ಇತ್ತೀಚೆಗೆ ಅಮೆರಿಕದ ಬಯೋಟೆಕ್ನಾಲಜಿ ಕಂಪನಿ ‘ಕೊಲೋಸಲ್ ಬಯೋಸೈನ್ಸ್’ ಸುಮಾರು 12 ಸಾವಿರ ವರ್ಷಗಳ ಹಿಂದೆ ಅಳಿದುಹೋಗಿದ್ದ ದೈತ್ಯ ತೋಳ ಅಂದರೆ ದೈತ್ಯ ತೋಳಗಳನ್ನು ಮರುಸೃಷ್ಟಿಸುವ (De-extinction) ಮೂಲಕ ಜಗತ್ತಿನಾದ್ಯಂತ ಸುದ್ದಿ ಮಾಡಿದೆ. ನೀವು Games of Thrones ಸಿರೀಸ್ ನೋಡಿದ್ದರೆ ಅಲ್ಲಿ ಮನುಷ್ಯರಿಗಿಂತ ಎತ್ತರಕ್ಕಿರುವ ದೈತ್ಯ ತೋಳಗಳನ್ನು ಕಾಣಬಹುದು. ನಿಜರೂಪದಲ್ಲಿ ತೀರಾ ಅಷ್ಟು ಇಲ್ಲದಿದ್ದರೂ ಇಂದಿನ ತೋಳಗಳಿಗಿಂತ ಅವು ಬಹಳ ದೊಡ್ಡ ಆಕಾರದಲ್ಲಿದ್ದವು. 12 ಇಂಚುಗಳಷ್ಟು ಉದ್ದದ ತಲೆಬುರುಡೆ, 60 ಕೆಜಿ ತೂಕ, ಶೀತಪ್ರದೇಶಕ್ಕೆ ಸೂಕ್ತವಾದ ಚರ್ಮ ಹೊಂದಿದ್ದವು. ಇವುಗಳ ಪಳೆಯುಳಿಕೆಗಳು ಕ್ಯಾಲಿಫೋರ್ನಿಯಾದ ಗೋಮಟದಲ್ಲಿ ಸಾಕಷ್ಟು ದೊರೆತಿವೆ. ಒಂದೇ ಪ್ರದೇಶದಲ್ಲಿ ಅನೇಹ ತೋಳಗಳ ಮೂಳೆಗಳು ಸಿಕ್ಕಿರುವುದರಿಂದ ಇವು ಸದಾ ಗುಂಪಿನಲ್ಲಿರುತ್ತಿದ್ದವು ಎಂದು ಹೇಳಬಹುದು. ಕುದುರೆ, ಕಾಡೆಮ್ಮೆಗಳಂಥ ದೃಷ್ಠಪ್ರಾಣಿಗಳೇ ಇವುಗಳ ಆಹಾರ. ಇವುಗಳ ಉಳಿಕ್ಕಾಗಿ ಮರಳುಗಾಡು, ಪೆರು, ಬೊಲಿವಿಯಾ, ಚೀನಾದಲ್ಲಿಯೂ ದೊರೆತಿವೆ. ತೀವ್ರಗತಿಯ ಹವಾಮಾನ ಬದಲಾವಣೆಯಿಂದಲೋ ಅಥವಾ ಆಹಾರದ ಸರಪಳಿಯಲ್ಲಿ ಉಂಟಾದ ವಿರುದ್ಧನೆಯಿಂದಲೋ ಈ ದೈತ್ಯ ತೋಳಗಳು ಕಣ್ಮರೆಯಾಗಿರಬಹುದು ಎಂದು ವಿಜ್ಞಾನಿಗಳು ಊಹಿಸುತ್ತಾರೆ.
