ನಿಂತಲ್ಲೇ ನಿಂತ ಎವರ್ ಗ್ರೀನ್ ಸ್ಟಾರ್ಸ್

article n8

ಕೈ ತೊಳೆದುಕೊಳ್ಳಲು ಹೋಟೆಲ್‌ನ ರೆಸ್ಟ್ ರೂಮ್‌ಗೆ ಹೋಗಿರುತ್ತೀರಿ. ಸುಂದರವಾದ ನಲ್ಲಿ, ಎಲ್ಲಿ ಆನ್ ಮಾಡಬೇಕು ಅಂತ ಗೊತ್ತಾಗಲ್ಲ; ಸೆನ್ಸರ್ ಇರಬಹುದು ಎಂದು ನಲ್ಲಿ ಕೆಳಗೆ ಕೈ ಇಡ್ತೀರಿ, ಕಾಯ್ತೀರಿ, ನೀರು ಬರಲ್ಲ; ಸೆನ್ಸರ್ ಬೇರೆಡೆ ಇರಬಹುದು ಎಂದು ಎಲ್ಲೆಲ್ಲೋ ಕೈಯಾಡಿಸುತ್ತೀರಿ. ಉಹೂಂ.. ಕೆಟ್ಟ ಮಾತು ಬರುವಷ್ಟು ಕೋಪ ಬರುತ್ತದೆ. ಈ ನಲ್ಲಿಯಲ್ಲಿ ನೀರು ಬರುತ್ತಿಲ್ಲವೋ, ನಿಮಗೆ ಸರಿಯಾಗಿ ಸೆನ್ಸರ್ ಗುರುತಿಸಲು ಆಗುತ್ತಿಲ್ಲವೋ ಅಥವಾ ಸೆನ್ಸರೇ ಕೆಟ್ಟು ಹೋಗಿದೆಯೋ ಯಾವನಿಗೊತ್ತು? ಕೆಲಸಗಾರ ಬಂದು ಹೇಳ್ತಾನೆ: “ಸರ್ ಆ ನಲ್ಲಿಯನ್ನು ಇನ್ನೂ ಸೆಟ್ ಮಾಡಿಲ್ಲ ಪಕ್ಕದ ನಲ್ಲಿ ಬಳಸಿ”. ಒಂದು ಸರಳವಾದ ತಿರುಪು ಆನ್-ಆಫ್ ಮಾಡುವ ನಲ್ಲಿಯಿದ್ದಿದ್ದರೆ ಜೀವನ ಎಷ್ಟು ಸುಗಮವಾಗಿರುತ್ತಿತ್ತು ಅಲ್ಲವೇ?

ಹಾಗೆ ಬಲಕ್ಕೆ ತಿರುಗೀರಿ, ಕೈ ಒರೆಸಿಕೊಳ್ಳಬೇಕೆಂದು. ಒಂದರಲ್ಲಿ ಅಂತೂ ಎರಡು ಮಷೀನು ಇಟ್ಟಿರ್ತಾರೆ. ಒಂದರ ಅಡಿ ಕೈ ಇಟ್ಟರೆ ಟಿಶ್ಯೂ ಪೇಪರ್ ಬರಬೇಕು. ಇನ್ನೊಂದರ ಅಡಿ ಇಟ್ಟರೆ ಗಾಳಿ ಬರಬೇಕು. ಟಿಶ್ಯೂ ಪೇಪರ್ ಬರಲ್ಲ, ಗಾಳಿ ಸಾಕಾಗಲ್ಲ; ಕೊನೆಗೆ ಕುಲಂಗಿ ಕೈ ಒರೆಸಿಕೊಂಡು ಹೊರಗೆ ಬರ್ತೀರಿ. ಈ “ಸ್ಮಾರ್ಟ್” ಎನ್ನುವುದು ನಮ್ಮನ್ನು ಎಷ್ಟು ಹೈರಾಣಾಗಿಸಿದೆಯಲ್ಲಾ?

