳಸಿಕೊಳ್ಳಬಹುದು, ಉತ್ತಮ ಗೊಳಿಸಬಹುದು, ಉಚಿತವಾಗಿ!
ತತ್ಪರಿಣಾಮವೇ ‘ಮೊಜಿಲ್ಲಾ ಫೈರ್ಫಾಕ್ಸ್’ ಎಂಬ ಬ್ರೌಸರಿನ ಹುಟ್ಟು. ಇಂಟರ್ನೆಟ್ ಎಕ್ಸ್ಪ್ಲೋರರ್ಗೆ ಸದ್ದು, ಕ್ರಮೇಣ ಎಕ್ಸ್ಪ್ಲೋರರ್ನ ದಯನೀಯ ಮರಣ. ಎಷ್ಟೆಂದರೆ, ಒಂದು ಕಾಲದಲ್ಲಿ ಎಕ್ಸ್ಪ್ಲೋರರ್ ಇರೋದು ಎನಕ್ಕೆ ಎಂದರೆ ಕ್ರೋಮನ್ನು ಇನ್ಸ್ಟಾಲ್ ಮಾಡಿಕೊಳ್ಳಕ್ಕೆ ಎಂದು ಆಡಿಕೊಳ್ಳುವಷ್ಟು! ಆ ಕತೆಯನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