ಸರಿ De-extinction ಅಂದರೆ ಏನು? ಹೇಗೆ ಮಾಡುತ್ತಾರೆ? ಅಳಿದಿರುವ ಪ್ರಾಣಿಗಳನ್ನು ಪುನಃ ಸೃಷ್ಟಿಸುವುದೇ De extinction. ಇದಕ್ಕಾಗಿ ಮೂರು ವಿಧಾನಗಳನ್ನು ಬಳಸುತ್ತಾರೆ. ಒಂದು Back-breeding. ಅಳಿದ ಪ್ರಾಣಿಗಳ ಜೀನ್ಗಳನ್ನು ಹೋಲುವ ಈಗಿನ ಪ್ರಾಣಿಗಳ ನಡುವೆ ಕೂಡಿಕೆ ಮಾಡುತ್ತಾ ಹೋಗುವುದು. ಕೆಲವು ತಳಿಯ ಹಸುಗಳ ನಡುವೆ ಕೂಡಿಕೆ ಮಾಡಿ Aurochs ಎಂಬ ಅಳಿದ ಕಾಡುಹಸುವನ್ನು ಸೃಷ್ಟಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಈ ವಿಧಾನದಿಂದ ಬಾಹ್ಯ ದೇಹಲಕ್ಷಣಗಳನ್ನು ಮತ್ತು ಈಗಿರುವ ಜೀನ್ಗಳನ್ನಷ್ಟೇ ಮರುಸೃಷ್ಟಿಸಬಹುದು. ಅಳಿದ ಪ್ರಾಣಿಗಳನ್ನಲ್ಲ. ಇನ್ನೊಂದು ಕ್ಲೋನಿಂಗ್. ಒಂದು ಪ್ರಾಣಿ ತನ್ನ ಕುಲದಲ್ಲಿ ಅದೇ ಕೊನೆಯದಾಗಿದ್ದಲ್ಲಿ ವಿಜ್ಞಾನಿಗಳು ಅದರ ಜೀವಕೋಶಗಳನ್ನು ಸಂರಕ್ಷಿಸುತ್ತಾರೆ. ಆ ಜೀವಕೋಶದ ಡಿಎನ್ಎಯನ್ನು ಅದೇ ಪ್ರಾಣಿಯೊಟ್ಟಿಗೆ ಜೆನೆಟಿಕ್ಗಾಗಿ ಹೋಲುವ ಇನ್ನೊಂದು ಪ್ರಾಣಿಯ ಅಂಡಾಣುವಿನೊಳಗೆ ಸೇರಿಸುತ್ತಾರೆ. ಆ ಅಂಡಾಣುವಿನಿಂದ ಮರಿ ಮಾಡಿಸುತ್ತಾರೆ. 2003ರಲ್ಲಿ ನಡೆದ ಇಂಥ ಒಂದು ಪ್ರಯತ್ನದಲ್ಲಿ Pyrenean ibex ಎಂಬ ಆಗಷ್ಟೇ ಅಳಿದಿದ್ದ ತಗರನ್ನು ಮರುಸೃಷ್ಟಿಸಿದರು. ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಅದೂ ಸತ್ತುಹೋಗಿ ‘ಜಗತ್ತಿನಲ್ಲಿ ಎರಡು ಸಲ ಅಳಿದ ಪ್ರಾಣಿ’ ಎಂಬ ಕುಖ್ಯಾತಿ ಪಡೆದಿದೆ.
ಮೂರನೆಯದ್ದು ನಿಜವಾದ Genetic Engineering (CRISPR/Cas9). ಇದರ ಮೂಲಕವೇ ದೈತ್ಯ ತೋಳವನ್ನು ಮರುಸೃಷ್ಟಿಸುತ್ತಿರುವುದು. ಏನು ಮಾಡಿದ್ದಾರೆಂದರೆ- ತಮಗೆ ದೊರೆತ ಪಳೆಯುಳಿಕೆಗಳಿಂದ ದೈತ್ಯತೋಳದ ಜೀನ್ಗಳನ್ನು ಹಾಕಿದರು. ಈಗಿರುವ ತೋಳಗಳ ಜೀನ್ಗಳೊಂದಿಗೆ ಹೋಲಿಸಿದರು. ಸುಮಾರು 99.5% ಹೋಲಿಕೆ ಸಿಕ್ಕಿದ ಇಂದು ತೋಳಗಳನ್ನು ಆಯ್ಕೆ ಮಾಡಿಕೊಂಡರು. ಹೋಲಿಕೆಯಿಲ್ಲದ 0.5% ಜೀನ್ಗಳನ್ನು ಅವುಗಳ ವಿಶೇಷತೆಯನ್ನು ಗುರುತಿಸಿದರು. ಅಂದರೆ, ಯಾವೆಲ್ಲಾ ಜೈವಿಕ ಅಂಶಗಳು ಆ ತೋಳಗಳನ್ನು ದೈತ್ಯವಾಗಿಸಿದ್ದವೋ ಅಂಥ ವಿಶೇಷತೆಗಳ ಜೀನ್ಗಳು. ನಂತರ ಕಂಡುತಂದ ಆಯಾ ಜೀನ್ಗಳನ್ನು ದೈತ್ಯ ತೋಳದ ಜೀನ್ಗಳಂತ ಮಾರ್ಪಡಿಸಿದರು. ಕಂದುತೋಳದಿಂದ ಮರಿ ಹಾಕಿಸಿದರು. ಮರಿಗಳನ್ನೇ ದೈತ್ಯ ತೋಳವೆಂದು ಕರೆದರು.