ಇಂಥ ಹೊತ್ತಿನಲ್ಲಿ ಮನುಷ್ಯ ಕಂಡುಹಿಡಿದಿರುವ ಕೆಲವು ತಂತ್ರಜ್ಞಾನಗಳನ್ನು ನೆನಪಿಸಿಕೊಳ್ಳಬೇಕು, ಅವುಗಳ ಪಾದಕ್ಕೆರಗಬೇಕು. ಟಿನ್‌ ತಗೊಳ್ಳಿ, ಕೊಡಲಿ ಕತ್ತರಿ, ಹೂ ಮುಡಿಯುವ, ಚಡ್ಡಿಯ ಗುಂಡಿ ಕಿತ್ತು ಹೋದಾಗ ಮಾನ ಉಳಿಸಲು; ಅಂಗಾಲಿಗೆ ಮುಳ್ಳು ಚುಚ್ಚಿದಾಗ ಸರ್ಜರಿಸಾಧನವಾಗಿಯೂ ಸಹಾಯ ಮಾಡಿದೆ. ಇಂಥ ಟಿನ್ ಇವತ್ತಿನ ಆಕಾರದಲ್ಲಿದ್ದಂತೆಯೇ ಈಜಿಪ್ಟಿನ ತಿರುಪುಗಳಲ್ಲಿ ಸಿಕ್ಕಿವೆ. ಅಂದರೆ, 5000 ವರ್ಷಗಳಿಗೂ ಮೊದಲು. ಅಷ್ಟೊತ್ತಿಗೆ ನುರಿಭಾಷೆ ಬರಹ ಭಾಷೆಯೊಂದಿಗೆ ವೈಜ್ಞಾನಿಕ ಭಾಷೆಯನ್ನೂ ಕಟ್ಟಿಕೊಂಡಿದ್ದರು ಎಂಬ ಕುರುಹು ಇಲ್ಲಿವೆ. ಹಗಲು ರಾತ್ರಿ ನಮ್ಮೆಲ್ಲ ದೋಷಕ್ಕೂ ನಮ್ಮೆ ಹಳೆಯದು ಎಂದು ಕಟುವರಿಸುವವರು ಇದನ್ನು ಗಮನಿಸಬಹುದು. ಬೀಗ-ಬೀಗದ ಕೈ ತಗೊಳ್ಳಿ. ಕೇವಲ ಪಾಸ್‌ವರ್ಡ್‌ಗಳ ಸ್ಮಾರ್ಟ್-ಲಾಕಿಂಗ್ ಸಿಸ್ಟಂಗಳ ನಡುವೆ ಮನೆಯಿಂದ ಹೊರಬರುವಾಗ ಚಿಲಕ ಹಾಕಿ ಬೀಗ ಜಡಿದು ಬಿದ್ದಿದೆಯೋ ಇಲ್ಲವೋ ಎಂದು ಜಗ್ಗಿ ಎಳೆದು ಖಾತ್ರಿ ಪಡಿಸಿಕೊಂಡರೆಂದೇ ನೆಮ್ಮದಿ. ಬ್ಯಾಂಕುಗಳು ಹೊರಗೆ ಎಷ್ಟೇ ಕಂಪ್ಯೂಟರ್ ಬಳಸಿದರೂ ಒಳಗೆ ಅವಲಂಬಿಸಿರುವುದು ಇದೇ ಬೀಗಗಳನ್ನು.

ಪೆನ್ನಿಗೆ ಬರೋಣ. ರಾಜ ಕಾಲದಲ್ಲಿ ನವಿಲುಗರಿಯ ತುದಿಯನ್ನು ಇಂಕಿನಲ್ಲಿ ಅದ್ದಿ ಬರೆಯುತ್ತಿದ್ದರು. ನಂತರ ಬ್ರಿಟಿಷರು ನಮ್ಮಲ್ಲಿದ್ದ ಕಾದಲ್ಲಿಯೇ ತುದಿಯಲ್ಲಿ ಗುಂಡು ಉರುಳುವ ಪನ್ನು ಬಂತು. ಅದೇ ಇವತ್ತಿಗೂ ಓಡುತ್ತಿದೆ. ಸ್ವಿಚ್‌ಗಳನ್ನು ತಗೊಳ್ಳಿ. ಟಿಕ್-ಟಾಕ್… ಆನ್-ಆಫ್. 1800ರಲ್ಲಿಯೇ ಬಂದಿತ್ತು. ಇವತ್ತಿಗೂ ಹಾಗೇ ಇದೆ. ಇನ್‌ಫ್ಯಾಕ್ಟ್ ಪ್ಲೇನಿನ್ ಒಳಗೆ ನೋಡಿದ್ದೀರಿ, ಪೈಲಟ್‌ಗಳ ಗರ್ಭಗುಡಿಯಲ್ಲಿ ಇಂಥ ನೂರಾರು ಸ್ವಿಚ್‌ಗಳಿರುತ್ತವೆ. ಸೆನ್ಸರ್‌ ಬಟನ್‌ಗಳು ಇರಲ್ಲ! ಯಾಕಂದ್ರೆ ಪೈಲಟ್‌ಗೆ ಅನಾಯಾಸ ಅಪಘಾತ ಅಂತ ಘಟನೆ ಗೊತ್ತಾಗಲೇಬೇಕಾಗುತ್ತದೆ! ಬಟನ್ ಒತ್ತಿ ‘ಹೈ ಹಲೋ ಆನ್ ಆಯ್ತಾ?’ ಅಂತ ಕೈಬಿಸಿ ಕೇಳುವಷ್ಟು ಸಮಯವಿರಲ್ಲ.

