ಕನ್ನಡದಲ್ಲಿ ಕಂಪ್ಯೂಟರ್ ಜಗತ್ತಿನ ಕುರಿತು ಬರೆಯುವವರು ಇದ್ದಾರಾದರೂ, ಕತೆಗಾರರೊಬ್ಬರು ಬರೆಯುವುದು ಅಪರೂಪ. ಆ ಕಾರಣದಿಂದ ಈ ಕೃತಿಯ ಲೇಖನಗಳಿಗೆ ಓದಿಸಿಕೊಳ್ಳುವ ಗುಣ ದಕ್ಕಿದೆ. ರೂಪಕದ ಭಾಷೆಯನ್ನು ಬಳಸಿಕೊಂಡು ಮಧು ವೈ ಎನ್ ಅವರು ಅತ್ಯಂತ ಕ್ಷಿಷ್ಟ ಇಂಟರ್‌ನೆಟ್ ಸಂಗತಿಗಳನ್ನೂ ಸರಳವಾಗಿ ಹೇಳಿದ್ದಾರೆ. ಈ ಕೃತಿ ಟೆಕ್ನಿಕಲ್ ಪುಸ್ತಕದಂತೆ ಇಲ್ಲವೆನ್ನುವುದೇ ಇದರ ಹೆಗ್ಗಳಿಕೆ. ಭಾಷೆಯನ್ನು ಶುಷ್ಕಗೊಳಿಸದೆ ಚೇತೋಹಾರಿಯಾಗಿ ಬಳಸಿರುವುದು ಈ ಕೃತಿಯ ವಿಶೇಷ. ಇದು ಕಂಪ್ಯೂಟರ್ ಜಗತ್ತು ಅರಿತವರಿಗೆ ಮತ್ತು ಅರಿಯದವರಿಗೆ ಸಹಾಯಕಾರಿಯಾಗಿದೆ.

ಕತೆ-ಕವಿತೆ ಬರೆಯುವವರು ನಿರಂತರವಾಗಿ ಮಾಹಿತಿ ನೀಡುವ ಪುಸ್ತಕ ಬರೆಯಲಾರರು. ಅದು ಸುಸ್ತು ಹೊಡೆಸುತ್ತದೆ. ಆದರೆ ಆಗೊಮ್ಮೆ ಈಗೊಮ್ಮೆ ಮಧು ಅವರು ಇಂತಹ ಪುಸ್ತಕಗಳನ್ನು ಬರೆಯುತ್ತಿರಲಿ.

ವಸುಧೇಂದ್ರ

Clarice Turner

★★★★★