ಇಲ್ಲಿಯೂ ಕೆಲವು ವೈಜ್ಞಾನಿಕ ಸವಾಲುಗಳಿವೆ. aDNA (ancient DNA) ಇಮ್ಯೂಟಿಬಲ್ ಅಲ್ಲ, ಅಂದರೆ ಪ್ರಾಣಿ ಸತ್ತ ನಂತರ ಅದರ ದೇಹದಲ್ಲಿನ ಡಿಎನ್ಎ ಹಲವಾರು ಪ್ರಾಕೃತಿಕ ಕಾರಣಗಳಿಂದ ಅಳಿಸುತ್ತಾ/ ಬದಲಾಗುತ್ತಾ ಹೋಗುತ್ತದೆ. ಎಷ್ಟೋ ಸಲ ಹೀಗೆ ಪಳೆಯುಳಿಕೆಗಳಿಂದ ದೊರೆತ ಡಿಎನ್ಎ ಮೂಲ ಪ್ರಾಣಿಯದ್ದಾಗಿರದೇ ಅದನ್ನು ಆಹಾರವಾಗಿಸಿಕೊಂಡ ಮೈಕ್ರೋಬುಗಳ ಅಥವಾ ಆನಂತರ ತೇವಾಂಶಗೊಂಡ ಬೇರವುದೋ ಪ್ರಾಣಿಯದ್ದಾಗಿರಬಹುದು. ಕೆಮಿಕಲಿ ಡ್ಯಾಮೇಜ್ ಆಗಿರಬಹುದು. ಭಾರತದಂಥ ಬಿಸಿಲ ಪ್ರದೇಶದಲ್ಲಿ ದೊರೆಯುವ ಪಳೆಯುಳಿಕೆಗಳಿಂದ ಡಿಎನ್ಎ ಸೃಷ್ಟಿಸುವುದು ಅಸಾಧ್ಯವೇ ಸರಿ ಎನ್ನುತ್ತಾರೆ ವಿಜ್ಞಾನಿಗಳು.
ಎರಡನೆಯ ಸವಾಲು ಡಿಎನ್ಎ ಸಿಕ್ಕಿದ್ದರೂ ಅದನ್ನು ಸರಿಯಾದ ಕ್ರಮದಲ್ಲಿ ಸರಿಯಾದ ಆಕಾರದಲ್ಲಿ ಜೋಡಿಸುವುದು ಬಹಳ ಕಷ್ಟ. ಅದರಿಂದ ಯಾವ ಡಿಎನ್ಎ ಯಾವ ಉದ್ದೇಶದ್ದು ಎಂದು ಅರಿತುಕೊಳ್ಳುವುದು ಕಷ್ಟ. ಎಷ್ಟೋ ಸಲ ಕೆಲವು ಡಿಎನ್ಎ ಈಗಲೂ ಆ ಹವಾಮಾನಕ್ಕೆ ಆ ಹವಾಮಾನಕ್ಕೆ ಸ್ಪಂದಿಸಲಾರದೇ ಕೋಡ್ ಆಗಿರುತ್ತವೆ. ಅಂಧ ಡಿಎನ್ಎಯನ್ನು ಈಗಿನ ಪ್ರಾಣಿಗಳಲ್ಲಿ ಸೇರಿಸಿದರೆ ಆ ಕೋಡ್ ಕೆಲಸ ಮಾಡದಿರಬಹುದು.
ಮೂರನೆಯ ಸವಾಲು ಡಿಎನ್ಎ ಎಡಿಟ್ ಮಾಡುವ ತಾಂತ್ರಿಕತೆಗೆ ಸಂಬಂಧಿಸಿದ್ದು. CRISPR/Cas9 ತುಂಬಾ ಸೂಕ್ಷ್ಮವಾದ ಪ್ರಕ್ರಿಯೆ. 0.5% ವ್ಯತ್ಯಾಸದಲ್ಲಿಯೇ ಲಕ್ಷಾಂತರ ಗುಣ ವೈಯಕ್ತಿಕತೆಗಳಿರುತ್ತವೆ. ಕೊಲೋಸಲ್ ವಿಜ್ಞಾನಿಗಳು ಎಡಿಟ್ ಮಾಡಲು ಆಯ್ದುಕೊಂಡಿದ್ದ ಇನ್ನೂ 5 ಜೀನ್ಗಳನ್ನು ಹುಟ್ಟುವ ತೋಳ ಅನಾರೋಗ್ಯಕ್ಕೆ ಈಡಾಗಬಹುದು ಎಂಬ ಭಯದಿಂದ ಕೈಬಿಟ್ಟಿದ್ದರಂತೆ.