ಸೈಕಲ್ ತಗೊಳ್ಳಿ ಮಾರಾಯ್ರೆ. 1890ರಲ್ಲಿ ಓಡುತ್ತಿದ್ದ ಸೈಕಲ್ ಈಗಲೂ ಅದೇ ರೂಪದಲ್ಲಿದೆ. ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆಗೂ ಟಿಪೂ ಬೇಕಿಲ್ಲ ಪೇಪರ್ ಕ್ಲಿಪ್ ತಗೊಳ್ಳಿ. 1899ರಲ್ಲಿ ಪೇಟೆಂಟ್ ಆಗಿದ್ದು ನಿಮ್ಮ ಪ್ಯಾಂಟ್ ಜಿಪ್ ನೋಡಿ ಕೊಳ್ಳಿ. 1917ರಲ್ಲಿ ಅದೇ ಜಿಪ್ ಸೆಪ್ಟೆಂಬರ್ ನೋಡಿ 1800ರ ಕಾಲದ್ದು.

ಈ ಎಲ್ಲ ಮುತ್ತಜ್ಜರ ವಂಶಸ್ಥರುಗಳಿಗೆ ಏನೆಂದು ಗೊತ್ತೇ? ಯಾಕೆ ಇವು ಇವತ್ತಿಗೂ ಅದೇ ರೂಪದಲ್ಲಿ ಜನೋಪಯೋಗಿಯಾಗಿವೆ? ಯಾಕೆ ಇವುಗಳಲ್ಲಿ ಬದಲಾವಣೆ (ಅಪ್‌ಗ್ರೇಡ್) ಎಂಬುವುದೇ ಬೇಕಾಗಿಲ್ಲ? ಯಾಕೆಂದರೆ, ಇವು ತುಂಬ ತುಂಬ ಸರಳ ಇವೆ. ಅವು ಇರುವ ಉದ್ದೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ. ನಮಗೆ ಅರಿವೇ ಆಗದಂತೆ ನಮ್ಮ ಜೀವನದ ಅತಿಭಾಷ್ಯ ಅಂಗಗಳಾಗಿವೆ. ಇವನ್ನು ಬಳಸಲು ಬೇಕಾದ ಕಲಿಕೆಯ ಶ್ರಮ-ಸಮಯ ತೀರಾ ಕಡಿಮೆ. ಸ್ವಿಚ್ಚಿನ ಆನ್-ಆಫ್ ಬಗ್ಗೆಯೂ ಗೊತ್ತಾಗುತ್ತದೆ. ಇಲ್ಲಿ ಯಾವುದೇ ಸಾಫ್ಟ್‌ವೇರ್ ಇಲ್ರಿ; ಹಾಗಾಗಿ, ಸಾಫ್ಟ್‌ವೇರ್ ಅಪ್‌ಡೇಟ್ ಬೇಕಿಲ್ಲ, ಕ್ರಾಶ್ ಆಗಲ್ಲ, ಯಾರೋ ಹ್ಯಾಕ್ ಮಾಡಿಬಿಡುತ್ತಾರೆ ಎಂಬ ಭಯವಿಲ್ಲ, ಪಾಸ್‌ವರ್ಡ್ ಮರೆತೋಗಬಹುದು ಎಂಬ ಉದ್ವೇಗವಿಲ್ಲ. ಇಲ್ಲಿ ಸೆನ್ಸರ್‌ಗಳಿಲ್ಲ ಹಾಗಾಗಿ, ಕರೆಂಟು ಬೇಕಿಲ್ಲ, ಆಗಾಗ್ಗೆ ಚಾರ್ಜ್ ಮಾಡುವ ಒತ್ತಡವಿಲ್ಲ. ರಿಮೋಟ್ ಕಂಟ್ರೋಲೆಂಬ ಇನ್ನೊಂದು ಉಪ-ಸಾಧನವಿಲ್ಲ. ನಲ್ಲಿಯಾಗಲಿ, ಪಿನ್ನಾಗಲಿ ಟಿನ್ ಆಗಲಿ.. ಸೈಕಲ್ ಕೂಡ.. ಪೂರ್ತಿ ನಿಯಂತ್ರಣ ನಮ್ಮ ಕೈಯಿರುತ್ತದೆ. ಅಲ್ಗೊರಿದಮ್‌ಗಳ ಆಟಾಟೋಪ ಇಲ್ಲಿಲ್ಲ. ಇವುಗಳಿಗೆ ರಿಂಗ್‌ಟೋನಿಲ್ಲ, ಗುಯ್ ಅನ್ನಲ್ಲ; ಬಹಳ ಸೈಲೆಂಟಾಗಿ ತಮ್ಮ ಕೆಲಸ ನಿರ್ವಹಿಸುತ್ತವೆ. ಇವು ಪಾಪ ನಮ್ಮ ನಡತೆ- ನುಡಿ- ಜಾಗಗಳನ್ನು ಟ್ರ್ಯಾಕ್ ಕೂಡ ಮಾಡಲ್ಲ. ಒಮ್ಮೆ ಸಂತೆಯಲ್ಲಿ ಖರೀದಿಸಿದರೆ ಸಾಕು, ನನ್ನನ್ನು ಬಳಸಲು ತಿಂಗಳಿಗೊಂದು ಸಲ ರೀಚಾರ್ಜ್ ಮಾಡಿಸಿ ಅಂತ ಬೆನ್ನು ಬೀಳಲ್ಲ. ಪೆನ್ನಲ್ಲಿ ಬ್ಯಾಕ್ ಸ್ಪೇಸ್ ಬಟನ್ ಇಲ್ಲ. ಅಂದರೆ, ಭಾವನೆಗಳಲ್ಲಿ ಬುದ್ದಿ ಬೆರೆಕೆಯಾಗುವ ಸಂಭವವಿಲ್ಲ. ತಿದ್ದಿದರೂ ಟಣೋ ತಿದ್ದಿದಾನೆ ಎಂಬ ಭಾವನೆ ಗೊತ್ತಾಗುತ್ತದೆ. ಪ್ರತಿಯೊಂದರಲ್ಲೂ instant feedback ಇದೆ. ಕತ್ತಲೆಯಲ್ಲೂ ತಡಕಿ ಹುಡುಕಿ ಬಳಸಬಹುದು. ಫ್ಲೈಟ್ ಮುಚ್ಚೋಟಿ ಹೊಂಡದ ತಲೆ ಮೇಲಿನ ಬಟನ್ ಆನ್ ಆಫ್ ಮಾಡಬಹುದು.

ಆಧುನಿಕ ತಂತ್ರಜ್ಞಾನದಲ್ಲಿಯೂ ಈ ಲಕ್ಷಣಗಳುಳ್ಳ ಉದಾಹರಣೆಗಳು ಸಿಗುತ್ತವೆ. ಇತ್ತೀಚಿನ ಈಮೇಲಿಗೆ ಬರೋಣ. 1970ರಲ್ಲಿ ಶುರುವಾಗಿದ್ದು. ಆಮೇಲೆ ಆರ್ಕುಟ್, ಫೇಸ್‌ಬುಕ್, ಇನ್‌ಸ್ಟಾ, ಎಕ್ಸ್, ವಾಟ್ಸಾಪ್, ಮೆಸೆಂಜರ್, ಟೆಲಿಗ್ರಾಮ್, ಸ್ಲಾಕ್- ಎಲ್ಲವೂ ಬಂದವು..? ಪತ್ರಿಕೆಗಳು ನೂರಾರು ಬಾರಿ ಇ-ಮೇಲ್‌ನ ಮರಣದ ನುಡಿ ನವನ ಬರೆದವು. ಆದರೆ, ಇ-ಮೇಲ್ ಸಾಯಲೇ ಇಲ್ಲ. ಯಾಕಂದರೆ, ಇದಕ್ಕೆ ಒಂದು ಅಧಿಕೃತತೆ ಇದೆ. ಆಡಿಟ್ ಪೂರಕವಾಗಿದೆ. ಹಳೆಯದಿದೆ. Asynchronous ಇದೆ. ಘಟನೆ ಓಡಿ ಘಟನೆ ರಿಪ್ಲೈ ಮಾಡುವ ಒತ್ತಡವಿಲ್ಲ. ಯಾವತ್ತೂ ಇದರಲ್ಲಿ ಡಬಲ್ ಬ್ಲೂಟಿಕ್ ಬರಿಸುತ್ತಾರೋ ಅವತ್ತು ಇಮೇಲ್ ಸತ್ತಂತೆ. ಹೆಚ್ಚೂಕಡಿಮೆ ಎಂಎಸ್ ವರ್ಡ್ ಸಹ ಈ ಗೌರವಕ್ಕೆ ಅರ್ಹವಾಗಿದೆ. 1983ರಲ್ಲಿ ಬಂದದ್ದು ಅದರ ನಂತರ ಸಾವಿರಾರು ಎಡಿಟಿಂಗ್ ಟೂಲ್‌ಗಳು ಬಂದು ಹೋದರೂ ವರ್ಡ್ ಎಲ್ಲ ಫೇವರಿಟ್ಟಾಗಿ ಉಳಿದುಕೊಂಡಿದೆ.

Leave a Comment

Your email address will not be published. Required fields are marked *