ಕೊಲೋಸಲ್ನ ಈ ಪ್ರಯತ್ನದ ಮೂಲಕ ಮೂರು ಮರಿಗಳನ್ನು ಹುಟ್ಟುಹಾಕಿದೆ. ರೋಮುಲಸ್, ರೆಮಸ್ ಮತ್ತು ಐಲಸ್ ಎಂಬುವು ಅವುಗಳ ಹೆಸರು. ಕಂಪನಿ ಈ ಮೂಲಕ ಅನೇಕ ಅಳಿದ ಪ್ರಾಣಿಗಳನ್ನು ಮರುಸೃಷ್ಟಿಸಿ ಪರಿಸರ ಸಂರಕ್ಷಿಸುವ ಇರಾದೆ ಇಟ್ಟುಕೊಂಡಿದೆ. ಆದರೆ, ವಿಜ್ಞಾನಿಗಳ ನಡುವೆಯೇ ಈ ಬೆಳವಣಿಗೆ ತಾತ್ವಿಕ, ನೈತಿಕ ಮತ್ತು ವೈಜ್ಞಾನಿಕ ಚರ್ಚೆ ಹುಟ್ಟುಹಾಕಿದೆ. ಅದು ಹೇಗೆ ದೈತ್ಯತೋಳವಾಗುತ್ತದೆ? ಕಂದುತೋಳದ ಕೆಲವು ಜೀನ್ಗಳನ್ನು ದೈತ್ಯತೋಳದಂತೆ ಬದಲಾಯಿಸಿದ್ದೀರಿ, ಹುಟ್ಟಿರುವ ಮರಿಗಳು 99.9% ಕಂದುತೋಳಗಳೇ ಆಗಿವೆ ಎಂಬುದು ಒಂದು ವಾದ. ಹೀಗೆ ಮಾಡುವುದು ಸರಿಯೇ ಅಂತ ಇನ್ನೊಂದು ವಾದ. ಮನುಷ್ಯ ಪ್ರಕೃತಿಯಲ್ಲಿ ಕ್ರಿಯೋಜಿಸುವ ಮುನ್ನವೇ ದೈತ್ಯತೋಳಗಳು ಅಳಿದಿವೆ. ಪ್ರಕೃತಿಯೇ ಅವನ್ನು ತಿರಸ್ಕರಿಸಿದೆ. ಹಾಗಿರುವಾಗ ಮತ್ತೆ ಅದನ್ನು ಪ್ರಕೃತಿಯ ಮಡಿಲಿಗೆ ಹಾಕಲು ನಾವು ಯಾರು? ಅದರ ಆಹಾರ ಒದಗಿಸುವವರು ಯಾರು? ಮೊದಲಿಗೆ ಇದರ ಉದ್ದೇಶವೇನು? ಕೊಲೋಸಲ್ ಕಂಪನಿ ಬಹುಶಃ ಈ ತಂತ್ರಜ್ಞಾನವನ್ನು ಮ್ಯೂಸಿಯಂಗಳಲ್ಲಿ ಬಿಟ್ಟುಬಿಡಬಹುದು. ಹೀಗೆ ವ್ಯಾಪಕವಾಗಿ ಸುದ್ದಿಯಾಗಿ ಚರ್ಚೆಯಾಗಲಿ ಎಂದೇ ಜನಪ್ರಿಯ ಟಿವಿ ಸಿರಿಯಲ್ನಲ್ಲಿ ಬಂದಿರುವ ಪ್ರಾಣಿಯನ್ನೇ ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡಿರಬಹುದು. ಈ ಜನಪ್ರಿಯತೆಯ ಮೂಲಕ ಅದು ತನ್ನ ಯಾವುದೇ ರಹಸ್ಯ ಉದ್ದೇಶದ ಮಾರಾಟಕ್ಕೆ ಬಾಗಿಲು ತಟ್ಟುತ್ತಿರಬಹುದು. ವಿಜ್ಞಾನಿಗಳು ಇದು ಸಾರ್ವಜನಿಕರನ್ನು ಆಕರ್ಷಿಸಲು ಅಥವಾ ಅವರನ್ನು ದಾರಿ ತಪ್ಪಿಸುವ, ತಪ್ಪನ್ನು ವೈಭವೀಕರಿಸುವ ಪ್ರಕ್ರಿಯೆ ಎಂದು ಟೀಕಿಸಿದ್ದಾರೆ. ಕೇವಲ ಕಣ್ಣಿಗೆ ಗೋಚರಿಸುವ ಲಕ್ಷಣಗಳನ್ನು ಮಾರ್ಪಡಿಸಿದರೆ ಅದನ್ನು ಮರುಸೃಷ್ಟಿಯೆನ್ನಲಾಗದು ಎನ್ನುತ್ತಾರೆ. ಅಮೆರಿಕದ ಪರಿಸರ ದೈತ್ಯತೋಳಗಳಿಲ್ಲದೇ ಹತ್ತು ಸಾವಿರ ವರ್ಷ ಸಾಗಿ ಬಹಳ ದೂರ ಬಂದಿದೆ. ಈಗ ಇವು ಮತ್ತೆ ಪ್ರಸ್ಥವಾದರೆ ಇರುವ ಕಂದುತೋಳಗಳಿಗೆ ಆಹಾರ ಕೊರತೆಯಾಗಬಹುದು. ಪ್ರಾಕೃತಿಕ ಅಸಮತೋಲನ ಉಂಟಾಗಬಹುದು. ಇಂಥ ಹೊಸ ಪ್ರಾಣಿಗಳು ಯಾವ ಬಗೆಯ ಕಾಯಿಲೆ ತರಬಲ್ಲವು ಹೇಳಲಾಗದು. ಯಾವ ಬಗೆಯಲ್ಲಿ ಮನುಷ್ಯ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತವೋ ಊಹಿಸಲಾಗದು.
ಇದನ್ನು ಸಮರ್ಥಿಸುವವರೂ ಇದ್ದಾರೆ. ದೈತ್ಯತೋಳಗಳು ಆಹಾರ ಸರಪಳಿಯಲ್ಲಿ ಬಹಳ ಮೇಲೆ ಇದಾವೆ. ‘ಅಪೆಕ್ಸ್ ಪ್ರಿಡೇಟರ್’ ಎನ್ನುತ್ತಾರೆ. ಅಮೆರಿಕದಲ್ಲಿ ಜಿಂಕೆಗಳ ಹಾವಳಿ ಜಾಸ್ತಿಯಿದೆ. ಅಲ್ಲಿ ಜಿಂಕೆಗಳನ್ನು ಕೊಂದರೆ ಬಹುಮಾನವನ್ನೇ ಕೊಡುವ ಸಂಪ್ರದಾಯವಿದೆ. ಹಾಗಾಗಿ ದೈತ್ಯತೋಳಗಳು ಬೇಕಲ್ಲದೇ ಈ ಹಾವಳಿ ತಪ್ಪಿಸಬಹುದು ಎಂಬುದು ಕೆಲವರ ಆಸೆ. ಮಾನವ ತನ್ನ ದುರಾಸೆಯಿಂದ ಪ್ರಕೃತಿಗೆ ವಿರುದ್ಧವಾಗಿ ಕೆಲವು ಪ್ರಾಣಿಗಳನ್ನು ಇಲ್ಲವಾಗಿಸಿದ್ದಾನೆ. ಅಂಧ ಪ್ರಾಣಿಗಳಿಗೆ ಮರು ಅವಕಾಶ ಕೊಡುವುದು ನಮ್ಮ ನೈತಿಕ ಹೊಣೆ ಅಂತ ಒಂದು ವಾದ. ಈ ವೈಜ್ಞಾನಿಕ ಸಾಧನೆ ಮುಂದೆ ಮನುಷ್ಯನ ಜೆನೆಟಿಕ್ ಎಂಜಿನಿಯರಿಂಗ್ಗೆ ಹೇಗೆಲ್ಲಾ ಸಹಾಯವಾಗಬಹುದು ಎಂಬುದು ಕೆಲವರ ಆಸೆ.
ಏನಿದ್ದರೂ ಈ ಹೊಸ ಬೆಳವಣಿಗೆ ತೊಂಬತ್ತರ ದಶಕದ ವಿದ್ಯಾರ್ಥಿಗಳಿಗೆ ಡಾಲಿ ಕುರಿಯನ್ನು ನೆನಪಿಸಿದೆ.
